ದಿನ ಭವಿಷ್ಯ: 26-02-2023

Public TV
1 Min Read

ಪಂಚಾಂಗ:
ಸಂವತ್ಸರ- ಶುಭಕೃತ್
ಋತು- ಶಿಶಿರ
ಅಯನ- ಉತ್ತರಾಯಣ
ಮಾಸ- ಪಾಲ್ಗುಣ
ಪಕ್ಷ- ಶುಕ್ಲ
ತಿಥಿ- ಸಪ್ತಮಿ
ನಕ್ಷತ್ರ- ಕೃತಿಕ

ರಾಹುಕಾಲ: 04 : 58 PM TO 06 : 27 PM
ಗುಳಿಕಕಾಲ: 03 : 30 PM TO 04 : 58 PM
ಯಮಗಂಡಕಾಲ: 12 : 32 PM TO 02 : 01 PM

ಮೇಷ: ಆತ್ಮಭಿಮಾನದ ಜೊತೆಗೆ ಗೌರವವು ಲಭ್ಯ, ಸಹೋದ್ಯೋಗಿಗಳಿಂದ ಮೆಚ್ಚುಗೆ, ಕೌಟುಂಬಿಕವಾಗಿ ಸಂತಸ ನೆಮ್ಮದಿ.

ವೃಷಭ: ಸಂಗೀತ ಕಲಾವಿದರಿಗೆ ಬೇಡಿಕೆ, ಆತ್ಮಾಭಿಮಾನದ ಜೊತೆಗೆ ಗೌರವವು ಲಭ್ಯ, ಆರೋಗ್ಯದಲ್ಲಿ ವ್ಯತ್ಯಯ.

ಮಿಥುನ: ದಿನಸಿ ವರ್ತಕರಿಗೆ ಲಾಭ, ಕೌಟುಂಬಿಕವಾಗಿ ಭಿನ್ನ ಸಂಬಂಧಗಳು ಸರಿಯಾಗುತ್ತದೆ, ಹೈನು ಉತ್ಪನ್ನಗಳಿಂದ ಆದಾಯ.

ಕರ್ಕಟಕ: ನಿರ್ಧಾರಗಳಲ್ಲಿ ಆತುರತೆ ಬೇಡ, ಹಣಕಾಸಿನ ವ್ಯಾಮೋಹದಿಂದ ತೊಂದರೆ, ಹಿರಿಯ ಸಹೋದ್ಯೋಗಿಗಳಿಂದ ಧನ ಸಹಾಯ.

ಸಿಂಹ: ಔಷದ ವ್ಯಾಪಾರಿಗಳಿಗೆ ಲಾಭ, ಕ್ಲಿಷ್ಟಕರ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ, ಸಹಾಯ ಪಡೆದವರೇ ದೂಷಿಸುವರು.

ಕನ್ಯಾ: ರಚನಾತ್ಮಕ ಕೆಲಸಗಳಲ್ಲಿ ಆಸಕ್ತಿ, ಕುಟುಂಬದಲ್ಲಿ ಅಶಾಂತಿ, ಛಾಯಾಗ್ರಹಕರಿಗೆ ಶುಭ.

ತುಲಾ: ಮಾನಸಿಕವ್ಯಥೆಗಳು ನಿವಾರಣೆ, ಶೀಘ್ರಕೋಪದಿಂದಾಗಿ ವ್ಯಕ್ತಿತ್ವದಲ್ಲಿ ಬದಲಾವಣೆ, ಕಪಟವಿಲ್ಲದ ಮಾತಿನಿಂದ ನಿಷ್ಠುರ.

ವೃಶ್ಚಿಕ: ಆಸ್ತಿಯಿಂದ ನಷ್ಟ, ಕಾಂಟ್ರಾಕ್ಟ್ ವ್ಯಾಪಾರಸ್ಥರಿಗೆ ಶುಭ, ಜಟಿಲ ವಿಷಯಗಳತ್ತ ಗಮನಹರಿಸಿ.

ಧನಸ್ಸು: ವಿವಾಹಾಕಾಂಕ್ಷಿಗಳಿಗೆ ಶುಭ, ಪ್ರಾಮಾಣಿಕ ದುಡಿಮೆಯಿಂದಾಗಿ ಮನಶಾಂತಿ, ಜವಾಬ್ದಾರಿಯತ ಕೆಲಸಗಳ ನಿರ್ವಹಣೆ.

ಮಕರ: ಅಸೂಯೆ ಪಡುವ ಜನರಿಂದ ಎಚ್ಚರ, ಸ್ಪರ್ಧಾತ್ಮಕ ವಾತಾವರಣ ಹೆದರಿಸಬೇಕಾಗುವುದು, ಧರ್ಮ ಕಾರ್ಯಗಳಲ್ಲಿ ಆಸಕ್ತಿ.

ಕುಂಭ: ಸಹೋದ್ಯೋಗಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ, ಸಂಸ್ಥೆಯ ಸಲಹೆಗಾರ ಕ್ಷೇತ್ರದವರಿಗೆ ಒತ್ತಡ, ಹಿತಶತ್ರುಗಳಿಂದ ಎಚ್ಚರ.

ಮೀನ: ಹಣದ ಒಳಹರಿವಿನಲ್ಲಿ ಕ್ಷೀಣ, ಆಸ್ತಿಯಿಂದ ನಷ್ಟ, ಆದಾಯಕ್ಕಿಂತ ಖರ್ಚು ಹೆಚ್ಚು.

Share This Article
1 Comment

Leave a Reply

Your email address will not be published. Required fields are marked *