ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ದಲಿತ IAS, IPS ಅಧಿಕಾರಿಗಳಿಗೆ ಅನ್ಯಾಯ ಆಗ್ತಿದೆ. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ದಲಿತ ಸಮುದಾಯಕ್ಕೆ ಅನ್ಯಾಯ ಮಾಡ್ತಿದ್ದಾರೆ ಅಂತ ಮಾಜಿ ಶಾಸಕ ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಅನ್ನದಾನಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನ್ನದಾನಿ, ರಾಜ್ಯದಲ್ಲಿ ಅಹಿಂದ ಸರ್ಕಾರ ನಡೆಯುತ್ತಿದೆ ಅಂತ ಸಿದ್ದರಾಮಯ್ಯ ಹೇಳ್ತಿದ್ದಾರೆ. ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಮಾಡ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿ 7 ವರ್ಷ ಕಳೆದಿದೆ. 7 ವರ್ಷಗಳಲ್ಲಿ ಅಹಿಂದ ಸಮಾಜಕ್ಕೆ ಕೊಟ್ಟ ಕೊಡುಗೆ ಶೂನ್ಯ. ಯಾವುದೇ ಸಮಾಜಕ್ಕೆ ಇತಿಹಾಸದಲ್ಲಿ ಉಳಿಯೋ ಯೋಜನೆ ಕೊಡದೇ ಇರೋ ಇತಿಹಾಸ ಸಿದ್ದರಾಮಯ್ಯಗೆ. ದೇವರಾಜ್ ಅರಸ್ ಅವರನ್ನು ಅವಧಿ ಹಿಂದಿಕ್ಕಬೇಕು ಅಂತ ಅಧಿಕಾರ ಸಿದ್ದರಾಮಯ್ಯ ಮಾಡ್ತಿದ್ದಾರೆ. ಸಿದ್ದರಾಮಯ್ಯ ಮುಂದುವರೆಯಲಿ ನಮ್ಮದೇನು ತಕರಾರು ಇಲ್ಲ. ದಲಿತ ಸಮುದಾಯಕ್ಕೆ ಏನ್ ಕೊಟ್ಟಿದ್ದೀರಾ. ದಲಿತರ ಹಕ್ಕು ಸಿದ್ದರಾಮಯ್ಯ ಕಸಿಯುತ್ತಿದ್ದಾರೆ ಎಂದು ಕಿಡಿಕಾರಿದರು.
ದಲಿತರಿಗೆ ಅನುಕೂಲ ಆಗೋ ಒಂದೇ ಒಂದು ಯೋಜನೆ ಸಿದ್ದರಾಮಯ್ಯ ಕೊಟ್ಟಿಲ್ಲ. ಕುಮಾರಸ್ವಾಮಿ ದಲಿತರ ಮನೆಯಲ್ಲಿ ವಾಸ ಮಾಡಿ ದಲಿತರ ಪರ ಯೋಜನೆ ಕೊಟ್ಟರು. ಕುಮಾರಸ್ವಾಮಿ ಬರೋ ಮುಂಚೆ ನಾಯಿ-ನರಿ ಓಡಾಡದೇ ಇರೋ ರೀತಿ ದಲಿತರ ಜಾಗ ಇತ್ತು. ದಲಿತರ ಕೇರಿಗಳು ಅಚ್ಚುಕಟ್ಟಾಗಲು ಕುಮಾರಸ್ವಾಮಿ ಅವರ ಕಾರ್ಯಕ್ರಮದಿಂದ. ದಲಿತರು ಸೇರಿ ಎಲ್ಲಾ ವರ್ಗದ ಜನ ಸಿದ್ದರಾಮಯ್ಯಗೆ ಅಧಿಕಾರ ಕೊಟ್ಟರು. ನಮ್ಮ ದಲಿತರ ವೋಟ್ ಹೆಚ್ಚಾಗಿ ಸಿದ್ದರಾಮಯ್ಯಗೆ ಕೊಟ್ಟರು. ಬಹುತೇಕ ಎಲ್ಲಾ ದಲಿತ ಕ್ಷೇತ್ರಗಳು ಸಿದ್ದರಾಮಯ್ಯಗೆ, ಕಾಂಗ್ರೆಸ್‌ಗೆ ಮತ ಹಾಕಿದ್ರು. ಆದರೆ, ಸಿದ್ದರಾಮಯ್ಯ ದಲಿತರಿಗೆ ಅನ್ಯಾಯ ಮಾಡಿದ್ದಾರ ಅಂತ ಕಿಡಿಕಾರಿದರು.
