ದಿನಭವಿಷ್ಯ: 22-12-2018

Public TV
2 Min Read

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಪೌರ್ಣಿಮೆ,
ಶನಿವಾರ, ಮೃಗಶಿರ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:30 ರಿಂದ 10:56
ಗುಳಿಕಕಾಲ: ಬೆಳಗ್ಗೆ 6:39 ರಿಂದ 08:04
ಯಮಗಂಡಕಾಲ: ಮಧ್ಯಾಹ್ನ 1:47 ರಿಂದ 3:13

ಮೇಷ: ಸ್ಥಿರಾಸ್ತಿ ವಿಚಾರಗಳಲ್ಲಿ ಅಡೆತಡೆ, ಮಕ್ಕಳೊಂದಿಗೆ ಕಲಹ, ತಲೆ ನೋವು, ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು.

ವೃಷಭ: ಬಂಧುಗಳಿಂದ ಆರ್ಥಿಕ ಸಹಾಯ, ಭೂ ವಿಚಾರದಲ್ಲಿ ವಾಗ್ವಾದ, ಕುಟುಂಬದಲ್ಲಿ ವೈಮನಸ್ಸು, ಸಂಗಾತಿಯಲ್ಲಿ ಸೋಮಾರಿತನ, ಆತುರ ಸ್ವಭಾವದಿಂದ ತೊಂದರೆ, ಮಾನಸಿಕ ನೆಮ್ಮದಿಗೆ ಭಂಗ.

ಮಿಥುನ: ಸಾಲಗಾರರಿಂದ ಸಂಕಷ್ಟ, ಕಲಹವಾಗುವ ಸಾಧ್ಯತೆ, ಅನಗತ್ಯ ವಿಚಾರಗಳಲ್ಲಿ ವಾಗ್ವಾದ, ನೆರೆಹೊರೆಯವರಿಂದ ಕಿರಿಕಿರಿ, ಮಿತ್ರರಿಂದ ನಷ್ಟ.

ಕಟಕ: ಉದ್ಯೋಗ ನಿಮಿತ್ತ ಪ್ರಯಾಣ, ಅನಗತ್ಯ ಮಾತುಗಳಿಂದ ಕಲಹ, ಮಾತಿನಲ್ಲಿ ಹಿಡಿತ ಅಗತ್ಯ, ಸ್ವಯಂಕೃತ್ಯಗಳಿಂದ ಸಂಕಷ್ಟ, ಅವಕಾಶ ಕೈ ತಪ್ಪುವುದು.

ಸಿಂಹ: ದೂರ ಪ್ರದೇಶದಲ್ಲಿ ಉತ್ತಮ ಅವಕಾಶ, ಅದೃಷ್ಟ ಫಲಾಫಲ ಪ್ರಾಪ್ತಿ, ಸ್ಥಿರಾಸ್ತಿ ಸಾಲದಿಂದ ತೊಂದರೆ, ಪ್ರಯಾಣದಲ್ಲಿ ಕಿರಿಕಿರಿ, ಅಪಘಾತವಾಗುವ ಸಾಧ್ಯತೆ.

ಕನ್ಯಾ: ಆಕಸ್ಮಿಕ ಉದ್ಯೋಗ ನಷ್ಟ, ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಉದ್ಯಮಸ್ಥರಿಗೆ ಸಂಕಷ್ಟ, ಅಧಿಕಾರಿಗಳಿಂದ ತೊಂದರೆ, ರಿಯಲ್ ಎಸ್ಟೇಟ್‍ನವರಿಗೆ ರಾಜಯೋಗ.

ತುಲಾ: ವ್ಯವಹಾರ-ಉದ್ಯೋಗ ನಿಮಿತ್ತ ಪ್ರಯಾಣ, ದಾಂಪತ್ಯದಲ್ಲಿ ವೈಮನಸ್ಸು, ಕುಟುಂಬದಲ್ಲಿ ವಾಗ್ವಾದ, ಉದ್ಯೋಗ ಸ್ಥಳದಲ್ಲಿ ಕುತಂತ್ರ.

ವೃಶ್ಚಿಕ: ಪ್ರಯಾಣಕ್ಕೆ ಅಡೆತಡೆ, ಸಾಲಗಾರರಿಂದ ಮಾನಹಾನಿ, ದೀರ್ಘಕಾಲದ ರೋಗ ಬಾಧೆ, ಜೀವನದ ಬಗ್ಗೆ ಬೇಸರ.

ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಕಲಹ, ತಂದೆ-ಮಕ್ಕಳಲ್ಲಿ ಶತ್ರುತ್ವ, ಆಕಸ್ಮಿಕ ದೂರ ಪ್ರಯಾಣ, ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ.

ಮಕರ: ಭೂ ವ್ಯವಹಾರಗಳಲ್ಲಿ ನಷ್ಟ, ವಾಹನ ಚಾಲನೆಯಲ್ಲಿ ಎಚ್ಚರ, ಯಂತ್ರೋಪಕರಣಗಳಿಂದ ಸಮಸ್ಯೆ, ಮಿತ್ರರಿಂದ ಸಂಕಷ್ಟ, ಆರೋಗ್ಯದಲ್ಲಿ ಏರುಪೇರು.

ಕುಂಭ: ಹೆಣ್ಣು ಮಕ್ಕಳಿಂದ ಶತ್ರುತ್ವ, ಬಂಧುಗಳಿಂದ ಕಿರಿಕಿರಿ, ದಾಂಪತ್ಯದಲ್ಲಿ ವಿರಸ, ಮಕ್ಕಳ ಬಗ್ಗೆ ಅಧಿಕ ಚಿಂತೆ.

ಮೀನ: ಮಕ್ಕಳಿಗೆ ಭೂ ಯೋಗ, ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಉತ್ತಮ, ವಿಚ್ಛೇದನ ಕೇಸ್‍ಗಳಲ್ಲಿ ಜಯ, ಮಾನಸಿಕ ನೆಮ್ಮದಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *