ದಿನಭವಿಷ್ಯ: 03-01-2019

Public TV
3 Min Read

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಗುರುವಾರ, ಅನೂರಾಧ ನಕ್ಷತ್ರ
ಬೆಳಗ್ಗೆ 11:03 ನಂತರ ಜ್ಯೇಷ್ಠ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:53 ರಿಂದ 3:19
ಗುಳಿಕಕಾಲ: ಬೆಳಗ್ಗೆ 9:36 ರಿಂದ 11:02
ಯಮಗಂಡಕಾಲ: ಬೆಳಗ್ಗೆ 6:45 ರಿಂದ 8:10

ಮೇಷ: ಸ್ವಂತ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮನಸ್ಸಿಲ್ಲಿ ಜಿಗುಪ್ಸೆ-ದೇಹಾಲಸ್ಯ, ಸೋಲು, ನಷ್ಟ, ನಿರಾಸೆ, ಚರ್ಮ ತುರಿಕೆ, ಆರೋಗ್ಯದಲ್ಲಿ ಸಮಸ್ಯೆ, ಮಕ್ಕಳಲ್ಲಿ ಮೊಂಡುತನ, ಸ್ತ್ರೀಯರಿಗೆ ಅಪವಾದ, ಸ್ಥಿರಾಸ್ತಿ ವಿಚಾರದಲ್ಲಿ ನೋವು, ಗುಪ್ತ ಸ್ಥಳದಲ್ಲಿ ಪೆಟ್ಟಾಗುವ ಸಾಧ್ಯತೆ, ಬಂಧುಗಳಿಂದ ತಂತ್ರಗಾರಿಕೆ ಭೀತಿ.

ವೃಷಭ: ಬಂಧುಗಳು-ನೆರೆಹೊರೆಯವರಿಂದ ಧನ ಸಹಾಯ, ಉದ್ಯೋಗದಲ್ಲಿ ಒತ್ತಡ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಾಲಾಗ್ರಹ ದೋಷ ಕಾಡುವುದು, ನೀವಾಡುವ ಮಾತಿನಿಂದ ತೊಂದರೆ, ಮಹಿಳೆಯರಿಗೆ ಇಲ್ಲ ಸಲ್ಲದ ಅಪವಾದ, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

ಮಿಥುನ: ಸ್ಥಿರಾಸ್ತಿ-ವಾಹನದಿಂದ ನಷ್ಟ, ಗುಣವಾಗದ ಆರೋಗ್ಯ ಸಮಸ್ಯೆ, ಅಪಘಾತವಾಗುವ ಸಂಭವ, ಶತ್ರುಗಳ ಕಾಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ಇಚ್ಛೆಗಳಿಂದ ಅನಾಹುತ, ಗೌರವಕ್ಕೆ ಧಕ್ಕೆ, ಪ್ರಯಾಣ ರದ್ದಾಗುವ ಪರಿಸ್ಥಿತಿ.

ಕಟಕ: ಸ್ವಂತ ಉದ್ಯಮ ಸಂಕಷ್ಟಕ್ಕೆ ಸಿಲುಕುವುದು, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ವಿದೇಶ ಪ್ರಯಾಣ ಯೋಗ, ಬಂಧುಗಳೊಂದಿಗೆ ಕಿರಿಕಿರಿ, ದುರ್ಘಟನೆಯ ಸುದ್ದಿ ಕೇಳುವಿರಿ, ಉದ್ಯೋಗ ಬದಲಾವಣೆಗೆ ಮನಸ್ಸು, ನಿದ್ರೆಯಲ್ಲಿ ಕೆಟ್ಟ ಕನಸುಗಳು, ನಂಬಿಕಸ್ಥರಿಂದ ಮೋಸ ಹೋಗುವಿರಿ, ಮಾಟ-ಮಂತ್ರ ತಂತ್ರಗಾರರ ಭೇಟಿ, ಸಂಗಾತಿಯಿಂದ ಅಧಿಕವಾದ ಒತ್ತಡ, ದಾಂಪತ್ಯದಲ್ಲಿ ವಿರಸ.

ಸಿಂಹ: ಮಕ್ಕಳಿಂದ ಧನಾಗಮನ, ಲಾಭ ಪ್ರಮಾಣ ಅಧಿಕ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅದೃಷ್ಟ ಒಲಿದು ಬರುವುದು, ಬರವಣಿಗೆಯಲ್ಲಿ ಆಸಕ್ತಿ-ಯಶಸ್ಸು ಪ್ರಾಪ್ತಿ, ಅಧಿಕವಾದ ಉಷ್ಣ, ಹೊಟ್ಟೆ ನೋವು, ಸ್ಥಿರಾಸ್ತಿ ಯೋಗ ಒಲಿಯುವುದು.

ಕನ್ಯಾ: ಮಕ್ಕಳಿಂದ ಮಾನಸಿಕ ವೇದನೆ, ನಷ್ಟ ಸಂಕಷ್ಟಗಳು ಬಾಧಿಸುವುದು, ಒತ್ತಡದಿಂದ ನಿದ್ರಾಭಂಗ, ಸ್ವಂತ ಉದ್ಯಮ ಅಧಿಕವಾದ ಒತ್ತಡ, ವ್ಯಾಪಾರ-ವ್ಯವಹಾರದ ಮೇಲೆ ನಿರಾಸಕ್ತಿ, ಉದ್ಯೋಗ ಸ್ಥಳದಲ್ಲಿ ಬೇಜವಾಬ್ದಾರಿತನ, ಮೇಲಾಧಿಕಾರಿಗಳಿಂದ ಉದ್ಯೋಗ ನಷ್ಟದ ಭೀತಿ, ವಿದ್ಯಾಭ್ಯಾಸದಲ್ಲಿ ಮಂದತ್ವ, ಮಹಿಳೆಯರ ಭಾವನೆಗಳಿಗೆ ಧಕ್ಕೆ.