ಈ ಸರ್ಕಾರದಲ್ಲಿ IAS, IPS, ಎ ಗ್ರೇಡ್ ದಲಿತ ಅಧಿಕಾರಿಗಳಿಗೆ ಅನ್ಯಾಯ ಆಗ್ತಿದೆ. ಇದಕ್ಕೆ ದಲಿತ ಮಂತ್ರಿಗಳು ಉತ್ತರ ಕೊಡಬೇಕು. ಈ ಸರ್ಕಾರದಲ್ಲಿ IAS, IPS, KAS ದಲಿತರು ಆಯಕಟ್ಟಿನ ಜಾಗದಲ್ಲಿ ಇಲ್ಲ. ವಿಧಾನಸೌಧ, ಡಿಸಿ, ಎಸ್ಪಿ ಜಾಗದಲ್ಲಿ ಯಾರು ದಲಿತರು ಇದ್ದಾರೆ. ಸಿದ್ದರಾಮಯ್ಯ ಇದರ ಬಗ್ಗೆ ಲೆಕ್ಕಪತ್ರ ಹೊರಡಿಸಲಿ. ನಮ್ಮ ಜನರನ್ನ ಉಪಯೋಗ ಮಾಡಿಕೊಂಡು ನಮ್ಮ ಜನರಿಗೆ ಅನ್ಯಾಯ ಮಾಡ್ತಿದ್ದೀರಾ ಸಿದ್ದರಾಮಯ್ಯ ಅವರೇ ಅಂತ ಪ್ರಶ್ನೆ ಮಾಡಿದರು.
ರಾಹುಲ್ ಗಾಂಧಿ, ಸುರ್ಜೇವಾಲ 2023 ರಲ್ಲಿ ದಲಿತರ ಪರ ನಾವು ಇರುತ್ತೇವೆ ಅಂದರು. ಅಧಿಕಾರಕ್ಕೆ ಬಂದು ಈಗ ದಲಿತ ವಿರೋಧಿ ಆಗಿದ್ದೀರಾ. ಇದು ದಲಿತ ವಿರೋಧಿ ಸರ್ಕಾರ. ಬೇಕಾದವರಿಗೆ ಎರಡೆರಡು ಹುದ್ದೆ. ಕೊಟ್ಟವರಿಗೆ ಪದೇ ಪದೇ ಹುದ್ದೆ ಕೊಡೋ ಕೆಲಸ ಸಿದ್ದರಾಮಯ್ಯ ಮಾಡ್ತಿದ್ದಾರೆ. ಅಧಿಕಾರ ಮದದಲ್ಲಿ ನೀವು ಮರೆತು ಹೋಗಿರಬಹುದು. ಬಿಜೆಪಿ ಇದ್ದಾಗ ಅನೇಕ ಜಿಲ್ಲೆಗಳಿಗೆ ದಲಿತರನ್ನ ಡಿಸಿಗಳಾಗಿ ಮಾಡಿದ್ರು. ದಲಿತರಿಗೆ ಜಿಲ್ಲಾ ನಿಭಾಯಿಸೋ ಶಕ್ತಿ ಇಲ್ಲವಾ ಸಿದ್ದರಾಮಯ್ಯ ಅವರೇ. ACS, DC, SP ಹುದ್ದೆ ನಿಭಾಯಿಸೋ ಶಕ್ತಿ ದಲಿತರಿಗೆ ಇಲ್ಲ. ನೀವು ದಲಿತರ ರಕ್ಷಣೆ ಮಾಡ್ತೀರಾ. ದಲಿತರಿಗೆ ನೀವು ಮೋಸ ಮಾಡ್ತಿದ್ದೀರಾ ಅಂತ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ ಅಧಿಕಾರಿಗಳಿಗೂ ಅನ್ಯಾಯ ಆಗ್ತಿದೆ. ಸಿದ್ದರಾಮಯ್ಯ ಅವರೇ ಸ್ವಜನ ಪಕ್ಷಪಾತ ಬೇಡ. ಎಲ್ಲಾ ಸಮುದಾಯಕ್ಕೆ ಹುದ್ದೆಗಳನ್ನು ಸಮಾನವಾಗಿ ಕೊಡಿ. ದಲಿತರಿಗೂ ACS ಹುದ್ದೆ ಕೊಡಿ. ಹೇಳೋವಾಗ ದಲಿತ ಪರ. ಮಾಡೋವಾಗ ದಲಿತರಿಗೆ ಮೋಸ ಮಾಡೋದು. ದಲಿತ ಅಧಿಕಾರಿಗಳು ಅಸಮರ್ಥರಾ? ಹೊರ ರಾಜ್ಯದ ದಲಿತ ಅಧಿಕಾರಿಗಳಿಗೆ ಹುದ್ದೆ ಕೊಟ್ಟು ನಿಮ್ಮ ಸಮುದಾಯಕ್ಕೆ ಕೊಟ್ಡಿದ್ದೇನೆ ಅಂತೀರಾ. ನಿಮಗೆ ಮುಂದೆ ಸಹಕಾರ ಬೇಕಾದ್ರೆ ದಲಿತರ ಪರ ಕೆಲಸ ಮಾಡಿ. ಈಗಾಗಲೇ ನಿಮಗೆ ಸಹಕಾರ ಕಳೆದು ಹೋಗಿದೆ. ಸಿದ್ದರಾಮಯ್ಯ ಜೆಡಿಎಸ್ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಈಗಲೂ ನಮ್ಮ ಮಾತು ಸಿದ್ದರಾಮಯ್ಯ ಕೇಳೋದಿಲ್ಲ. ದಲಿತರಿಗೆ ಆಗಿರೋ ಅನ್ಯಾಯ ಸರಿ ಮಾಡಿ. ಇಲ್ಲ ಅಂದರೆ ಸಿದ್ದರಾಮಯ್ಯ ಅವರನ್ನೇ ದಲಿತರು ಸರಿ ಮಾಡ್ತಾರೆ ಅಂತ ಎಚ್ಚರಿಕೆ ಕೊಟ್ಟರು.
