ಶ್ರೀ ವಿಶ್ವವಸು ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಕೃಷ್ಣ ಪಕ್ಷ
ವಾರ: ಸೋಮವಾರ, ತಿಥಿ: ತ್ರಯೋದಶಿ
ನಕ್ಷತ್ರ : ಚಿತ್ತ
ರಾಹುಕಾಲ: 7.47 ರಿಂದ 9.14
ಗುಳಿಕಕಾಲ: 1.35 ರಿಂದ 3.02
ಯಮಗಂಡಕಾಲ: 10.41 ರಿಂದ 12.08
ಮೇಷ: ಈ ದಿನ ಋಣಭಾದೆ ಹೆಚ್ಚುತ್ತದೆ, ಕುಟುಂಬದಲ್ಲಿ ಅಹಿತಕರ ವಾತಾವರಣ, ಆರ್ಥಿಕ ಪರಿಸ್ಥಿತಿ ಏರುಪೇರು, ಅಲ್ಪ ಲಾಭ.
ವೃಷಭ: ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ, ಮನೆಯ ಬಗ್ಗೆ ಹೆಚ್ಚು ಗಮನ, ಸಾಧಾರಣ ಫಲ.
ಮಿಥುನ: ಈ ದಿನ ದೇವತಾ ಕಾರ್ಯ, ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ನಿರೀಕ್ಷಿತ ಆದಾಯ, ವಿನಾಕಾರಣ ನಿಷ್ಠುರ.
ಕಟಕ: ಹೊಸ ವ್ಯಕ್ತಿಗಳ ಪರಿಚಯ, ಹಿರಿಯರೊಂದಿಗೆ ಮಾತುಕತೆ, ಗೆಳತಿಗೆ ಸಹಾಯ, ಮನಸ್ಸಿನಲ್ಲಿ ಸದಾ ಸಂಕಟ.
ಸಿಂಹ: ಗುತ್ತಿಗೆ ಕೆಲಸಗಾರರಿಗೆ ಹೆಚ್ಚು ಅನುಕೂಲ, ಅವಕಾಶಗಳನ್ನ ಸದುಪಯೋಗ ಪಡಿಸಿಕೊಳ್ಳುವಿರಿ, ಆರೋಗ್ಯ ಸಮಸ್ಯೆ.
ಕನ್ಯಾ: ದಾನ ಧರ್ಮ ಕಾರ್ಯಗಳಲ್ಲಿ ಭಾಗಿ, ಧನಾತ್ಮಕ ಚಿಂತನೆಯಿಂದ ಯಶಸ್ಸು, ಮಹಿಳೆಯರಿಗೆ ವಿಶೇಷ, ಸುಖ ಭೋಜನ.
ತುಲ: ಉದ್ಯೋಗ ಪ್ರಾಪ್ತಿ, ಸಾಲಭಾದೆ ನಿವಾರಣೆ, ಗ್ಯಾಸ್ಟಿಕ್ ಸಮಸ್ಯೆ, ಕಾಲು ನೋವು, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾ ಭಂಗ.
ವೃಶ್ಚಿಕ: ಅತಿಯಾದ ಒಳ್ಳೆಯತನ, ಬೇಜವಾಬ್ದಾರಿತನದಿಂದ ಸಂಕಷ್ಟ, ಮನಕ್ಲೇಶ, ಕೋರ್ಟ್ ಕೇಸ್‌ಗಳಲ್ಲಿ ಚಿಂತೆ.
ಧನಸ್ಸು: ಭೋಗ ವಸ್ತು ಪ್ರಾಪ್ತಿ, ಅತಿಯಾದ ನಿದ್ರೆ, ಮಿತ್ರರಿಂದ ಸಹಾಯ, ಕಾರ್ಯ ಸಾಧನೆ, ಅಧಿಕಾರ ಪ್ರಾಪ್ತಿ.
ಮಕರ: ಈ ದಿನ ಮಾನಸಿಕ ವೇದನೆ, ಕೆಟ್ಟ ಆಲೋಚನೆ, ವಿವಾಹ ಯೋಗ, ಅಕಾಲ ಭೋಜನ, ವ್ಯಾಸಂಗದಲ್ಲಿ ತೊಂದರೆ.
ಕುಂಭ: ಈ ದಿನ ಆತ್ಮೀಯರಿಂದ ಸಹಾಯ, ಅಧಿಕ ಖರ್ಚು, ಸ್ಥಿರಾಸ್ತಿ ಖರೀದಿ, ಪ್ರಿಯ ಜನರ ಭೇಟಿ, ಪರರ ಧನ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ.
ಮೀನ: ಕೆಲಸದಲ್ಲಿ ಮತ್ತಷ್ಟು ಏಕಾಗ್ರತೆ, ದುಷ್ಟ ಜನರ ಸಹವಾಸ, ವಾತ ಪಿತ್ತಗಳಿಂದ ದೇಹದಲ್ಲಿ ತೊಂದರೆ.
