ದಿನ ಭವಿಷ್ಯ 14-01-2024

Public TV
1 Min Read

ಶೋಭಕೃತ್ ಸಂವತ್ಸರ, ಹೇಮಂತ ಋತು
ದಕ್ಷಿಣಾಯನ, ಪುಷ್ಯ ಮಾಸ, ಶುಕ್ಲ ಪಕ್ಷ
ತದಿಗೆ ತಿಥಿ, ಧನಿಷ್ಠಾ ನಕ್ಷತ್ರ

ರಾಹುಕಾಲ – 04:45 ರಿಂದ 06:11
ಗುಳಿಕಕಾಲ – 03:19 ರಿಂದ 04:45
ಯಮಗಂಡಕಾಲ – 12:28 ರಿಂದ 01:54

ಮೇಷ: ಸುಖ ಭೋಜನ ಪ್ರಾಪ್ತಿ, ವ್ಯಾಸಂಗಕ್ಕೆ ತೊಂದರೆ, ದಾಂಪತ್ಯದಲ್ಲಿ ಅನ್ಯೋನ್ಯತೆ

ವೃಷಭ: ನಾಟಕ ಕಲಾವಿದರುಗಳಿಗೆ ಶುಭ, ನ್ಯಾಯಾಧೀಶರುಗರಳಿಗೆ ಒತ್ತಡ, ದೈಹಿಕ ಶ್ರಮದಿಂದ ಆಯಾಸ

ಮಿಥುನ: ವಿದ್ಯಾರ್ಥಿಗಳ ಪ್ರಗತಿಯಲ್ಲಿ ಮಂದಗತಿ, ಅಮೂಲ್ಯವಾದ ವಸ್ತುಗಳ ಬಗ್ಗೆ ಎಚ್ಚರ, ಸಂಗಾತಿಯ ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಳ

ಕರ್ಕಾಟಕ: ಅನಿರೀಕ್ಷಿತ ಖರ್ಚು ಎದುರಾಗುತ್ತದೆ, ಬಂಧುಗಳ ಆಗಮನ, ನೃತ್ಯಪಟುಗಳಿಗೆ ಶುಭ

ಸಿಂಹ: ಕುಟುಂಬ ಸದಸ್ಯರೊಂದಿಗೆ ಪ್ರವಾಸ, ಒಡಹುಟ್ಟಿದವರಿಂದ ಆಸ್ತಿ ವಿಚಾರದಲ್ಲಿ ತೊಂದರೆ, ಉದ್ಯಮದಲ್ಲಿನ ಏಳಿಗೆಯಿಂದ ಸಮಾಧಾನ

ಕನ್ಯಾ: ಆಸ್ತಿಯ ವಿಚಾರದಲ್ಲಿ ಶುಭ, ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತದೆ, ಅಹಂ ಬಿಟ್ಟು ಜನರೊಂದಿಗೆ ಹೊಂದಿಕೊಳ್ಳಿ

ತುಲಾ: ಗೃಹಿಣಿಯರಿಗೆ ಶುಭ, ಅಧಿಕಾರಿಗಳಿಂದ ತೊಂದರೆ, ರಕ್ತದ ಒತ್ತಡದ ಸಮಸ್ಯೆ ಕಾಡುತ್ತದೆ

ವೃಶ್ಚಿಕ: ಮಾತಿನಿಂದ ತೊಂದರೆ, ಆಹಾರದಲ್ಲಿ ಎಚ್ಚರಿಕೆ, ದೇವತಾ ಕಾರ್ಯಗಳಲ್ಲಿ ಭಾಗಿ

ಧನಸ್ಸು: ವಿದ್ಯುತ್ ಇಲಾಖೆಯವರಿಗೆ ಕಾರ್ಯದೊತ್ತಡ, ವಾಹನಗಳ ಮಾರಾಟಸ್ಥರಿಗೆ ಶುಭ, ಪ್ರೇಮಿಗಳಲ್ಲಿ ಜಗಳ

ಮಕರ: ಮಹಿಳೆಯರಿಗೆ ಶುಭ, ನಂಬಿಕಸ್ತರಿಂದ ಮೋಸ ಸಾಧ್ಯತೆ, ದೃಷ್ಟಿ ದೋಷ ಕಾಡಬಹುದು

ಕುಂಭ: ತಂದೆಯ ಆರೋಗ್ಯದಲ್ಲಿ ಎಚ್ಚರ, ಪ್ರಿಯ ಜನರ ಭೇಟಿ, ಹೋಟೆಲ್ ವ್ಯವಹಾರದಲ್ಲಿ ಆದಾಯ ಹೆಚ್ಚು

ಮೀನ: ಉದ್ಯೋಗದಲ್ಲಿದ್ದ ತೊಂದರೆಗಳು ನಿವಾರಣೆ, ಕೃಷಿಯಲ್ಲಿ ಅಭಿವೃದ್ಧಿ, ಮೆಡಿಕಲ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ

Share This Article