ದಲಿತ ಸಚಿವರು ಸಿಎಂ ಬಳಿ ಹೋಗಿ ನಮ್ಮ ಸಮುದಾಯ ಅನ್ಯಾಯದ ಬಗ್ಗೆ ಮಾತಾಡಿ. ಪರಮೇಶ್ವರ್ ಸೇರಿದಂತೆ ದಲಿತ ಸಚಿವರಿಗೆ IAS, IPS ಕೂಗು ಕೇಳುತ್ತಿಲ್ಲವಾ? ಈ ಅನ್ಯಾಯದ ಬಗ್ಗೆ ಮಾತಾಡಿ ಅಂತ ಸಚಿವರ ವಿರುದ್ಧವೂ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನಲ್ಲಿ ದಲಿತ ಶಾಸಕರು, ಮಂತ್ರಿಗಳು ಮಾತಾಡದೇ ಇರೋ ಸ್ಥಿತಿ ನಿರ್ಮಾಣ ಆಗಿದೆ ಅಂತ ಮಾಜಿ ಶಾಸಕ ಜೆಡಿಎಸ್ ಪರಿಶಿಷ್ಟ ಜಾತಿ ಘಟದ ಅಧ್ಯಕ್ಷ ಅನ್ನದಾನಿ ಸರ್ಕಾರ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದಲ್ಲಿ ದಲಿತ ಶಾಸಕರಿಗೂ, ಮಂತ್ರಿಗಳಿಗೂ ಕಷ್ಟ ಆಗ್ತಿದೆ. ಇದನ್ನ ಹೇಳಿಕೊಳ್ಳಲು ಆಗ್ತಿಲ್ಲ. ಅಂಬೇಡ್ಕರ್ ಅವರಿಗೆ ಕಷ್ಟ ಕೊಟ್ಟ ಪಕ್ಷ ಕಾಂಗ್ರೆಸ್. ಅಂಬೇಡ್ಕರ್ ಅವರನ್ನು ಸೋಲಿಸಿದ ಪಕ್ಷ ಕಾಂಗ್ರೆಸ್. ಕಾಂಗ್ರೆಸ್‌ನಲ್ಲಿ ಭಯದ ವಾತಾವರಣದಲ್ಲಿ ಶಾಸಕರು, ಸಚಿವರು ಕೆಲಸ ಮಾಡ್ತಿದ್ದಾರೆ. ದಲಿತರ ಮೇಲಿನ ಅನ್ಯಾಯವನ್ನ ಸಿದ್ದರಾಮಯ್ಯ ಅವರು ನೋಡಿಯೂ ನೋಡದಂತೆ ಇದ್ದಾರೆ. ಸಚಿವರು ಮಾತಾಡಿದ್ರೆ ಸಚಿವ ಸ್ಥಾನ ಹೋಗುತ್ತದೆ ಅನ್ನೋ ಭಯ. ಶಾಸಕರಿಗೆ ಮುಂದೆ ಟಿಕೆಟ್ ಕೊಡದೇ ಇರ್ತಾರೆ ಅನ್ನೋ ಭಯ. ಹೀಗಾಗಿ, ಯಾರು ಮಾತಾಡುತ್ತಿಲ್ಲ. ಮುಂದೊಂದು ದಿನ ಇದು ಸ್ಫೋಟ ಆಗುತ್ತದೆ. ಅವರು ಹೇಳಿಲ್ಲ ಅಂದರೆ ನಾವೇ ಮುಂದೆ ಕಾಂಗ್ರೆಸ್‌ನಲ್ಲಿ ದಲಿತ ಶಾಸಕರು, ಮಂತ್ರಿಗಳಿಗೆ ತೊಂದರೆ ಆಗ್ತಿದೆ ಅಂತ ಹೇಳೋಣ ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.