ದಿನ ಭವಿಷ್ಯ 22-10-2025

Public TV
1 Min Read

ರಾಹುಕಾಲ – 12:07 ರಿಂದ 1: 36
ಗುಳಿಕಕಾಲ – 10:39 ರಿಂದ 12:07
ಯಮಗಂಡಕಾಲ – 7:43 ರಿಂದ 9:11

ವಾರ : ಬುಧವಾರ, ತಿಥಿ : ಪಾಡ್ಯ, ನಕ್ಷತ್ರ : ಸ್ವಾತಿ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಶುಕ್ಲ ಪಕ್ಷ

ಮೇಷ: ಈ ದಿನ ತಾಯಿಯ ಆರೈಕೆ, ಪ್ರಿಯ ಜನರ ಭೇಟಿ, ಋಣ ವಿಮೋಚನೆ, ಅಲ್ಪ ಲಾಭ ಖರ್ಚು ಜಾಸ್ತಿ, ಸಂತಾನ ಪ್ರಾಪ್ತಿ.

ವೃಷಭ: ಈ ದಿನ ಸಲ್ಲದ ಅಪವಾದ, ದಾಯಾದಿ ಕಲಹ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ.

ಮಿಥುನ: ನೌಕರಿಯಲ್ಲಿ ಕಿರಿಕಿರಿ, ಮಹಿಳೆಯರಿಗೆ ತೊಂದರೆ, ಶರೀರದಲ್ಲಿ ತಳಮಳ, ಮಾತಿನಲ್ಲಿ ಹಿಡಿತವಿರಲಿ, ಸಾಲಭಾದೆ.

ಕಟಕ: ಈ ದಿನ ದೂರ ಪ್ರಯಾಣ, ಮಕ್ಕಳ ಅಗತ್ಯಕ್ಕೆ ಖರ್ಚು, ಹಿರಿಯರ ಸಲಹೆ, ಕೆಲಸವನ್ನ ಶ್ರಮವಹಿಸಿ ಮಾಡುವಿರಿ.

ಸಿಂಹ: ಈ ದಿನ ವ್ಯವಹಾರಗಳಲ್ಲಿ ಏರುಪೇರು, ಮಹಿಳೆಯರಿಗೆ ಶುಭ, ಅಕಾಲ ಭೋಜನ, ವಿನಾಕಾರಣ ದ್ವೇಷ, ಕಠೋರವಾಗಿ ಮಾತನಾಡುವಿರಿ.

ಕನ್ಯಾ: ಈ ದಿನ ದುರಾಲೋಚನೆ, ಹೇಳಿಕೆ ಮಾತನ್ನು ಕೇಳುವ ಸಂಭವ, ದಂಡ ಕಟ್ಟುವಿರಿ, ಗುರುಗಳ ಭೇಟಿ, ಎಷ್ಟೇ ಕಷ್ಟ ಬಂದರೂ ಮುನ್ನುಗುವಿರಿ.

ತುಲಾ: ಈ ದಿನ ಮಾತಿನ ಚಕಮಕಿ, ಪಿತ್ರಾರ್ಜಿತ ಆಸ್ತಿ ವಿವಾದ, ಮನಕ್ಲೇಶ, ಆರೋಗ್ಯದಲ್ಲಿ ಸಮಸ್ಯೆ, ಕೋಪ ಜಾಸ್ತಿ.

ವೃಶ್ಚಿಕ: ಈ ದಿನ ಕಾರ್ಯ ಸಾಧನೆ, ಅತಿಯಾದ ಪ್ರಯಾಣ, ಚೋರ ಭಯ, ತಾಳ್ಮೆ ಅಗತ್ಯ, ಅಪರಿಚಿತ ವ್ಯಕ್ತಿಗಳಿಂದ ತೊಂದರೆ.

ಧನಸ್ಸು: ದ್ರವರೂಪದ ವಸ್ತುಗಳಿಂದ ಲಾಭ, ವಿದೇಶ ಪ್ರಯಾಣ, ಕಾರ್ಯ ಸಾಧನೆ, ಬಾಕಿ ಹಣ ಕೈ ಸೇರುವುದು.

ಮಕರ: ಆಪ್ತ ಸ್ನೇಹಿತರ ಭೇಟಿ, ಷೇರು ವ್ಯವಹಾರಗಳಲ್ಲಿ ಅಲ್ಪ ಲಾಭ, ಸುಖ ಭೋಜನ, ಶತ್ರುಗಳು ಮಿತ್ರರಾಗುವ ಸುದಿನ.

ಕುಂಭ: ಈ ದಿನ ಕುಟುಂಬ ಸೌಖ್ಯ, ದಾಂಪತ್ಯದಲ್ಲಿ ಪ್ರೀತಿ, ಹಿತ ಶತ್ರುಭಾದೆ, ಉನ್ನತ ಸ್ಥಾನಮಾನ, ಅನ್ಯರ ಸಹಕಾರದಿಂದ ಉತ್ತಮ ಪ್ರಗತಿ.

ಮೀನ: ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ವಿವಾಹ ಯೋಗ, ಸ್ಥಿರಾಸ್ತಿ ಪ್ರಾಪ್ತಿ, ಅಪವಾದದಿಂದ ಮುಕ್ತಿ, ಪರರಿಗೆ ಸಹಾಯ.

Share This Article