ಹಾವೇರಿ | ಕತ್ತು ಸೀಳಿ ಡ್ಯಾನ್ಸ್ ಮಾಸ್ಟರ್ ಬರ್ಬರ ಹತ್ಯೆ – ಲಾಂಗ್‌ಡ್ರೈವ್ ಹೋಗಿ ಬರುತ್ತೇನೆ ಅಂದಾತ ಶವವಾಗಿ ಪತ್ತೆ

Public TV
1 Min Read

ಹಾವೇರಿ: ಹೆದ್ದಾರಿಯಲ್ಲಿ ಕತ್ತು ಸೀಳಿ ಡ್ಯಾನ್ಸ್ ಮಾಸ್ಟರ್‌ನನ್ನು (Dance Master) ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾವೇರಿ (Haveri) ಜಿಲ್ಲೆ ಮೊಟೆಬೆನ್ನೂರು ಬಳಿಯ ಎನ್‌ಹೆಚ್ 48 ಫ್ಲೈಓವರ್ ಮೇಲೆ ನಡೆದಿದೆ.

ಚಿತ್ರದುರ್ಗ (Chitradurga) ಮೂಲದ ಲಿಂಗೇಶ್ ಹತ್ಯೆಯಾದ ಡ್ಯಾನ್ಸ್ ಮಾಸ್ಟರ್ ಎಂದು ಗುರುತಿಸಲಾಗಿದೆ. ಅವರು ಚಿತ್ರದುರ್ಗದಲ್ಲಿ ಡ್ಯಾನ್ಸ್ ಕ್ಲಾಸ್ ನಡೆಸ್ತಿದ್ದರು. ಮೃತ ಲಿಂಗೇಶ್ ಭಾನುವಾರ ಲಾಂಗ್ ಡ್ರೈವ್ ಹೋಗಿ ಬರೋದಾಗಿ ತನ್ನ ಕುಟುಂಬಸ್ಥರಿಗೆ ಹೇಳಿದ್ದ. ಬಳಿಕ ಆತ ಹುಬ್ಬಳ್ಳಿಗೆ ಬಂದಿದ್ದ. ರಾತ್ರಿ ಊಟಕ್ಕೆ ಮನೆಗೆ ಬಾ ಅಂತ ತಾಯಿ ಫೋನ್ ಮಾಡಿದಾಗ ಬರ್ತೀನಮ್ಮ ಅಂತ ಹೇಳಿ ಫೋನ್ ಇಟ್ಟಿದ್ದ ಎನ್ನಲಾಗಿದೆ. ಇದನ್ನೂ ಓದಿ: ದಸರಾ ಉದ್ಘಾಟಿಸುವ ಮುನ್ನ ಭಾನು ಮುಷ್ತಾಕ್ ತಾಯಿ ಭುವನೇಶ್ವರಿ, ಚಾಮುಂಡೇಶ್ವರಿ ಬಗೆಗಿನ ಗೌರವ ಸ್ಪಷ್ಟಪಡಿಸಬೇಕು: ಯದುವೀರ್‌

ಇದೀಗ ಲಿಂಗೇಶ್‌ನನ್ನು ದುಷ್ಕರ್ಮಿಗಳು ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಶವದ ಬಳಿ ಆತ ತಂದಿದ್ದ ಡ್ಯೂಕ್ ಬೈಕ್, ವಾಟರ್ ಬಾಟಲ್, ಸಿಗರೇಟ್ ಪ್ಯಾಕ್ ಪತ್ತೆಯಾಗಿದೆ. ಅಲ್ಲದೇ ಸಣ್ಣ ಚಾಕು ಕೂಡಾ ಪತ್ತೆಯಾಗಿದ್ದು, ಹಂತಕರು ಲಿಂಗೇಶ್‌ನನ್ನು ಹತ್ಯೆ ಮಾಡಿ, ಚಾಕು ಅಲ್ಲೇ ಬಿಸಾಕಿ ಹೋಗಿರೋ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಕೊಹ್ಲಿಯಿಂದ ಫೋಟೋಗೆ ಲೈಕ್ ಗಿಟ್ಟಿಸಿಕೊಂಡ ಹಾಲ್ಗೆನ್ನೆ ಬ್ಯೂಟಿಯ ಫಸ್ಟ್ ರಿಯಾಕ್ಷನ್

ಘಟನಾ ಸ್ಥಳಕ್ಕೆ ಹಾವೇರಿ ಎಸ್ಪಿ ಯಶೋದಾ ವಂಟಗೋಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ತನಿಖೆಯ ಬಳಿಕವೇ ಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ.

Share This Article