ದಿನಭವಿಷ್ಯ: 06-11-2018

Public TV
1 Min Read

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಮಂಗಳವಾರ, ಚಿತ್ತ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:01 ರಿಂದ 4:28
ಗುಳಿಕಕಾಲ: ಮಧ್ಯಾಹ್ನ 12:07 ರಿಂದ 1:34
ಯಮಗಂಡಕಾಲ: ಬೆಳಗ್ಗೆ 9:13 ರಿಂದ 10:40

ಮೇಷ: ಆತ್ಮೀಯರಲ್ಲಿ ಕಲಹ, ರಾಜ ಭಯ, ಶತ್ರುಗಳ ಬಾಧೆ, ಮನಃಕ್ಲೇಷ, ಮಾತಿನ ಮೇಲೆ ಹಿಡಿತವಿರಲಿ.

ವೃಷಭ: ಉದ್ಯೋಗದಲ್ಲಿ ಬಡ್ತಿ, ಯಾರನ್ನೂ ಹೆಚ್ಚು ನಂಬಬೇಡಿ, ದ್ರವ ರೂಪದ ವಸ್ತುಗಳಿಂದ ಲಾಭ, ವ್ಯವಹಾರದಲ್ಲಿ ಧನ ಪ್ರಾಪ್ತಿ.

ಮಿಥುನ: ಕುಟುಂಬದಲ್ಲಿ ನೆಮ್ಮದಿ, ಯತ್ನ ಕಾರ್ಯದಲ್ಲಿ ಜಯ, ಕೃಷಿಕರಿಗೆ ಲಾಭ, ಉತ್ತಮ ಫಲ, ವಿದ್ಯಾರ್ಥಿಗಳಲ್ಲಿ ಗೊಂದಲ.

ಕಟಕ: ನೀವಾಡುವ ಮಾತಿನಿಂದ ಅನ್ಯರಿಗೆ ನೋವು, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ.

ಸಿಂಹ: ಆತ್ಮೀಯರಿಂದ ಸಹಾಯ, ಹಿತ ಶತ್ರುಗಳಿಂದ ತೊಂದರೆ, ದೂರ ಪ್ರಯಾಣ, ವಾಹನ ರಿಪೇರಿಯಿಂದ ಖರ್ಚು.

ಕನ್ಯಾ: ದುಷ್ಟರಿಂದ ದೂರವಿರಿ, ಸಮಾಜದಲ್ಲಿ ಉತ್ತಮ ಗೌರವ, ಅಧಿಕವಾದ ಖರ್ಚು, ದಾಂಪತ್ಯದಲ್ಲಿ ವಿರಸ, ಪಿತ್ರಾರ್ಜಿತ ಆಸ್ತಿ ಗಳಿಕೆ.

ತುಲಾ: ಮಾತೃವಿನಿಂದ ಸಹಾಯ, ವಾದ-ವಿವಾದಗಳಲ್ಲಿ ಎಚ್ಚರ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಈ ದಿನ ಶುಭ ಫಲ.

ವೃಶ್ಚಿಕ: ಪ್ರೀತಿ ಪಾತ್ರರ ಭೇಟಿ, ಅಧಿಕ ಖರ್ಚು, ಅಕಾಲ ಭೋಜನ, ಶತ್ರುಗಳ ಭಯ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಧನಸ್ಸು: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಗುರು ಹಿರಿಯರಲ್ಲಿ ಭಕ್ತಿ, ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಏರುಪೇರು, ಮಂಗಳ ಕಾರ್ಯದಲ್ಲಿ ಭಾಗಿ.

ಮಕರ: ದೇವತಾ ಕಾರ್ಯದಲ್ಲಿ ಭಾಗಿ, ವಿವಾಹ ಯೋಗ, ಆತುರ ಸ್ವಭಾವ, ಅನಗತ್ಯ ದ್ವೇಷ ಸಾಧನೆ, ಅತಿಯಾದ ನಿದ್ರೆ.

ಕುಂಭ: ಮಾನಸಿಕ ಒತ್ತಡ, ತಾಳ್ಮೆ ಅತ್ಯಗತ್ಯ, ಸ್ತ್ರೀಯರಿಗೆ ವಿಶೇಷವಾದ ಲಾಭ, ಸಣ್ಣ ಮಾತಿನಿಂದ ಕಲಹ, ಕುಟುಂಬದಲ್ಲಿ ಮನಃಸ್ತಾಪ.

ಮೀನ: ಋಣ ಬಾಧೆಯಿಂದ ಮುಕ್ತಿ ಸಾಧ್ಯತೆ, ಮಿತ್ರರಿಂದ ದ್ರೋಹ, ದೂರ ಪ್ರಯಾಣ, ಯೋಚಿಸಿ ನಿರ್ಧಾರಗಳನ್ನು ಕೈಗೊಳ್ಳಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *