ದಿನ ಭವಿಷ್ಯ: 25-07-2019

Public TV
2 Min Read

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಗುರುವಾರ, ಅಶ್ವಿನಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:05 ರಿಂದ 3:40
ಗುಳಿಕಕಾಲ: ಮಧ್ಯಾಹ್ನ 9:19 ರಿಂದ 10:54
ಯಮಗಂಡಕಾಲ: ಬೆಳಗ್ಗೆ 6:08 ರಿಂದ 7:44

ಮೇಷ: ಆರ್ಥಿಕ ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ, ಆಸೆ ಆಕಾಂಕ್ಷೆಗಳು ಹೆಚ್ಚಾಗುವುದು, ಮನಸ್ಸಿನಲ್ಲಿ ನಾನಾ ಆಲೋಚನೆ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ; ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಒತ್ತಡದಿಂದ ನಿದ್ರಾಭಂಗ, ಆರೋಗ್ಯದಲ್ಲಿ ಸಮಸ್ಯೆ, ಆತಂಕ ಸೃಷ್ಠಿಯಾಗುವುದು, ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ.

ಮಿಥುನ: ಮಿತ್ರರಿಂದ ಭಾವನೆಗಳಿಗೆ ಧಕ್ಕೆ, ಪ್ರೀತಿ-ಪ್ರೇಮ ವಿಚಾರದಲ್ಲಿ ವೈಮನಸ್ಸು, ಹಣಕಾಸು ಸಮಸ್ಯೆ, ನಿರೀಕ್ಷಿತ ಆದಾಯ ಲಭಿಸುವುದಿಲ್ಲ.

ಕಟಕ: ವಾತಾವರಣ ವ್ಯತ್ಯಾಸದಿಂದ ಅನಾರೋಗ್ಯ, ಉಸಿರಾಟದ ಸಮಸ್ಯೆ, ಲಾಭ ಪ್ರಮಾಣ ಕುಂಠಿತ, ಐಷಾರಾಮಿ ಜೀವನಕ್ಕೆ ಮನಸ್ಸು, ಸ್ಥಿರಾಸ್ತಿ-ವಾಹನ ಖರೀದಿಗೆ ಆಲೋಚನೆ.

ಸಿಂಹ: ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಆತ್ಮೀಯರನ್ನು ದೂರ ಮಾಡಿಕೊಳ್ಳುವಿರಿ, ಉದ್ಯೋಗ ವಿಚಾರದಲ್ಲಿ ಆತಂಕ, ಗೃಹ-ಸ್ಥಳ ಬದಲಾವಣೆಯಿಂದ ಸಮಸ್ಯೆ, ನೀವಾಡು ಮಾತಿನಿಂದ ತೊಂದರೆಗೆ ಸಿಲುಕುವಿರಿ.

ಕನ್ಯಾ: ಕಾರಣವಿಲ್ಲದೇ ನಷ್ಟ ಅನುಭವಿಸುವಿರಿ, ಕುಟುಂಬದಲ್ಲಿ ಒತ್ತಡ, ಅರ್ಥಿಕ ಸಮಸ್ಯೆಗಳಿಂದ ದುರಂತ, ಮನಸ್ಸಿಗೆ ಆಲೋಚನೆ, ಪ್ರಯಾಣದಲ್ಲಿ ಹಿನ್ನಡೆ, ದಾಯಾದಿಗಳ ಕಲಹ.

ತುಲಾ: ಆರೋಗ್ಯದಲ್ಲಿ ಏರುಪೇರು, ಉದ್ಯೋಗಕ್ಕೆ ಗೈರಾಗುವ ಸಾಧ್ಯತೆ, ಮಿತ್ರರಿಂದ ಕಲಹಗಳಿಗೆ ಮುಕ್ತಿ, ಉದ್ಯಮ-ವ್ಯಾಪಾರದಲ್ಲಿ ನಷ್ಟ, ವ್ಯವಹಾರಗಳಲ್ಲಿ ಎಚ್ಚರ.

ವೃಶ್ಚಿಕ: ಸಂಗಾತಿಯಲ್ಲಿ ಅಹಂಭಾವ, ಸಾಲ ಬಾಧೆ, ಶತ್ರುಗಳ ಕಾಟ, ಉದ್ಯೋಗದಲ್ಲಿ ವೈರಿಗಳಿಂದ ತೊಂದರೆ, ಒತ್ತಡದಿಂದ ನಿದ್ರಾಭಂಗ, ಶತ್ರುಗಳು ಸಂಕಷ್ಟಕ್ಕೆ ಸಿಲುಕುವರು.

ಧನಸ್ಸು: ಮಕ್ಕಳೊಂದಿಗೆ ಮನಃಸ್ತಾಪ, ಸಾಲ ತೀರಿಸಲು ಸಾಹಸ, ಮಾನಸಿಕ ವೇದನೆ, ಆದಾಯ ಪ್ರಮಾಣ ಕುಂಠಿತ.

ಮಕರ: ಪ್ರೀತಿ ಪ್ರೇಮ ವಿಚಾರಗಳಲ್ಲಿ ಕಲಹ, ಅನಿರೀಕ್ಷಿತ ಉದ್ಯೋಗ ನಷ್ಟ, ಮನಸ್ಸಿನಲ್ಲಿ ಆತಂಕ, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ, ಸಂತಾನ ದೋಷದಿಂದ ವ್ಯಥೆ.

ಕುಂಭ: ಸ್ಥಿರಾಸ್ತಿ-ವಾಹನ ನಷ್ಟ ಸಾಧ್ಯತೆ, ಅನ್ಯರಿಂದ ಸಾಲ ಕೇಳುವಿರಿ, ವಿಪರೀತ ಧೈರ್ಯ, ಸಾಹಸ ಮಾಡಲು ಯತ್ನಿಸುವಿರಿ, ನತದೃಷ್ಟರೆಂಬ ಮನಸ್ಥಿತಿ ನಿರ್ಮಾಣ.

ಮೀನ: ಆತ್ಮೀಯರು ದೂರವಾಗುವರೆಂಬ ಆತಂಕ, ಮಾನಸಿಕ ನೆಮ್ಮದಿ ಲಭಿಸುವ ಸಾಧ್ಯತೆ, ಕೋರ್ಟ್ ಕೇಸ್‍ಗಳಲ್ಲಿ ಜಯದ ಮುನ್ಸೂಚನೆ, ಮಕ್ಕಳ ವಿದ್ಯಾಭ್ಯಾಸ ಹಣಕಾಸು ಚಿಂತನೆ.

Share This Article
Leave a Comment

Leave a Reply

Your email address will not be published. Required fields are marked *