ದಿನ ಭವಿಷ್ಯ: 19-04-2020

Public TV
2 Min Read

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಭಾನುವಾರ, ಪೂರ್ವಭಾದ್ರ ನಕ್ಷತ್ರ

ರಾಹುಕಾಲ: ಸಂಜೆ 5:02 ರಿಂದ 6:36
ಗುಳಿಕಕಾಲ: ಮಧ್ಯಾಹ್ನ 3:29 ರಿಂದ 5:02
ಯಮಗಂಡಕಾಲ: ಮಧ್ಯಾಹ್ನ 12:22 ರಿಂದ 1:56

ಮೇಷ: ಅಧಿಕ ಪ್ರಯಾಣ, ಸಂಪತ್ತು ಪ್ರಾಪ್ತಿ, ಶತ್ರುಗಳ ನಾಶ, ಅಕಾಲ ಭೋಜನ, ಪರರಿಂದ ಮೋಸ ಎಚ್ಚರಿಕೆ, ಸಮಾಜ ಸೇವಕರಿಗೆ ನಿಂದನೆ, ಇಲ್ಲ ಸಲ್ಲದ ಅಪವಾದ.

ವೃಷಭ: ಮಿತ್ರರಿಂದ ಸಹಾಯ, ಸ್ವಯಂಕೃತ ಅಪರಾಧ, ಮಾನಸಿಕ ವ್ಯಥೆ, ವಾಹನ ಅಪಘಾತ, ಸಾಲದಿಂದ ಮುಕ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ದಾಂಪತ್ಯದಲ್ಲಿ ಪ್ರೀತಿ.

ಮಿಥುನ: ಕೆಲಸ ಕಾರ್ಯಗಳಲ್ಲಿ ವಿಳಂಬ, ದಿನಸಿ ವ್ಯಾಪಾರಿಗಳಿಗೆ ಅಧಿಕ ಲಾಭ, ಮನೇಲಿ ಶುಭ ಕಾರ್ಯ, ಆದಾಯಕ್ಕಿಂತ ಖರ್ಚು ಹೆಚ್ಚು, ಅನ್ಯ ಜನರಲ್ಲಿ ಕಲಹ, ಮನಃಕ್ಲೇಷ.

ಕಟಕ: ಅಮೂಲ್ಯ ವಸ್ತುಗಳ ಖರೀದಿ, ಬಹು ಧನ ಲಾಭ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಏರುಪೇರು, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಲ್ಲಿ ಮುನ್ನಡೆ, ಮಾನಸಿಕ ಅಶಾಂತಿ.

ಸಿಂಹ: ಸ್ವಪ್ರಯತ್ನದಿಂದ ಕಾರ್ಯ ಸಿದ್ಧಿ, ವ್ಯವಹಾರದಲ್ಲಿ ಮಾತಿನ ಚಕಮಕಿ, ರಾಜಕೀಯ ವ್ಯಕ್ತಿಗಳಿಗೆ ನಿಂದನೆ, ವಿವಾಹ ಯೋಗ, ನೆರೆಹೊರೆಯವರ ಬಳಿ ಸೌಜನ್ಯದಿಂದ ವರ್ತಿಸಿ, ತಾಳ್ಮೆಯಿಂದ ಯಶಸ್ಸು.

ಕನ್ಯಾ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಪ್ರತಿಭೆಗೆ ತಕ್ಕ ಗೌರವ, ಅಧಿಕಾರ ಪ್ರಾಪ್ತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಶತ್ರುತ್ವ ಹೆಚ್ಚಾಗುವುದು, ಸುಖ ಭೋಜನ.

ತುಲಾ: ಸ್ತ್ರೀಯರಿಗೆ ಅನುಕೂಲ, ಉತ್ತಮ ಬುದ್ಧಿಶಕ್ತಿ, ಋಣ ಬಾಧೆ, ಅಧಿಕವಾದ ಖರ್ಚು, ಸುಳ್ಳು ಮಾತನಾಡುವುದು, ವಿರೋಧಿಗಳಿಂದ ತೊಂದರೆ, ಅಭಿವೃದ್ಧಿ ಕುಂಠಿತ, ಶತ್ರುಗಳ ಬಾಧೆ.

ವೃಶ್ಚಿಕ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ನಂಬಿದ ಜನರಿಂದ ಮೋಸ, ಋಣ ಬಾಧೆ, ಹಿರಿಯರಲ್ಲಿ ಭಕ್ತಿ, ಓದಿನ ಹೆಚ್ಚು ಆಸಕ್ತಿ, ತೀರ್ಥಕ್ಷೇತ್ರಕ್ಕೆ ಹೋಗುವ ಮನಸ್ಸು.

ಧನಸ್ಸು: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಅನಿರೀಕ್ಷಿತ ಧನ ಲಾಭ, ಪ್ರಯಾಣಕ್ಕೆ ಮನಸ್ಸು, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ತಮ್ಮ ಕಷ್ಟಕ್ಕೆ ಪ್ರತಿಫಲ ಲಭಿಸುವುದು, ಮನಸ್ಸಿಗೆ ಸಂತೋಷದಾಯಕ.

ಮಕರ: ಅನಾವಶ್ಯಕ ಮಾತುಗಳಿಂದ ದೂರವಿರಿ, ಮಾನಸಿಕ ವ್ಯಥೆ, ದುಷ್ಟ ಜನರಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಜಯ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಬಡ್ತಿ.

ಕುಂಭ: ಬುದ್ಧಿವಂತಿಕೆಯಿಂದ ಕೆಲಸಗಳಲ್ಲಿ ಜಯ, ಇಷ್ಟಾರ್ಥ ಸಿದ್ಧಿ, ಪ್ರಿಯ ಜನರ ಭೇಟಿ, ಕೃಷಿಯಲ್ಲಿ ಲಾಭ, ಸ್ತ್ರೀಯರಿಗೆ ಶುಭ, ಸ್ಥಿರಾಸ್ತಿ ಸಂಪಾದನೆ, ಕಾರ್ಯ ವಿಘಾತ.

ಮೀನ: ಹೊಸ ವ್ಯವಹಾರದಿಂದ ಲಾಭ, ದ್ರವ್ಯ ಲಾಭ, ಆರೋಗ್ಯ ವೃದ್ಧಿ, ಕ್ರಯ-ವಿಕ್ರಯಗಳಲ್ಲಿ ನಷ್ಟ, ವಾಹನ ರಿಪೇರಿ, ಅನ್ಯ ಜನರಲ್ಲಿ ವೈಮನಸ್ಸು, ಶತ್ರುಗಳ ಬಾಧೆ.

Share This Article
Leave a Comment

Leave a Reply

Your email address will not be published. Required fields are marked *