ಪಂಚಾಂಗ
ಸಂವತ್ಸರ: 1948, ಪರಾಭವ
ಋತು: ವಸಂತ, ಅಯನ: ಉತ್ತರಾಯಣ
ಮಾಸ: ಚೈತ್ರ, ಪಕ್ಷ: ಶುಕ್ಲ
ತಿಥಿ: ಚೌತಿ, ನಕ್ಷತ್ರ: ಭರಣಿ
ರಾಹುಕಾಲ: 04:59 – 06:30
ಗುಳಿಕಕಾಲ: 03:28 – 04:59
ಯಮಗಂಡಕಾಲ: 12:26 – 01:57
ಮೇಷ: ದಾಂಪತ್ಯದಲ್ಲಿ ವಿರಸ, ವಿದ್ಯಾರ್ಥಿಗಳಿಗೆ ಪ್ರಗತಿ, ಮನೆಗೆ ಆತ್ಮೀಯರ ಆಗಮನ.
ವೃಷಭ: ಷೇರು ಹೂಡಿಕೆಗೆ ಸಕಾಲ, ಅನಗತ್ಯ ಮಾತಿನಿಂದ ತೊಂದರೆ, ಅಕ್ಕಪಕ್ಕದವರಿಂದ ಮನಸ್ಸಿಗೆ ಕಿರಿಕಿರಿ.
ಮಿಥುನ: ಹೊಸ ವ್ಯಾಪಾರ ಆರಂಭಕ್ಕೆ ಶುಭ, ವೃತ್ತಿಜೀವನದಲ್ಲಿ ಗೌರವ, ಆರ್ಥಿಕ ಒತ್ತಡ.
ಕಟಕ: ಸಂತಾನ ಯೋಗ, ಕುಟುಂಬದಲ್ಲಿ ಸುಖ ಶಾಂತಿ, ಪಾಲುದಾರಿಕೆ ವ್ಯವಹಾರದಲ್ಲಿ ಜಾಗ್ರತೆ.
ಸಿಂಹ: ಅತಿಯಾದ ಆಲಸ್ಯ, ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿವೆ, ವೃತ್ತಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ.
ಕನ್ಯಾ: ಗೌರವ ಮತ್ತು ಪ್ರತಿಷ್ಠೆ, ಸ್ಥಿರಾಸ್ತಿ ಲಾಭ, ಮಾತಿನಲ್ಲಿ ಇತಿಮಿತಿ ಇರಲಿ.
ತುಲಾ: ವಾಹನ ಚಲಾಯಿಸುವಾಗ ಎಚ್ಚರ, ಕೋರ್ಟ್ ವ್ಯವಹಾರದಲ್ಲಿ ಮುನ್ನಡೆ, ಮಾನಸಿಕ ಮತ್ತು ಕೌಟುಂಬಿಕ ಕಷ್ಟ.
ವೃಶ್ಚಿಕ: ಸಕಾರಾತ್ಮಕ ಬದಲಾವಣೆ, ಪುಣ್ಯಕ್ಷೇತ್ರ ದರ್ಶನ, ಸಾಲ ಮರುಪಾವತಿ.
ಧನಸ್ಸು: ಸಂಬಂಧಗಳಲ್ಲಿ ನಿಕಟತೆ, ಸರ್ಕಾರಿ ಕೆಲಸಗಳಲ್ಲಿ ಜಯ, ಕೆಲಸಗಳಲ್ಲಿ ಮಂದಗತಿ.
ಮಕರ: ಹಿರಿಯ ಆಧಿಕಾರಿಗಳಿಂದ ತೊಂದರೆ, ಕೃಷಿಕರಿಗೆ ಲಾಭ ಹೆಚ್ಚು, ಆಪ್ತರಿಂದ ಸಿಗದ ಸಹಾಯ.
ಕುಂಭ: ನಂಬಿಕೆ ದ್ರೋಹ, ಅನವಶ್ಯಕ ವಿಚಾರಕ್ಕೆ ತಲೆಹಾಕದಿರಿ, ಆಭರಣ ಖರೀದಿ.
ಮೀನ: ವಸ್ತ್ರಾಲಂಕಾರ ಮಾಡುವವರಿಗೆ ಶುಭ, ಬಂಧುಗಳೊಂದಿಗೆ ಭಿನ್ನಾಭಿಪ್ರಾಯ, ಹೊಸ ಕೆಲಸ ಪ್ರಾರಂಭಿಸುವ ಮುನ್ನ ಎಚ್ಚರ.

