ದಿನ ಭವಿಷ್ಯ 28-10-2019

Public TV
1 Min Read

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಸೋಮವಾರ, ಸ್ವಾತಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:43 ರಿಂದ 9:11
ಗುಳಿಕಕಾಲ: ಮಧ್ಯಾಹ್ನ 1:35 ರಿಂದ 3:03
ಯಮಗಂಡಕಾಲ: ಬೆಳಗ್ಗೆ 10:39 ರಿಂದ 12:07

ಮೇಷ: ಸ್ತ್ರೀಯರಿಗೆ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ ಪ್ರಾಪ್ತಿ, ಮಾನಸಿಕ ನೆಮ್ಮದಿ.

ವೃಷಭ: ವಿಪರೀತ ಖರ್ಚು, ಕೆಲಸ ಕಾರ್ಯಗಳಲ್ಲಿ ಸಾಧನೆ, ಸ್ಥಳ ಬದಲಾವಣೆ, ಮನಃಕ್ಲೇಷ, ಮಾತೃವಿನಿಂದ ಧನ ಲಾಭ.

ಮಿಥುನ: ಸ್ನೇಹಿತರಿಂದ ಸಹಾಯ, ಅಧಿಕವಾದ ತಿರುಗಾಟ, ಋಣ ವಿಮೋಚನೆ, ನಾನಾ ರೀತಿಯ ಸಂಪಾದನೆ, ವಿವಾಹ ಯೋಗ.

ಕಟಕ: ನಾನಾ ರೀತಿಯಲ್ಲಿ ಅನುಕೂಲ, ಐಶ್ವರ್ಯ ವೃದ್ಧಿ, ಶತ್ರುಗಳ ನಾಶ, ಷೇರು ವ್ಯವಹಾರಗಳಲ್ಲಿ ಎಚ್ಚರ, ಕುಟುಂಬ ಸೌಖ್ಯ.

ಸಿಂಹ: ಪ್ರಿಯ ಜನರ ಭೇಟಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಸ್ಥಿರಾಸ್ತಿ ಮಾರಾಟ, ಆದಾಯಕ್ಕಿಂತ ಖರ್ಚು ಹೆಚ್ಚು.

ಕನ್ಯಾ: ವ್ಯಾಸಂಗಕ್ಕೆ ತೊಂದರೆ, ದಾಯಾದಿಗಳ ಕಲಹ, ದುಷ್ಟು ಬುದ್ಧಿ, ಇಲ್ಲ ಸಲ್ಲದ ಅಪವಾದ, ಯತ್ನ ಕಾರ್ಯದಲ್ಲಿ ಜಯ, ವ್ಯರ್ಥ ಧನಹಾನಿ.

ತುಲಾ: ಸಾಧಾರಣ ಲಾಭ, ಆರೋಗ್ಯದಲ್ಲಿ ಚೇತರಿಕೆ, ವೃಥಾ ತಿರುಗಾಟ, ಬಂಧುಗಳಲ್ಲಿ ಮನಃಸ್ತಾಪ.

ವೃಶ್ಚಿಕ: ಅಲ್ಪ ಪ್ರಗತಿ, ಸೇವಕರಿಂದ ತೊಂದರೆ, ಮಿತ್ರರಲ್ಲಿ ವಿರೋಧ, ಕೃಷಿಕರಿಗೆ ಅಲ್ಪ ಲಾಭ.

ಧನಸ್ಸು: ಕುಟುಂಬದಲ್ಲಿ ಸೌಖ್ಯ, ವಿವಾಹ-ಮಂಗಳ ಕಾರ್ಯಗಳಲ್ಲಿ ಭಾಗಿ, ಮಾನಸಿಕ ನೆಮ್ಮದಿ, ಹಣಕಾಸು ಖರ್ಚು, ಈ ದಿನ ಮಿಶ್ರ ಫಲ.

ಮಕರ: ಈ ದಿನ ಅಲ್ಪ ಪ್ರಗತಿ, ಮಿತ್ರರಲ್ಲಿ ವಿರೋಧ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ವ್ಯತ್ಯಾಸ.

ಕುಂಭ: ಇಲ್ಲ ಸಲ್ಲದ ಅಪವಾದ, ಮಹಿಳೆಯರಿಗೆ ಶುಭ ಫಲ, ಚಂಚಲ ಮನಸ್ಸು, ಕೆಲಸ ಕಾರ್ಯಗಳಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ.

ಮೀನ: ಪರಿಶ್ರಮಕ್ಕೆ ತಕ್ಕ ಫಲ, ದೃಷ್ಟಿ ದೋಷ, ಗೆಳೆಯರಿಂದ ಅನರ್ಥ, ವಿದೇಶ ಪ್ರಯಾಣ, ವಿವಾಹ ಯೋಗ.

Share This Article
Leave a Comment

Leave a Reply

Your email address will not be published. Required fields are marked *