ದಿನಭವಿಷ್ಯ 26-01-2018

Public TV
2 Min Read

ಪಂಚಾಂಗ

ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಶುಕ್ರವಾರ, ಕೃತ್ತಿಕಾ ನಕ್ಷತ್ರ

ಶುಭ ಘಳಿಗೆ: ಬೆಳಗ್ಗೆ 7:20 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:48 ರಿಂದ 2:28

ರಾಹುಕಾಲ: ಬೆಳಗ್ಗೆ 11:09 ರಿಂದ 12:36
ಗುಳಿಕಕಾಲ: ಬೆಳಗ್ಗೆ 8:15 ರಿಂದ 9:42
ಯಮಗಂಡಕಾಲ: ಮಧ್ಯಾಹ್ನ 3:30 ರಿಂದ 4:57

ಮೇಷ: ಕೃಷಿಕರಿಗೆ ಲಾಭ, ಟ್ರಾವೆಲ್ಸ್‍ನವರಿಗೆ ಅಧಿಕ ಧನಾಗಮನ, ಸ್ತ್ರೀ ರೋಗ ತಜ್ಞರಿಗೆ ಅನುಕೂಲ, ಹಣಕಾಸು ವ್ಯವಹಾರದಲ್ಲಿ ನಿಧಾನ, ಕೆಲಸ ಕಾರ್ಯಗಳಲ್ಲಿ ಅಡೆತಡೆ.

ವೃಷಭ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಸಣ್ಣ ಕೈಗಾರಿಕೆಗಳ ಪ್ರಾರಂಭ, ಅವಕಾಶಗಳು ಪ್ರಾಪ್ತಿ, ದಾಂಪತ್ಯದಲ್ಲಿ ಜಗಳ, ಮನಸ್ಸಿಗೆ ಬೇಸರ.

ಮಿಥುನ: ಅಧಿಕವಾದ ನಿದ್ರೆ, ಮೋಜು-ಮಸ್ತಿಗಾಗಿ ಪ್ರಯಾಣ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ, ಕೌಟುಂಬಿಕ ಕಲಹ, ಆರ್ಥಿಕ ನಷ್ಟ, ಈ ದಿನ ಎಚ್ಚರಿಕೆ ಅಗತ್ಯ.

ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಸ್ಥಿರಾಸ್ತಿ ವಿಚಾರದಲ್ಲಿ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಜಯ, ಸ್ವಂತ ಉದ್ಯಮಸ್ಥರಿಗೆ ಲಾಭ, ವ್ಯವಹಾರಗಳಲ್ಲಿ ಯಶಸ್ಸು.

ಸಿಂಹ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಸ್ವಯಂಕೃತ್ಯಗಳಿಂದ ಸಂಕಷಟ, ಸ್ನೇಹಿತರಲ್ಲಿ ವೈಮನಸ್ಸು, ಸಂಗಾತಿಯೊಂದಿಗೆ ಮನಃಸ್ತಾಪ, ಸಹೋದ್ಯೋಗಿಗಳಿಗಾಗಿ ಅಧಿಕ ಖರ್ಚು.

ಕನ್ಯಾ: ತಂದೆಯಿಂದ ಅನುಕೂಲ, ಆಕಸ್ಮಿಕ ಲಾಭ, ಮಾತಿನಿಂದ ತೊಂದರೆಗೆ ಸಿಲುಕುವಿರಿ, ವಸ್ತ್ರಾಭರಣ ಕಳೆದುಕೊಳ್ಳುವ ಸಾಧ್ಯತೆ.

ತುಲಾ: ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಸ್ತ್ರೀಯರಿಂದ ಸಂಕಷ್ಟ, ಉದ್ಯೋಗದಲ್ಲಿ ಆತಂಕ, ಕೆಲಸದಲ್ಲಿ ವಿಪರೀತ ಒತ್ತಡ.

ವೃಶ್ಚಿಕ: ಮಾನಸಿಕ ಕಿರಿಕಿರಿ, ದೇಹಾಲಸ್ಯ-ನಿರಾಸಕ್ತಿ, ಸಂಕಟ ಅಧಿಕ, ದಾಂಪತ್ಯದಲ್ಲಿ ಕಲಹ, ಮನೆಯಲ್ಲಿ ಅಶಾಂತಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸು: ಸಹೋದರಿಯಿಂದ ತೊಂದರೆ, ಕೋರ್ಟ್ ಮೊರೆ ಹೋಗುವ ಸಾಧ್ಯತೆ, ನೆರೆಹೊರೆಯ ಸ್ತ್ರೀಯರಲ್ಲಿ ಶತ್ರುತ್ವ, ಸಾಲಗಾರರಿಂದ ಸಂಕಷ್ಟ.

ಮಕರ: ಪ್ರೇಮ ವಿಚಾರದಲ್ಲಿ ಕಲಹ, ಕುಟುಂಬಸ್ಥರಿಂದ ಒಪ್ಪಿಗೆ ಸಾಧ್ಯತೆ, ಪ್ರೇಮಿಗಳಲ್ಲಿ ವಾಗ್ವಾದ, ಹೆಣ್ಣು ಮಕ್ಕಳಿಂದ ಆರ್ಥಿಕ ಸಹಾಯ, ಕುಟುಂಬಸ್ಥರಿಗೆ ಸಹಕಾರ ಪ್ರಾಪ್ತಿ.

ಕುಂಭ: ದಾಯಾದಿಗಳ ಕಲಹ, ನೆಮ್ಮದಿಗೆ ಭಂಗ, ಮನೋರೋಗಗಳು ಅಧಿಕ, ತಂದೆಯ ಮೇಲೆ ಕೋಪ, ವಿಪರೀತ ಮುಂಗೋಪ,

ಮೀನ: ಸಹೋದರಿಯರು ದೂರವಾಗುವರು, ಮಕ್ಕಳಿಂದ ಆರ್ಥಿಕ ಸಂಕಷ್ಟ, ಆಕಸ್ಮಿಕವಾಗಿ ಆರೋಗ್ಯದಲ್ಲಿ ಏರುಪೇರು, ಈ ದಿನ ಎಚ್ಚರಿಕೆಯಲ್ಲಿರುವುದು ಉತ್ತಮ.

Share This Article
Leave a Comment

Leave a Reply

Your email address will not be published. Required fields are marked *