ದಿನ ಭವಿಷ್ಯ: 19-04-20025

Public TV
1 Min Read

ಶ್ರೀ ವಿಶ್ವಾವಸುನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣ ಪಕ್ಷ,
ಷಷ್ಟಿ, ಶನಿವಾರ,
ಮೂಲ ನಕ್ಷತ್ರ / ಪೂರ್ವಾಷಾಡ ನಕ್ಷತ್ರ

ರಾಹುಕಾಲ: 09:16 ರಿಂದ 10:49
ಗುಳಿಕಕಾಲ: 06:09 ರಿಂದ 07:43
ಯಮಗಂಡಕಾಲ: 01:56 ರಿಂದ 03:29

ಮೇಷ: ಪ್ರಯಾಣ ಮಾಡುವ ಸಂದರ್ಭ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಮಕ್ಕಳಲ್ಲಿ ಚುರುಕುತನ.

ವೃಷಭ: ಉತ್ತಮ ಅವಕಾಶ, ರಾಜಯೋಗದ ದಿವಸ, ಉದ್ಯೋಗ ಲಾಭ, ಮಕ್ಕಳ ಆರೋಗ್ಯದಲ್ಲಿ ಏರುಪೇರು.

ಮಿಥುನ: ಆರ್ಥಿಕ ಸಮಸ್ಯೆ ಬಗೆಹರಿಯುವುದು, ಪ್ರಯಾಣದಲ್ಲಿ ತೊಂದರೆ, ಕೆಲಸಕಾರ್ಯಗಳಲ್ಲಿ ಹಿನ್ನಡೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕಟಕ: ಆರೋಗ್ಯ ಸಮಸ್ಯೆ ಕಾಡುವುದು, ಸಂಗಾತಿಯಿಂದ ಅಪಮಾನ, ಕಲಾ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ.

ಸಿಂಹ: ಉದ್ಯೋಗ ಲಾಭ, ಬಂಧುಗಳೊಡನೆ ಉತ್ತಮ ಬಾಂಧವ್ಯ, ನೀರು ಇರುವ ಸ್ಥಳದಲ್ಲಿ ಎಚ್ಚರಿಕೆ.

ಕನ್ಯಾ: ನ್ಯಾಯಬದ್ಧವಾಗಿ ನಡೆಯುವಿರಿ, ಉದ್ಯೋಗ ಸ್ಥಳದಲ್ಲಿ ಉತ್ತಮ ವಾತಾವರಣ, ಪತ್ರ ವ್ಯವಹಾರಗಳಿಗೆ ಅನುಕೂಲ.

ತುಲಾ: ಮಕ್ಕಳಿಂದ ಉತ್ತಮ ಸಹಕಾರ, ವೈವಾಹಿಕ ಜೀವನದಲ್ಲಿ ಸಂಶಯ, ಸೌಂದರ್ಯವರ್ಧಕ ವಸ್ತುಗಳಿಂದ ಅನಾನುಕೂಲ.

ವೃಶ್ಚಿಕ: ಅಧಿಕ ಖರ್ಚು, ಮಾನಸಿಕ ನೆಮ್ಮದಿ ಭಂಗ, ತಂದೆಯಿಂದ ಧನಾಗಮನ, ಪ್ರಯಾಣದಲ್ಲಿ ಅನುಕೂಲ.

ಧನಸ್ಸು: ಮಕ್ಕಳಿಂದ ನೋವು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮುಖ್ಯ ನಿರ್ಧಾರಗಳಿಂದ ದೂರವಿರಿ, ಆರೋಗ್ಯದಲ್ಲಿ ವ್ಯತ್ಯಾಸ.

ಮಕರ: ಪಾಲುದಾರಿಕೆಯಲ್ಲಿ ಉತ್ತಮ ಲಾಭ, ವಿದ್ಯಾಭ್ಯಾಸದಲ್ಲಿ ಉತ್ಸಾಹ, ವಾಹನ ಮತ್ತು ಭೂಮಿ ಖರೀದಿಯಿಂದ ಲಾಭ.

ಕುಂಭ: ಕಾರ್ಮಿಕರ ಕೊರತೆ ಬಗೆಹರಿಯುವುದು, ಶತ್ರುಗಳು ಮಿತ್ರರಾಗುವರು, ಉನ್ನತ ವಿದ್ಯಾಭ್ಯಾಸ ಯೋಗ, ಸ್ವಯಂಕೃತ ಅಪರಾಧಗಳಿಂದ ತೊಂದರೆ.

ಮೀನ: ಮಹಿಳೆಯರೊಂದಿಗೆ ಎಚ್ಚರ, ಉದ್ಯೋಗ ಸ್ಥಳದಲ್ಲಿ ಆರ್ಥಿಕ ಸಮಸ್ಯೆಗಳು, ಅಧಿಕ ಪ್ರಯಾಣದಿಂದ ತೊಂದರೆ.

Share This Article