ಪಾಕ್ ಜೈಲಿನಲ್ಲಿ ಕೊಲ್ಲಲ್ಪಟ್ಟ ಸರಬ್ಜಿತ್ ಸಹೋದರಿ ದಲ್ಬೀರ್ ಕೌರ್ ನಿಧನ

Public TV
2 Min Read

ಚಂಡೀಗಢ: ಗೂಢಚಾರಿಕೆ ನಡೆಸಿದ ಆರೋಪದಡಿ ಬಂಧನಕ್ಕೊಳಗಾಗಿ ಪಾಕಿಸ್ತಾನದ ಜೈಲಿನಲ್ಲಿ ಮೃತಪಟ್ಟಿದ್ದ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ಶನಿವಾರ ತಡರಾತ್ರಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.

ದಲ್ಬೀರ್ ಕೌರ್ ಅವರ ಅಂತ್ಯ ಕ್ರಿಯೆಯನ್ನು ಪಂಜಾಬ್‍ನ ಭಿಖಿವಿಂಡ್ ಗ್ರಾಮದಲ್ಲಿ ಇಂದು ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಭಾರತ -ಪಾಕಿಸ್ತಾನ ಗಡಿಯ ಸಮೀಪವಿರುವ ಪಂಜಾಬ್‍ನ ಭಿಖಿವಿಂಡ್ ಗ್ರಾಮದ ರೈತರಾಗಿದ್ದ ಸರಬ್ಜಿತ್ ಸಿಂಗ್ ತಿಳಿಯದೆ ಪಾಕ್ ಗಡಿ ಪ್ರವೇಶಿಸಿದ್ದರು. ಹೀಗಾಗಿ ಅವರನ್ನು ಭದ್ರತಾ ಸಿಬಂದಿ ಬಂಧಿಸಿದ್ದರು. ಪ್ರಕರಣ ಕುರಿತು ವಿಚಾರಣೆ ನಡೆಸಿದ ಪಾಕ್‍ನ ಲಾಹೋರ್ ನ್ಯಾಯಾಲಯ 1991ರಲ್ಲಿ ಭಯೋತ್ಪಾದನೆ ಮತ್ತು ಗೂಢಚಾರಿಕೆ ಪ್ರಕರಣದಡಿ ಸರಬ್ಜಿತ್ ಸಿಂಗ್‍ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನೂ ಓದಿ:  ನಿಮಗೆ ತಾಕತ್ ಇದ್ರೆ ಚುನಾವಣೆಗೆ ಬನ್ನಿ: ರೆಬೆಲ್ ಶಾಸಕರಿಗೆ ಸವಾಲೆಸೆದ ಆದಿತ್ಯ ಠಾಕ್ರೆ

22 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದ ಸರಬ್ಜಿತ್ ಸಿಂಗ್ ಮೇಲೆ 2013ರಲ್ಲಿ ಜೈಲಿನ ಕೈದಿಗಳು ಹಲ್ಲೆ ನಡೆಸಿದ್ದರು. ಬಳಿಕ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಘಟನೆ ವೇಳೆ ಅವರ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಐದು ದಿನಗಳ ಕಾಲ ಕೋಮಾದಲ್ಲಿದ್ದ ಸರಬ್ಜಿತ್ ಅವರು ನಂತರ ಚಿಕಿತ್ಸೆ ಫಲಕಾರಿಯಗದೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.

22 ವರ್ಷಗಳ ಸುದೀರ್ಘ ಜೈಲಿನಲ್ಲಿದ್ದ ಸರಬ್ಜಿತ್ ಸಿಂಗ್ ಅವರನ್ನು ಬಿಡುಗಡೆಗೊಳಿಸಲು ಅಕ್ಕ ದಲ್ಬೀರ್ ಕೌರ್ ಬಹಳಷ್ಟು ಕಾನೂನು ಹೋರಾಟ ನಡೆಸಿದ್ದರು. ಅವರ ಸಹೋದರ ನಿರಾಪರಾಧಿ ಎಂದು ಯಾವಾಗಲೂ ಹೇಳುತ್ತಿದ್ದರು. ಸರಬ್ಜಿತ್ ಬಂಧನಕ್ಕೊಳಪಡಿಸಿದಾಗ ಅವರನ್ನು ನೋಡಲು ಪಾಕಿಸ್ತಾನಕ್ಕೆ ಹೋಗಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮುಂದುವರಿದ ರಾಜಕೀಯ ಬಿಕ್ಕಟ್ಟು – ಶಿಂಧೆ, ಫಡ್ನವೀಸ್ ಭೇಟಿ ಸರ್ಕಾರ ರಚನೆ ಚರ್ಚೆ

ಸರಬ್ಜಿತ್ ಸಿಂಗ್ ಸಾವಿನ ಬಗ್ಗೆ ತನಿಖೆ ನಡೆಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಕಿಸ್ತಾನ ಸರ್ಕಾರವನ್ನು ತಿಳಿಸಿತ್ತು. ಈ ವೇಳೆ ದಲ್ಬೀರ್ ಕೌರ್ ಕೂಡ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಧ್ವನಿ ಎತ್ತಿದ್ದರು. ನಂತರ ಈ ದಾಳಿಯನ್ನು ಸರ್ಕಾರವೇ ಪೂರ್ವ ನಿಯೋಜಿಸಿದ್ದರೆ, ತನಿಖೆ ನಡೆಸುವ ಅಗತ್ಯವಿಲ್ಲ. ಒಂದು ವೇಳೆ ಈ ಘಟನೆ ಬಗ್ಗೆ ನಿಜವಾಗಿಯೂ ಅಧಿಕಾರಿಗಳಿಗೆ ತಿಳಿದಿಲ್ಲ ಎಂದರೆ ಖಂಡಿತವಾಗಿಯೂ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದರು.

Live Tv

Share This Article
Leave a Comment

Leave a Reply

Your email address will not be published. Required fields are marked *