ದೈವಾರಾಧನೆ ಪ್ರದರ್ಶನದ ವಸ್ತು ಅಲ್ಲ: ಅಧಿವೇಶನದಲ್ಲಿ ಗುಡುಗಿದ ಸುನೀಲ್‌ ಕುಮಾರ್‌

Public TV
1 Min Read

ಬೆಂಗಳೂರು: ವಿಧಾನಸಭೆಯ ಅಧಿವೇಶನದಲ್ಲೂ (Assembly Session) ದೈವಾರಾಧನೆ (Daivaradhane) ವಿಚಾರ ಸದ್ದು ಮಾಡಿದೆ. ಪ್ರತಿಭಾ ಕಾರಂಜಿಯಲ್ಲಿ ದೈವಾರಾಧನೆ, ಕೋಲ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದ ಶಿಕ್ಷಣ ಇಲಾಖೆ ವಿರುದ್ಧ ಶಾಸಕ ಸುನೀಲ್‌ ಕುಮಾರ್‌ (Sunil Kumar) ಗರಂ ಆದರು.

ಅಧಿವೇಶನದ ಶೂನ್ಯ ವೇಳೆಯಲ್ಲಿ ದೈವಾರಾಧನೆ ಬಗ್ಗೆ ಪ್ರಸ್ತಾಪಿಸಿದ ಸುನೀಲ್‌ ಕುಮಾರ್‌, ದಕ್ಷಿಣ ಕನ್ನಡ ಸೇರಿದಂತೆ ಮೂರ್ನಾಲ್ಕು ಜಿಲ್ಲೆಗಳಲ್ಲಿ ದೈವಾರಾಧನೆ ಪದ್ಧತಿ ಇದೆ. ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿಯಲ್ಲಿ ದೈವಾರಾಧನೆ, ಕೋಲ ಪ್ರದರ್ಶನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಜನಪದ ನೃತ್ಯಗಳ ಜೊತೆಗೆ ದೈವಾರಾಧನೆ ಕೂಡ ಸೇರಿಸಲಾಗಿದೆ. ದೈವಾರಾಧನೆ ಪ್ರದರ್ಶನದ ವಸ್ತು ಅಲ್ಲ ಎಂದು ಗುಡುಗಿದರು. ಇದನ್ನೂ ಓದಿ: ನನ್ನ ಕನ್ನಡ ಹೆಚ್ಚು ಕಡಿಮೆ ಇರ್ಬೋದು, ಆದ್ರೆ ಪ್ರೀತಿಯ ಭಾಷೆ: ಖಾದರ್

ಶಿಕ್ಷಣ ಇಲಾಖೆ ಕೂಡಲೇ ಈ ಆದೇಶದಲ್ಲಿ ದೈವಾರಾಧನೆ, ಕೋಲ ಕೈಬಿಡಬೇಕು ಎಂದು ಒತ್ತಾಯ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa), ಆದೇಶದಲ್ಲಿ ಬದಲಾವಣೆ ಮಾಡುವುದಾಗಿ ಭರವಸೆ ನೀಡಿದರು.

ದೈವಾರಾಧನೆಯು ತುಳುನಾಡಿನ ಆರಾಧನೆಯಲ್ಲಿ ಪ್ರಮುಖವಾದದ್ದು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ದೈವಾರಾಧನೆ ಸಂಪ್ರದಾಯ ಆಚರಣೆಯಲ್ಲಿದೆ. ರಿಷಬ್‌ ಶೆಟ್ಟಿಯ ‘ಕಾಂತಾರ’ ಸಿನಿಮಾ ಬಂದ ನಂತರ ದೈವಾರಾಧನೆ ಸಂಸ್ಕೃತಿ ದೇಶ-ವಿದೇಶಗಳಲ್ಲಿ ಹೆಚ್ಚು ಚಿರಪರಿಚಿತವಾಯಿತು. ಇದನ್ನೂ ಓದಿ: ಕುಮಾರಸ್ವಾಮಿ ಯಾವತ್ತೂ ಹಿಟ್‌ & ರನ್ ಕೇಸ್‌ – ಸಿಎಂ ತಿರುಗೇಟು

ಸಿನಿಮಾದಿಂದ ಪ್ರೇರೇಪಿತರಾದ ಅನೇಕರು ದೈವಾರಾಧನೆಯನ್ನು ಅನುಕರಿಸಲು ಶುರು ಮಾಡಿದ್ದರು. ಕೆಲವರು ಇದನ್ನೇ ಧಂದೆ ಮಾಡಿಕೊಂಡಿದ್ದರು. ದೈವಾರಾಧನೆ ಮಹತ್ವದ ಬಗ್ಗೆ ತಿಳಿಸಿದ ಬಳಿಕ ಅನುಕರಣೆ, ಧಂದೆ ನಿಯಂತ್ರಣಕ್ಕೆ ಬಂತು. ಆದರೂ ಒಂದಲ್ಲಾ ಒಂದು ವಿಚಾರವಾಗಿ ದೈವಾರಾಧನೆ ಸುದ್ದಿಯಾಗುತ್ತಲೇ ಇದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್