ದಿನಭವಿಷ್ಯ: 04-11-2018

Public TV
2 Min Read

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ, ಭಾನುವಾರ

ಮೇಷ: ತೀರ್ಥಕ್ಷೇತ್ರಕ್ಕೆ ಪ್ರಯಾಣ, ಮನೆಗೆ ಬಂಧುಗಳ ಆಗಮನ, ವಿಪರೀತ ಹಣಕಾಸು ಖರ್ಚು, ಸಾಲ ಮಾಡುವ ಪರಿಸ್ಥಿತಿ ನಿರ್ಮಾಣ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅನಗತ್ಯ ವೃಥಾ ತಿರುಗಾಟ.

ವೃಷಭ: ವ್ಯವಹಾರದಲ್ಲಿ ಅನುಕೂಲ, ದಾಯಾದಿಗಳೊಂದಿಗೆ ಕಲಹ, ಮನಸ್ಸಿನಲ್ಲಿ ಅತಿಯಾದ ಭಯ, ಮಾನಸಿಕ ವ್ಯಥೆ, ಋಣ-ರೋಗ ಬಾಧೆ, ದುಷ್ಟರ ಸಹವಾಸದಿಂದ ಸಮಸ್ಯೆ, ಕಾರ್ಯ ಸಾಧನೆಗಾಗಿ ಪರಿಶ್ರಮ, ಬಂಧು-ಮಿತ್ರರ ವಿರೋಧ.

ಮಿಥುನ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮಾನಸಿಕವಾಗಿ ಅಧಿಕ ಒತ್ತಡ, ವ್ಯವಹಾರದಲ್ಲಿ ನಷ್ಟ ಸಾಧ್ಯತೆ, ಚಂಚಲ ಮನಸ್ಸು, ವಿವಾಹ ಯೋಗ, ಪರಿಶ್ರಮಕ್ಕೆ ತಕ್ಕ ಫಲ, ವಾರಾಂತ್ಯದಲ್ಲಿ ಧನಾಗಮನ, ಮಾತೃವಿನಿಂದ ಹಣಕಾಸು ಲಾಭ.

ಕಟಕ: ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಇಷ್ಟವಾದ ವಸ್ತುಗಳ ಖರೀದಿ, ಆಕಸ್ಮಿಕ ಧನ ಲಾಭ, ಸ್ತ್ರೀಯರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ ಸಾಧ್ಯತೆ.

ಸಿಂಹ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಬಡ್ತಿ, ಕೆಲಸದಲ್ಲಿ ತಾಳ್ಮೆ ಅಗತ್ಯ, ನೀವಾಡುವ ಮಾತಿನಲ್ಲಿ ಎಚ್ಚರಿಕೆ, ಅನ್ಯರೊಂದಿಗೆ ಕಲಹವಾಗುವ ಸಾಧ್ಯತೆ, ಯತ್ನ ಕಾರ್ಯದಲ್ಲಿ ವಿಳಂಬ, ವಾರಾಂತ್ಯದಲ್ಲಿ ನೆಮ್ಮದಿ ಪ್ರಾಪ್ತಿ.

ಕನ್ಯಾ: ನೆಮ್ಮದಿಯಿಂದ ಬದುಕಲು ಮನಸ್ಸು, ಸ್ಥಿರಾಸ್ತಿ ವಿಚಾರದಲ್ಲಿ ಯೋಚನೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಷೇರು-ವ್ಯವಹಾರಗಳಲ್ಲಿ ಅಲ್ಪ ಚೇತರಿಕೆ, ಆತ್ಮೀಯರೊಂದಿಗೆ ದೂರ ಪ್ರಯಾಣ, ಆಕಸ್ಮಿಕವಾಗಿ ಹಣ ಖರ್ಚು ಮಾಡುವಿರಿ, ಕೃಷಿ ಚಟುವಟಿಕೆಗಳಿಂದ ಅನುಕೂಲ, ಗೆಳೆಯರಿಂದ ಅನರ್ಥ.

