ದಿನಭವಿಷ್ಯ: 16-03-2017

Public TV
2 Min Read

ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಗುರುವಾರ, ಸ್ವಾತಿ ನಕ್ಷತ್ರ

ಶುಭ ಘಳಿಗೆ: ಬೆಳಗ್ಗೆ 11:06 ರಿಂದ 12:36
ಅಶುಭ ಘಳಿಗೆ: ಬೆಳಗ್ಗೆ 8:06 ರಿಂದ 9:36

ರಾಹುಕಾಲ: ಮಧ್ಯಾಹ್ನ 2:02 ರಿಂದ 3:33
ಗುಳಿಕಕಾಲ: ಬೆಳಗ್ಗೆ 9:30 ರಿಂದ 11:01
ಯಮಗಂಡಕಾಲ: ಬೆಳಗ್ಗೆ 6:29 ರಿಂದ 7:59

ಮೇಷ: ಕೋರ್ಟ್-ಕೇಸ್‍ಗಳಲ್ಲಿ ಜಯ, ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ಪ್ರಯಾಣ ಮಾಡುವ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಸ್ನೇಹಿತರಿಂದ ವಿದ್ಯೆ ಭಂಗ.

ವೃಷಭ: ಸ್ವಯಂಕೃತ್ಯಗಳಿಂದ ತೊಂದರೆ, ಸಾಲದ ಸುಳಿಗೆ ಸಿಲುಕುವಿರಿ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಚಿಂತೆ.

ಮಿಥುನ: ಮಕ್ಕಳಿಂದ ಧನಾಗಮನ, ಜೂಜಾಟ-ದುಶ್ಚಟಗಳಿಗೆ ಮನಸ್ಸು, ಟ್ರಾವೆಲ್ಸ್‍ನವರಿಗೆ ಅನುಕೂಲ, ಕೃಷಿಕರಿಗೆ ಲಾಭ.

ಕಟಕ: ಸ್ಥಿರಾಸ್ತಿ ಖರೀದಿ ಯೋಗ, ಅನಗತ್ಯ ತೊಂದರೆಗೆ ಸಿಲುಕುವಿರಿ, ಭೂ ವ್ಯವಹಾರಗಳಲ್ಲಿ ಎಚ್ಚರಿಕೆ, ಆತ್ಮೀಯರಲ್ಲಿ ಮನಃಸ್ತಾಪ, ಅಜೀರ್ಣ ಸಮಸ್ಯೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

ಸಿಂಹ: ಮಾತಿನಲ್ಲಿ ಹಿಡಿತ ಅಗತ್ಯ, ಮಕ್ಕಳ ನಡವಳಿಕೆಗಳಿಂದ ಚಿಂತೆ, ಪ್ರೇಮ ವಿಚಾರದಲ್ಲಿ ತಗಾದೆ, ಕೋರ್ಟ್ ಕೇಸ್‍ಗಳಲ್ಲಿ ಸಮಸ್ಯೆ, ದೂರ ಪ್ರಯಾಣ.

ಕನ್ಯಾ: ಆರೋಗ್ಯದಲ್ಲಿ ಏರುಪೇರು, ಒಳ್ಳೆಯ ನಡವಳಿಕೆಯಿಂದ ನೋವು, ರಾಜಕೀಯ ವ್ಯಕ್ತಿಗಳಿಂದ ಸಹಕಾರ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ.

ತುಲಾ: ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ವಿಪರೀತ ಚಿಂತೆ, ಮಾಟ ಮಂತ್ರದ ಭೀತಿ, ಮಿತ್ರರು ಶತ್ರುವಾಗಿ ಪರಿವರ್ತನೆ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ.

ವೃಶ್ಚಿಕ: ಶತ್ರುಗಳ ಉಪಟಳ, ಕೆಲಸಗಾರರ ಕೊರತೆ, ಸಾಲ ಬಾಧೆ, ಸಂಬಂಧಿಕರಿಂದ ಮೋಸ, ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ, ಮಕ್ಕಳಿಂದ ಸಮಸ್ಯೆ, ಕೆಲಸಗಳಲ್ಲಿ ಹಿನ್ನಡೆ.

ಧನಸ್ಸು: ಅನಿರೀಕ್ಷಿತ ಅದೃಷ್ಟ, ಗೌರವ ಸನ್ಮಾನ ಪ್ರಾಪ್ತಿ, ದೇವತಾ ಕಾರ್ಯಗಳಲ್ಲಿ ಭಾಗಿ, ಉದ್ಯೋಗ ಸ್ಥಳದಲ್ಲಿ ಅವಘಢ.

ಮಕರ: ಮೇಲಾಧಿಕಾರಿಗಳಿಂದ ತೊಂದರೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆಸ್ಪತ್ರೆಗೆ ಅಲೆದಾಟ, ಪಿತ್ರಾರ್ಜಿತ ಆಸ್ತಿ ತಗಾದೆ, ಆರ್ಥಿಕ ಸಮಸ್ಯೆ.

ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಬೆಳವಣಿಗೆ ಕುಂಠಿತ, ವಾಹನ ಅಪಘಾತ ಸಾಧ್ಯತೆ, ಪ್ರಯಾಣದಲ್ಲಿ ಎಚ್ಚರಿಕೆ, ಸಾಲ ತೀರಿಸುವ ಯೋಗ.

ಮೀನ: ಆಕಸ್ಮಿಕ ದುರ್ಘಟನೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಅನ್ಯರ ತಪ್ಪಿಗೆ ಸಂಕಷ್ಟಕ್ಕೆ ಸಿಲುಕುವಿರಿ, ಉದ್ಯೋಗ ಸ್ಥಳದಲ್ಲಿ ಗೌರವ.

Share This Article
Leave a Comment

Leave a Reply

Your email address will not be published. Required fields are marked *