ದಿನ ಭವಿಷ್ಯ: 27-01-2019

Public TV
2 Min Read

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಭಾನುವಾರ, ಚಿತ್ತ ನಕ್ಷತ್ರ

ರಾಹುಕಾಲ: ಸಂಜೆ 4:57 ರಿಂದ 6:23
ಗುಳಿಕಕಾಲ: ಮಧ್ಯಾಹ್ನ 3:30 ರಿಂದ 4:57
ಯಮಗಂಡಕಾಲ: ಮಧ್ಯಾಹ್ನ 12:36 ರಿಂದ 2:03

ಮೇಷ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಧನ ಲಾಭ, ಸ್ಥಿರಾಸ್ತಿ ಖರೀದಿ, ಮಾರಾಟ ಪ್ರತಿನಿಧಿಗಳಿಗೆ ಉತ್ತಮ ಆದಾಯ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಮನಃಕ್ಲೇಷ, ರಾಜಕೀಯ ಕ್ಷೇತ್ರದಲ್ಲಿ ಗುಪ್ತವಾಗಿ ಬದಲಾವಣೆ.

ವೃಷಭ: ಕೆಲಸದಲ್ಲಿ ಒತ್ತಡ, ಸಹೋದ್ಯೋಗಿಗಳಿಂದ ತೊಂದರೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸುವುದು, ಬಂಧುಗಳಿಂದ ಅಧಿಕ ದ್ರವ್ಯಲಾಭ, ಪಾಲುದಾರಿಕೆಯ ಮಾತುಕತೆ, ರೇಷ್ಮೆ ವಸ್ತ್ರ ವ್ಯಾಪಾರಿಗಳಿಗೆ ಲಾಭ, ದೈನಂದಿನ ಕೆಲಸಗಳಲ್ಲಿ ಬದಲಾವಣೆ.

ಮಿಥುನ: ಸ್ನೇಹಿತರಿಂದ ಸಹಾಯ, ಆತ್ಮೀಯರೊಂದಿಗೆ ಬಾಂಧವ್ಯ ವೃದ್ಧಿ, ಮನೆಯಲ್ಲಿ ನೆಮ್ಮದಿ, ಶಿಕ್ಷಕರಿಗೆ ಅಧಿಕವಾದ ಒತ್ತಡ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ವ್ಯಾಪಾರದಲ್ಲಿ ನಷ್ಟ, ಅರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಕಟಕ: ಪ್ರಚಾರ ಕಾರ್ಯಗಳಲ್ಲಿ ಭಾಗಿ, ವೈಯುಕ್ತಿ ವಿಚಾರಗಳಲ್ಲಿ ಗಮನಹರಿಸಿ, ಮನಃಕ್ಲೇಷ, ಬುದ್ಧಿವಂತಿಕೆಯಿಂದ ಕಾರ್ಯ ಸಾಧನೆ, ವಿವಾಹದ ಮಾತುಕತೆ, ಅನಿರೀಕ್ಷಿತ ಪ್ರಯಾಣ, ಮಾನಸಿಕ ಒತ್ತಡ.

ಸಿಂಹ: ಮಕ್ಕಳೊಂದಿಗೆ ದೂರ ಪ್ರಯಾಣ, ವಾಣಿಜ್ಯೋದ್ಯಮಿಗಳಿಗೆ ಅನುಕೂಲ, ಉದ್ಯೋಗದಲ್ಲಿ ಉತ್ತಮ ವಹಿವಾಟು, ಆರೋಗ್ಯದ ಕಡೆ ಗಮನಹರಿಸಿ, ಅನಾವಶ್ಯಕ ಮಾತುಗಳಿಂದ ದೂರವಿರಿ.

ಕನ್ಯಾ: ಉದ್ಯೋಗದಲ್ಲಿ ಸ್ಥಳ ಬದಲಾವಣೆ, ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಸಿಗುವ ಸಾಧ್ಯತೆ, ಆದಾಯಕ್ಕಿಂತ ಖರ್ಚು ಹೆಚ್ಚು, ಆರೋಗ್ಯದಲ್ಲಿ ಏರುಪೇರು, ಇಷ್ರ್ಟಾರ್ಥ ಸಿದ್ಧಿಸುವುದು, ಮಾನಸಿಕ ನೆಮ್ಮದಿ, ಅಕಾಲ ಭೋಜನ, ನಿದ್ರಾಭಂಗ.