ತುಲಾ: ಯಂತ್ರೋಪಕರಣಗಳಿಂದ ಲಾಭ, ಸ್ನೇಹಿತರಿಂದಲೇ ನಿಂದನೆ-ಅವಮಾನ, ಚಂಚಲವಾದ ಮನಸ್ಸು, ಮಹಿಳೆಯರಿಗೆ ಅನುಕೂಲ, ಅಧಿಕ ಹಣ ಖರ್ಚು, ಶೀತ ಸಂಬಂಧಿತ ಅನಾರೋಗ್ಯ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ದೂರ ಪ್ರಯಾಣ ಸಾಧ್ಯತೆ, ಈ ವಾರ ಮಾಡೋ ಕಾರ್ಯದಲ್ಲಿ ಎಚ್ಚರ.

ವೃಶ್ಚಿಕ: ಕುಟುಂಬದಲ್ಲಿ ಅಶಾಂತಿ ವಾತಾವರಣ, ವ್ಯರ್ಥ ಧನಹಾನಿ, ಆರ್ಥಿಕ ಸಂಕಷ್ಟದ ಬಾಧೆ, ಶುಭ ಕಾರ್ಯಗಳಲ್ಲಿ ಭಾಗಿ, ಯತ್ನ ಕಾರ್ಯದಲ್ಲಿ ಅನುಕೂಲ, ಹಿತ ಶತ್ರುಗಳ ಕಾಟ, ಜೊತೆಗಿದ್ದು ಮೋಸ ಮಾಡುವಿರಿ, ಈ ವಾರ ಶುಭ ವಾರ್ತೆ ಕೇಳುವಿರಿ.

ಧನಸ್ಸು: ಮನೆಗೆ ಆತ್ಮೀಯರ ಆಗಮನ, ನೆಮ್ಮದಿ ಇಲ್ಲದ ಜೀವನ, ಧಾರ್ಮಿಕ ಕಾರ್ಯಗಳಿಗೆ ಮನಸ್ಸು, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸುವುದು, ಬಾಕಿ ಹಣ ಮರುಪಾವತಿ, ವಾರದ ಮಧ್ಯೆ ನೆಮ್ಮದಿ ಪ್ರಾಪ್ತಿ, ಮಾಡು ವ್ಯವಹಾರದಲ್ಲಿ ಎಚ್ಚರ.

ಮಕರ: ಸ್ನೇಹಿತರು-ಬಂಧುಗಳಿಂದ ಸಹಾಯ ಲಭಿಸುವುದು, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ, ಗೌರವಕ್ಕೆ ಧಕ್ಕೆಯಾಗುವುದು, ಗೃಹ ಸ್ಥಳ ಬದಲಾವಣೆ, ಮಹಿಳೆಯರಿಗೆ ಅನುಕೂಲ, ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ.

ಕುಂಭ: ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಹಿತ ಶತ್ರುಗಳಿಂದ ಎಚ್ಚರಿಕೆ, ವ್ಯವಹಾರದಲ್ಲಿ ಉತ್ತಮ ಬುದ್ಧಿ ಶಕ್ತಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ನಂಬಿಕಸ್ಥರಿಂದ ಮೋಸ, ಸಂಗಾತಿಯ ಸಲಹೆ ಕೇಳುವಿರಿ, ದಾಂಪತ್ಯದಲ್ಲಿ ಅನ್ಯೋನ್ಯತೆ.

ಮೀನ: ವಸ್ತ್ರಾಭರಣ ಖರೀದಿ ಯೋಗ, ದೈವ ದರ್ಶನಕ್ಕೆ ಪ್ರಯಾಣ, ವಿಪರೀತ ಹಣಕಾಸು ಖರ್ಚು, ಋಣ ವಿಮೋಚನೆ ಸಾಧ್ಯತೆ, ಶತ್ರುಗಳಿಂದ ಸಂಕಷ್ಟ, ಅಧಿಕಾರಿಗಳಿಂದ ಪ್ರಶಂಸೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಾಹನ ಲಭಿಸುವ ಸಾಧ್ಯತೆ, ಆರೋಗ್ಯದಲ್ಲಿ ಅಲ್ಪ ಚೇತರಿಕೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *