ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ವಿಚಾರ – ಪರಮೇಶ್ವರ್‌ಗೆ ಸಿಎಂ ಸ್ಥಾನಕ್ಕೆ ದಲಿತ ನಾಯಕರ ಪಟ್ಟು

By
1 Min Read

ಕೋಲಾರ : ಕರ್ನಾಟಕದಲ್ಲಿ (Karnataka) ಬಹುಮತದಿಂದ ಕಾಂಗ್ರೆಸ್ (Congress) ಗದ್ದುಗೆ ಏರಿದ್ದು, ಸಿಎಂ ಸ್ಥಾನಕ್ಕೆ ಈಗ ಪೈಪೋಟಿ ಶುರುವಾಗಿದೆ. ಒಂದೆಡೆ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (D.K Shivakumar) ರೇಸ್‍ನಲ್ಲಿ ಇದ್ದರೆ, ಇದೀಗ ಜಿ. ಪರಮೇಶ್ವರ್ (G Parameshwara) ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದ್ದಾರೆ.

ಕಳೆದ 70 ವರ್ಷಗಳಿಂದ ಪರಿಶಿಷ್ಟ ಜನಾಂಗ ಕಾಂಗ್ರೆಸ್ ಜೊತೆಗಿದೆ. ಅದಕ್ಕಾಗಿ ಪರಿಶಿಷ್ಟರ ಮುಖಂಡರಿಗೆ ಸಿಎಂ ಸ್ಥಾನ ನೀಡಬೇಕು. ಅದಕ್ಕೆ ಸೂಕ್ತ ವ್ಯಕ್ತಿ ಪರಮೇಶ್ವರ್ ಆಗಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ರೀನಿವಾಸಪುರದ ಶ್ರೀನಿವಾಸನ್ ಹೇಳಿದ್ದಾರೆ. ಇದನ್ನೂ ಓದಿ: 135 ಶಾಸಕರು ನಮ್ಮವರೇ, ಹೈಕಮಾಂಡ್ ಪಾದಕ್ಕೆ ಹಾಕಿದ್ದೀವಿ: ಡಿಕೆ ಶಿವಕುಮಾರ್

ಭಾರತೀಯ ಬಹುಜನ ಸೇವಾ ಸಮಿತಿಯ ಮುಖಂಡರು ಈ ಬಗ್ಗೆ ಸಭೆ ನಡೆಸಿದ್ದು, ಪರಮೇಶ್ವರ್ ಅವರು 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅಲ್ಲದೆ ಕಾಂಗ್ರೆಸ್‍ನ ಹಿರಿಯ ಮುಖಂಡರಾಗಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ಸಿಗಬೇಕಾದರೆ ಸಿಎಂ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಾವ್‌ ವಿದ್ಯುತ್‌ ಬಿಲ್‌ ಕಟ್ಟಲ್ಲ – ಬೆಸ್ಕಾಂ ಮೀಟರ್‌ ರೀಡರ್‌ಗೆ ಗ್ರಾಮಸ್ಥರ ಆವಾಜ್‌

Share This Article