ದಿನ ಭವಿಷ್ಯ 17-11-2024

Public TV
1 Min Read

ಕ್ರೋಧಿನಾಮ ಸಂವತ್ಸರ, ಶರದ್ ಋತು
ದಕ್ಷಿಣಾಯನ, ಕಾರ್ತಿಕ ಮಾಸ :
ಕೃಷ್ಣ ಪಕ್ಷ , ಬಿದಿಗೆ ತಿಥಿ, ರೋಹಿಣಿ ನಕ್ಷತ್ರ

ರಾಹುಕಾಲ – 04:23 – 05:50
ಗುಳಿಕಕಾಲ – 02:57 – 04:23
ಯಮಗಂಡಕಾಲ – 12:04 – 01:30

ಮೇಷ: ಸ್ತ್ರೀಯರಿಗೆ ಖರ್ಚು ಜಾಸ್ತಿ, ಕೆಲಸಕ್ಕೆ ತಕ್ಕ ಪ್ರತಿಫಲ, ಋಣ ಬಾಧೆ ಪರಿಹಾರ.

ವೃಷಭ: ಕೌಟುಂಬಿಕ ಅನ್ಯೋನ್ಯತೆ, ಬಟ್ಟೆ ವ್ಯಾಪಾರಿಗಳಿಗೆ ಧನಾಗಮನ, ಹಿರಿಯ ಅಧಿಕಾರಿಗಳಿಂದ ಗೌರವ ಲಭ್ಯ.

ಮಿಥುನ: ವಾಹನದಿಂದ ತೊಂದರೆ, ಶುಭಕಾರ್ಯಗಳಲ್ಲಿ ಭಾಗಿ, ಪಾಲುದಾರಿಕೆಯಲ್ಲಿ ಅನುಕೂಲ.

ಕಟಕ: ಸಣ್ಣ ಪುಟ್ಟ ವಿಷಯದಲ್ಲಿ ಕಲಹ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮಿತ್ರರಿಂದ ನಂಬಿಕೆ ದ್ರೋಹ.

ಸಿಂಹ: ನಿರ್ಧಾರ ಬದಲಾವಣೆಯಿಂದ ಹಿನ್ನಡೆ, ಗುರುಹಿರಿಯರಲ್ಲಿ ಭಕ್ತಿ, ಉದರ ಭಾದೆ.

ಕನ್ಯಾ: ಆಸ್ತಿಯ ವಿಚಾರದಲ್ಲಿ ಕಲಹ, ಅನಗತ್ಯ ತಿರುಗಾಟ, ಆಲಸ್ಯ ಮನೋಭಾವ.

ತುಲಾ: ಭೂ ವ್ಯವಹಾರದಲ್ಲಿ ಲಾಭ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಗೆಳೆಯರ ಸಹಕಾರ.

ವೃಶ್ಚಿಕ: ಪತ್ರಿಕಾ ಪ್ರತಿನಿಧಿಗಳಿಗೆ ಸನ್ಮಾನ, ಗೃಹ ನೋಂದಣಿ ಕೆಲಸದಲ್ಲಿ ಜಯ, ವಿದ್ಯೆಯಲ್ಲಿ ಅಭಿವೃಧ್ಧಿ.

ಧನು: ಅನಗತ್ಯ ಹಸ್ತಕ್ಷೇಪ ಬೇಡ, ಆರ್ಥಿಕ ಲಾಭ, ಹಿರಿಯರ ಸಲಹೆ ಪಡೆಯಿರಿ.

ಮಕರ: ಸ್ಥಿರಾಸ್ತಿ ವಿಷಯದಲ್ಲಿ ಎಚ್ಚರ ಆಗತ್ಯ, ಆರೋಗ್ಯದ ಬಗ್ಗೆ ಗಮನಹರಿಸಿ, ವಾದ ವಿವಾದಗಳಿಂದ ದೂರವಿರಿ.

ಕುಂಭ: ಉತ್ತಮ ಆದಾಯ, ವಾಹನ ಖರೀದಿ ಯೋಗ, ವಿರೋಧಿಗಳಿಂದ ತೊಂದರೆ.

ಮೀನ: ಅಪವಾದದಿಂದ ಪಾರು, ವ್ಯಾಜ್ಯಗಳಲ್ಲಿ ಜಯ, ನೆರೆಹೊರೆಯವರಿಂದ ಸಮಸ್ಯೆ.

Share This Article