ದಿನ ಭವಿಷ್ಯ: 25-08-2025

Public TV
1 Min Read

ಶ್ರೀ ವಿಶ್ವವಸು ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಭಾದ್ರಪದ ಮಾಸ, ಶುಕ್ಲ ಪಕ್ಷ
ವಾರ: ಸೋಮವಾರ, ತಿಥಿ: ದ್ವಿತೀಯ,
ನಕ್ಷತ್ರ: ಉತ್ತರ

ರಾಹುಕಾಲ: 7.46 ರಿಂದ 9.19
ಗುಳಿಕಕಾಲ: 1.58 ರಿಂದ 3.31
ಯಮಗಂಡಕಾಲ: 10.52 ರಿಂದ 12.25

ಮೇಷ: ಪರಸ್ಥಳ ವಾಸದ ಚಿಂತೆ, ಮಿತ್ರರಿಂದ ಸಹಾಯ, ಶರೀರದಲ್ಲಿ ಆತಂಕ, ದುಷ್ಟ ಜನರಿಂದ ದೂರವಿರಿ.

ವೃಷಭ: ಅಧಿಕಾರಿಗಳಲ್ಲಿ ಗೊಂದಲ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮನಕ್ಲೇಶ, ಆಕಸ್ಮಿಕ ಖರ್ಚು, ನಿಂದನೆ.

ಮಿಥುನ: ಯತ್ನ ಕಾರ್ಯಗಳಲ್ಲಿ ಜಯ, ಧನ ಲಾಭ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಬಂಧುಗಳಲ್ಲಿ ವೈಮನಸ್ಸು.

ಕಟಕ: ಅಮೂಲ್ಯ ವಸ್ತು ಖರೀದಿ, ವಾಹನ ರಿಪೇರಿ, ಹಣದ ಅಡಚಣೆ ಚಂಚಲ ಮನಸ್ಸು, ವಿವಾಹಕ್ಕೆ ತೊಂದರೆ.

ಸಿಂಹ: ಎಲ್ಲಿ ಹೋದರು ಅಶಾಂತಿ, ಧನವ್ಯಯ, ತೀರ್ಥ ಯಾತ್ರೆಯ ದರ್ಶನ, ಉದ್ಯೋಗದಲ್ಲಿ ಕಿರಿಕಿರಿ.

ಕನ್ಯಾ: ಕೋರ್ಟ್ ಕೆಲಸದಲ್ಲಿ ವಿಳಂಬ, ವಸ್ತ್ರ ಖರೀದಿ, ಮನಸ್ಸಿನಲ್ಲಿ ಭಯ, ಅಧಿಕ ಖರ್ಚು ಅಲ್ಪ ಗಳಿಕೆ.

ತುಲಾ: ವಿರೋಧಿಗಳಿಂದ ಕುತಂತ್ರ, ರಿಯಲ್ ಎಸ್ಟೇಟ್‌ನವರಿಗೆ ಅಲ್ಪ ಲಾಭ, ದೂರ ಪ್ರಯಾಣ.

ವೃಶ್ಚಿಕ: ಭ್ರಾತೃಗಳಿಂದ ತೊಂದರೆ, ದ್ರವ್ಯ ಲಾಭ, ಅಕಾಲ ಭೋಜನ, ರಾಜಕೀಯದಲ್ಲಿ ಗೊಂದಲ.

ಧನಸ್ಸು: ದೈವಾನುಗ್ರಹದಿಂದ ಕೆಲಸಗಳಲ್ಲಿ ಜಯ, ಆಕಸ್ಮಿಕ ದನ ಲಾಭ, ಕೃಷಿಕರಿಗೆ ಲಾಭ, ಸ್ತ್ರೀ ಸೌಖ್ಯ.

ಮಕರ: ವಿವಾದಗಳಿಗೆ ಆಸ್ಪದವಾಗದಂತೆ ವ್ಯವಹರಿಸಿ, ನೆಮ್ಮದಿ ಇರುವುದಿಲ್ಲ, ಶತ್ರು ಭಾದೆ.

ಕುಂಭ: ಮಕ್ಕಳಿಂದ ಸಂತಸ, ಸಾಲ ಮರುಪಾವತಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಅತಿಯಾದ ನಿದ್ರೆ.

ಮೀನ: ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ, ತಿರುಗಾಟ, ಕಾರ್ಯ ಸಾಧನೆ, ಕುಟುಂಬ ಸೌಖ್ಯ.

Share This Article