ದಿನ ಭವಿಷ್ಯ 16-01-2020

Public TV
1 Min Read

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಗುರುವಾರ, ಹಸ್ತ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:59 ರಿಂದ 3:25
ಗುಳಿಕಕಾಲ: ಬೆಳಗ್ಗೆ 9:41 ರಿಂದ 11:07
ಯಮಗಂಡಕಾಲ: ಬೆಳಗ್ಗೆ 6:48 ರಿಂದ 8:15

ಮೇಷ: ಮಾನಸಿಕ ವ್ಯಥೆ, ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ಮಾನಸಿಕ ಹಿಂಸೆ, ಆಸ್ತಿ ತಗಾದೆ ಕೋರ್ಟ್ ಮೊರೆ.

ವೃಷಭ: ಹಣಕಾಸು ವಿಚಾರವಾಗಿ ಗೌರವಕ್ಕೆ ಧಕ್ಕೆ, ದುಶ್ಚಟಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ನೆರೆಹೊರೆಯವರೊಂದಿಗೆ ವೈಮನಸ್ಸು, ಬಂಧುಗಳಿಂದ ಕಿರಿಕಿರಿ.

ಮಿಥುನ: ಸ್ಥಿರಾಸ್ತಿಯಿಂದ ನಷ್ಟ, ಬಾಯಿ ಹುಣ್ಣು, ನರ ದೌರ್ಬಲ್ಯ, ಚರ್ಮ ತುರಿಕೆ, ಆರೋಗ್ಯದಲ್ಲಿ ಏರುಪೇರು, ತಾಯಿಗೆ ಅನಾರೋಗ್ಯ.

ಕಟಕ: ಆತ್ಮೀಯರಿಂದಲೇ ಮೋಸ, ಬಂಧು ಮಿತ್ರರಿಂದ ನಷ್ಟ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ತಂದೆಯಿಂದ ಮಾನಸಿಕ ಕಿರಿಕಿರಿ.

ಸಿಂಹ: ಹೊಸ ವಸ್ತು ಖರೀದಿಯಿಂದ ನಷ್ಟ, ಮನಸ್ಸಿನಲ್ಲಿ ಆತಂಕ, ಕನಸಿನಲ್ಲಿ ಸರ್ಪ ಪ್ರತ್ಯಕ್ಷ, ಕುಟುಂಬಕ್ಕೆ ಮಾಟ-ಮಂತ್ರದ ಆತಂಕ.

ಕನ್ಯಾ: ಮಿತ್ರರಿಂದ ಆಕಸ್ಮಿಕ ಲಾಭ, ತಂದೆಯಿಂದ ಬೈಗುಳ ಕೇಳುವಿರಿ, ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ, ಮಾನಸಿಕ ಕಿರಿಕಿರಿ.

ತುಲಾ: ಪ್ರಯಾಣದಲ್ಲಿ ನಷ್ಟ, ಆಕಸ್ಮಿಕ ಉದ್ಯೋಗ ಕಳೆದುಕೊಳ್ಳುವಿರಿ, ತಂದೆಯೊಂದಿಗೆ ವಾಗ್ವಾದ, ಆಲೋಚನೆಗಳಿಂದ ನಿದ್ರಾಭಂಗ.

ವೃಶ್ಚಿಕ: ಮಿತ್ರರಿಂದ ದಾಂಪತ್ಯದಲ್ಲಿ ಸಂಶಯ, ಕುಟುಂಬದಲ್ಲಿ ಮನಃಸ್ತಾಪ, ಅತಿಯಾದ ಆಸೆಗಳಿಂದ ಸಂಕಷ್ಟ, ಕೆಟ್ಟ ಆಲೋಚನೆಗಳಿಂದ ತೊಂದರೆ.

ಧನಸ್ಸು: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆಕಸ್ಮಿಕ ಅವಘಢ, ವಿಶ್ರಾಂತಿ ವೇತನಕ್ಕೆ ಅಡೆತಡೆ, ಗೌರವ ಸನ್ಮಾನದಿಂದ ವಂಚಿತರಾಗುವಿರಿ, ಆತುರ ಸ್ವಭಾವದಿಂದ ಸಂಕಷ್ಟ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಸಂಶಯ, ತಂದೆ ಮಾಡಿದ ಸಾಲದಿಂದ ಮಾನಹಾನಿ, ಪ್ರತಿಭೆಗೆ ತಕ್ಕ ಫಲ, ಸ್ಪರ್ಧಾತ್ಮಕ ಚಟುವಟಿಕೆಗಳಿಂದ ದೂರ ಉಳಿಯುವಿರಿ,

ಕುಂಭ: ವಾಹನ ಅಪಘಾತದಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಬಾಡಿಗೆದಾರರು-ಸೇವಕರಿಂದ ತೊಂದರೆ, ಆಕಸ್ಮಿಕ ಧನ ಯೋಗ, ಸಾಲ ದೊರೆಯುವ ಸಾಧ್ಯತೆ.

ಮೀನ: ಮಕ್ಕಳ ಬಗ್ಗೆ ಸಂಶಯ, ಮನಸ್ಸಿನಲ್ಲಿ ಆತಂಕ, ಶೀತ ಸಂಬಂಧಿತ ರೋಗ ಬಾಧೆ, ಶರೀರ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಿಚಾರದಲ್ಲಿ ಮೋಸ-ನಷ್ಟ.

Share This Article
Leave a Comment

Leave a Reply

Your email address will not be published. Required fields are marked *