ತುಲಾ: ಹೊಸ ಯೋಜನೆಗಳ ಬಗ್ಗೆ ಆಲೋಚಿಸಿ, ಅಧಿಕ ಕೆಲಸದಿಂದ ವಿಶ್ರಾಂತಿ ಬಯಸುವಿರಿ, ವ್ಯವಹಾರದಲ್ಲಿ ಆಕಸ್ಮಿಕ ಧನಾಗಮನ, ತಂದೆಗೆ ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಪ್ರಗತಿ.

ವೃಶ್ಚಿಕ: ಮನೆಯವರ ಮಾತಿಗೆ ಮನ್ನಣೆ ನೀಡಿ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ, ವಸ್ತ್ರ ಉದ್ಯಮಸ್ಥರಿಗೆ ಲಾಭ, ಪ್ರೀತಿ ಪಾತ್ರರ ಆಗಮನ, ರೈತರಿಗೆ ಆಕಸ್ಮಿಕ ನಷ್ಟ, ದಾಂಪತ್ಯದಲ್ಲಿ ವಿರಸ, ಆರೋಗ್ಯದಲ್ಲಿ ಏರುಪೇರು, ಚಂಚಲ ಮನಸ್ಸು.

ಧನಸ್ಸು: ಉತ್ತಮ ಸ್ಥಾನಮಾನ ಲಭಿಸುವುದು, ಮನಸ್ಸಿಗೆ ಸಂತಸ, ವಾಹನ ಮಾರಾಟಗಾರರಿಗೆ ಲಾಭ, ಮಾನಸಿಕ ನೆಮ್ಮದಿ, ಪರರಿಗೆ ಸಹಾಯ, ವ್ಯವಹಾರದಲ್ಲಿ ಗಮನಹರಿಸಿ, ವೃತ್ತಿ ಕ್ಷೇತ್ರದಲ್ಲಿ ಬೆಳವಣಿಗೆ, ಹಿರಿಯರಿಂದ ಆಶೀರ್ವಾದ.

ಮಕರ: ಬದುಕಿಗೆ ಉತ್ತಮ ತಿರುವು, ವಿದೇಶ ಪ್ರಯಾಣ, ಸಿಹಿ ಸುದ್ದಿ ಕೇಳುವಿರಿ, ಸ್ಥಿರಾಸ್ತಿ ಸಂಪಾದನೆಗೆ ಉತ್ತಮ ಅವಕಾಶ, ಮನೆಯಲ್ಲಿ ಶುಭ ಕಾರ್ಯ, ಮೇಲಾಧಿಕಾರಿಗಳಿಂದ ಪ್ರಶಂಸೆ, ದೈವಾನುಗ್ರಹದಿಂದ ಕಾರ್ಯ ಸಿದ್ಧಿ.

ಕುಂಭ: ಕೈಗೊಂಡ ಕಾರ್ಯಗಳಲ್ಲಿ ವಿಳಂಬ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ದಾಂಪತ್ಯದಲ್ಲಿ ಸಂತೋಷ, ಕೃಷಿಕರಿಗೆ ಲಾಭ, ಪ್ರೇಮಿಗಳಿಗೆ ಮನೆಯಲ್ಲಿ ಸಹಕಾರ, ಸಂತಸದ ಸುದ್ದಿ ಕೇಳುವಿರಿ, ಸ್ವಂತ ಉದ್ಯಮಸ್ಥರಿಗೆ ಲಾಭ.

ಮೀನ: ಆರ್ಥಿಕ ವ್ಯವಹಾರದಲ್ಲಿ ಉತ್ತಮ, ಕೌಟುಂಬಿಕ ಸಮಸ್ಯೆಗಳು ಇತ್ಯರ್ಥ, ವೃತ್ತಿ ರಂಗದಲ್ಲಿ ಹೊಸ ಅವಕಾಶ, ಮಿತ್ರರಿಂದ ದ್ರೋಹ, ವಿದೇಶ ವ್ಯವಹಾರಗಳಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು, ಶರೀರದಲ್ಲಿ ಆಯಾಸ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *