ದಿನ ಭವಿಷ್ಯ 20-11-2025

Public TV
1 Min Read

ಪಂಚಾಂಗ
ಶ್ರೀ ವಿಶ್ವಾವಸುನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಕಾರ್ತಿಕ ಮಾಸ, ಕೃಷ್ಣ ಪಕ್ಷ,
ಅಮಾವಾಸ್ಯೆ / ಪ್ರಥಮಿ,
ಗುರುವಾರ, ವಿಶಾಖ ನಕ್ಷತ್ರ / ಅನುರಾಧ ನಕ್ಷತ್ರ

ರಾಹುಕಾಲ: 01:36 ರಿಂದ 03:02
ಗುಳಿಕಕಾಲ: 09:16 ರಿಂದ 10:43
ಯಮಗಂಡಕಾಲ: 06:23 ರಿಂದ 07:50

ಮೇಷ: ಆಕಸ್ಮಿಕ ದುರ್ಘಟನೆಯಿಂದ ಮಾನಸಿಕ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರುವ ಸನ್ನಿವೇಶ.

ವೃಷಭ: ದಾಂಪತ್ಯದಲ್ಲಿ ಆಲಸ್ಯ, ಉದ್ಯೋಗದ ಭರವಸೆ, ಸಂಗಾತಿಯಿಂದ ಅದೃಷ್ಟ.

ಮಿಥುನ: ಸಾಲ ಮಾಡುವ ಸಂಭವ, ಕುಟುಂಬ ಸಮೇತ ಪ್ರಯಾಣ, ಮಾತಿನಿಂದ ಶತ್ರುಗಳು ಅಧಿಕ.

ಕಟಕ: ಪ್ರೀತಿ ಪ್ರೇಮ ವಿಚಾರದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು, ಆಸೆ ಆಕಾಂಕ್ಷೆ ಭಾವನೆಗಳಿಗೆ ಪೆಟ್ಟು.

ಸಿಂಹ: ಮನೆಯ ವಾತಾವರಣ ಕಲುಷಿತ, ಸ್ನೇಹಿತರಿಂದ ದೂರವಾಗುವ ಮನಸ್ಸು, ವಿಕೃತ ಆಸೆಗಳಿಗೆ ಬಲಿ.

ಕನ್ಯಾ: ನೆರೆಹೊರೆಯವರೊಡನೆ ಕಿರಿಕಿರಿ, ಸಹೋದರಿಯೊಡನೆ ವೈರತ್ವ, ಮಕ್ಕಳಿಗೆ ಉನ್ನತ ಹುದ್ದೆ.

ತುಲಾ: ಕುಟುಂಬ ಸಮಸ್ಯೆಗಳಿಂದ ಮುಕ್ತಿ, ಉತ್ತಮ ಧನಾಗಮನ, ಮಾನಸಿಕ ನೆಮ್ಮದಿ ಪ್ರಾಪ್ತಿ.

ವೃಶ್ಚಿಕ: ಹಳೆಯ ವಸ್ತುವಿನಿಂದ ಪೆಟ್ಟು, ಅವಕಾಶ ವಂಚಿತರಾಗುವಿರಿ, ಮಾನಸಿಕ ಕುಪಿತಕ್ಕೆ ಒಳಗಾಗುವಿರಿ.

ಧನಸ್ಸು: ಅಧಿಕ ನಿದ್ರೆ, ಆತ್ಮೀಯರು ದೂರ, ಕುಟುಂಬ ನಷ್ಟಕ್ಕೆ ಈಡಾಗುವುದು, ಮನೋರೋಗಿಯಾಗುವಿರಿ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಗುಪ್ತ ಆಸೆಗಳು ಈಡೇರುವ ಸಂಭವ, ಮಕ್ಕಳಿಂದ ಅನುಕೂಲ.

ಕುಂಭ: ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ಕೂಲಿಗಾರರು, ಬಾಡಿಗೆದಾರರಿಂದ ನಷ್ಟ.

ಮೀನ: ಸಂತಾನ ದೋಷ, ತಂದೆ ಮಕ್ಕಳಲ್ಲಿ ಶತ್ರುತ್ವ, ಅವಕಾಶ ವಂಚಿತರಾಗುವಿರಿ, ಅಪಮಾನಗಳು.

Share This Article