ತುಲಾ: ಪಿತ್ರಾರ್ಜಿತ ಆಸ್ತಿಯಲ್ಲಿ ತಗಾದೆ, ಪತ್ರ ವ್ಯವಹಾರಗಳಲ್ಲಿ ಗೊಂದಲ, ಭವಿಷ್ಯದ ಬಗ್ಗೆ ಚಿಂತನೆ, ತಾಳ್ಮೆ ಕಳೆದುಕೊಳ್ಳುವಿರಿ, ಮಾನಸಿಕ ವ್ಯಥೆ, ನಿದ್ರೆಯಲ್ಲಿ ದುಸ್ವಪ್ನಗಳು, ವಾಹನ ಚಾಲನೆಯಲ್ಲಿ ಎಚ್ಚರ, ಆತ್ಮ ಗೌರವಕ್ಕೆ ಚ್ಯುತಿ, ಸುಖಾ ಸುಮ್ಮನೆ ಅಧಿಕ ಖರ್ಚು ಮಾಡುವಿರಿ, ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆ.

ವೃಶ್ಚಿಕ: ಬಂಧುಗಳಿಂದ ಧನ ಸಹಾಯ, ಉದ್ಯೋಗ ಬದಲಾವಣೆಯಿಂದ ಪ್ರಗತಿ, ಸ್ಥಳ ಬದಲಾವಣೆಯ ಯೋಚನೆ, ಆಕಸ್ಮಿಕ ಧನಾಗಮನ, ಅಧಿಕವಾದ ಉಷ್ಣ ಬಾಧೆ, ಹೊಟ್ಟೆ ನೋವು, ತಲೆ ನೋವು, ಅಧಿಕವಾದ ಆಯಾಸ, ನೆರೆಹೊರೆಯವರಿಂದ ಅಪಕೀರ್ತಿ, ಸರ್ಕಾರಿ ಅಧಿಕಾರಿಗಳಿಗೆ-ರಾಜಕೀಯ ವ್ಯಕ್ತಿಗಳಿಗೆ ಅನುಕೂಲ.

ಧನಸ್ಸು: ದಾಂಪತ್ಯದಲ್ಲಿ ವಾಗ್ವಾದ, ಋಣ ತೀರಿಸಲು ಸುಸಮಯ, ದಾನ-ಧರ್ಮದಲ್ಲಿ ಆಸಕ್ತಿ, ಕುಲದೇವರ ದರ್ಶನ ಮಾಡುವಾಸೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ನೀವಾಡುವ ಮಾತಿನಿಂದ ತೊಂದರೆ, ಅಹಂಭಾವದಿಂದ ತೊಂದರೆಗೆ ಸಿಲುಕುವಿರಿ, ಬೇಡದ ಕೆಲಸಗಳಲ್ಲಿ ಕಾಲಹರಣ, ಮುಂದಾಲೋಚನೆ ಇಲ್ಲದೇ ಕಾರ್ಯ ಮಾಡುವಿರಿ.

ಮಕರ: ಅನಾರೋಗ್ಯದಿಂದ ವಿಶ್ರಾಂತಿ ಬಯಸುವಿರಿ, ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು, ತಂತ್ರಗಾರಿಕೆಯ ಭೀತಿ, ಕೋರ್ಟ್ ಕೇಸ್‍ಗಳಿಗೆ ಅಲೆದಾಟ, ಪಿತ್ರಾರ್ಜಿತ ಆಸ್ತಿ ಸಮಸ್ಯೆ, ಪ್ರಯಾಣದಲ್ಲಿ ತೊಂದರೆ, ಸೋಲು,ನಷ್ಟ, ನಿರಾಸೆ, ಸಾಲ ದೊರೆಯುವುದು, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಸ್ನೇಹಿತರಿಂದ ಧನ ಲಾಭ.

ಕುಂಭ: ಮಕ್ಕಳಿಂದ ಅನುಕೂಲವಾಗುವುದು, ಆಕಸ್ಮಿಕ ಅದೃಷ್ಟ ಒಲಿಯುವುದು, ಉದ್ಯೋಗದಲ್ಲಿ ಪ್ರಗತಿ, ಆಕಸ್ಮಿಕ ಲಾಭ, ಕಾರ್ಯಗಳಲ್ಲಿ ಜಯ, ಅಂದುಕೊಂಡ ಕೆಲಸದಲ್ಲಿ ಯಶಸ್ಸು, ಆತ್ಮೀಯರ ಭೇಟಿ, ಹಿರಿಯರಿಂದ ಅನುಕೂಲ, ಜೂಜು-ರೇಸ್ ಲಾಟರಿಗಳಿಂದ ತೊಂದರೆ, ಪ್ರೀತಿ ಪ್ರೇಮ ವಿಚಾರದಲ್ಲಿ ಸಮಸ್ಯೆ.

ಮೀನ: ಸ್ಥಿರಾಸ್ತಿ ಕೊಳ್ಳುವ ಆಲೋಚನೆ, ಉದ್ಯೋಗ ಸ್ಥಳದಲ್ಲಿ ನೋವು, ಬೇಡದ ವಿಚಾರಗಳ ಬಗ್ಗೆ ಚರ್ಚೆ, ಹೆತ್ತವರೊಂದಿಗೆ ಅಂತರ ಕಾಯ್ದುಕೊಳ್ಳುವಿರಿ, ಬಂದಂತಹ ಅದೃಷ್ಟ ಕೈ ತಪ್ಪುವುದು, ಎಲೆಕ್ಟ್ರಾನಿಕ್-ಸಾರಿಗೆ ಕ್ಷೇತ್ರದವರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *