ದಿನ ಭವಿಷ್ಯ: 11-08-2024

Public TV
1 Min Read

ಸಂವತ್ಸರ: ಕ್ರೋಧಿನಾಮ
ಋತು: ಗ್ರೀಷ್ಮ, ಅಯನ: ದಕ್ಷಿಣಾಯನ
ಮಾಸ: ಶ್ರಾವಣ, ಪಕ್ಷ: ಶುಕ್ಲ
ತಿಥಿ: ಸಪ್ತಮಿ, ನಕ್ಷತ್ರ: ಸ್ವಾತಿ
ರಾಹುಕಾಲ: 05:08 – 06:42
ಗುಳಿಕಕಾಲ: 03:33 – 05:08
ಯಮಗಂಡಕಾಲ: 12:24 – 01:59

ಮೇಷ: ಬಟ್ಟೆ ವ್ಯಾಪಾರಸ್ಥರಿಗೆ ಉತ್ತಮ ಲಾಭ, ಒಡಹುಟ್ಟಿದವರೊಡನೆ ವಾಗ್ವಾದ ಬೇಡ, ಹೊಸ ವಾಹನ, ಮನೆ ಖರೀದಿ ಬೇಡ.

ವೃಷಭ: ಅತಿಯಾದ ತಿರುಗಾಟದಿಂದ ಆಯಾಸ, ವ್ಯಾಪಾರದಲ್ಲಿ ಧನಲಾಭ, ವಿವಾಹದಲ್ಲಿರುವ ವಿಘ್ನಗಳು ದೂರ.

ಮಿಥುನ: ಅಧಿಕಾರಿ ವರ್ಗದಿಂದ ತೊಂದರೆ, ಪುಸ್ತಕ ವ್ಯಾಪಾರದಲ್ಲಿ ಲಾಭ, ಮಕ್ಕಳ ಆರೋಗ್ಯದ ಕಡೆ ಗಮನವಿರಲಿ.

ಕರ್ಕಾಟಕ: ಕೃಷಿ ಉತ್ಪನ್ನಗಳಿಂದ ಲಾಭ, ಬಂಧು ಮಿತ್ರರೊಂದಿಗೆ ದೂರ ಪ್ರಯಾಣ, ವಿದ್ಯಾಭ್ಯಾಸದಲ್ಲಿ ತೊಂದರೆ.

ಸಿಂಹ: ಶ್ರಮಕ್ಕೆ ತಕ್ಕ ಪ್ರತಿಫಲ, ಸ್ನೇಹಿತರಿಂದ ಪ್ರೋತ್ಸಾಹ ಸಿಗಲಿದೆ, ಅತಿಯಾದ ಆತ್ಮವಿಶ್ವಾಸ ಅಪಾಯಕಾರಿ.

ಕನ್ಯಾ: ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ಭೂ ವ್ಯವಹಾರದಲ್ಲಿ ಆದಾಯ, ಸಣ್ಣ ಉದ್ಯಮಿಗಳಿಗೆ ಹೆಚ್ಚು ಲಾಭ.

ತುಲಾ: ವೃತ್ತಿ ಬಗ್ಗೆ ಕಾಳಜಿ ವಹಿಸಿ, ಪ್ರೀತಿಯ ವಿಷಯದಲ್ಲಿ ಬಿರುಕು, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಪ್ರಗತಿ.

ವೃಶ್ಚಿಕ: ಉದ್ಯೋಗಿಗಳಿಗೆ ಲಾಭವಾಗಲಿದೆ, ವಿವಾಹಕಾಂಕ್ಷಿಗಳಿಗೆ ಶುಭ, ಶಕ್ತಿ ಮೀರಿ ಖರ್ಚು ಮಾಡಬೇಡಿ.

ಧನಸ್ಸು: ರಸಗೊಬ್ಬರ ವ್ಯಾಪಾರ ಮಾಡುವವರಿಗೆ ಲಾಭ, ಪ್ರಯಾಣ ಮುಂದುಡಿದರೆ ಅನುಕೂಲ, ಕೋರ್ಟು ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರಿ.

ಮಕರ: ವಿದ್ಯಾರ್ಥಿಗಳಿಗೆ ಯಶಸ್ಸು, ಹಿರಿಯರ ಮಾರ್ಗದರ್ಶನದಿಂದ ಶುಭ, ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚು ಶ್ರಮ.

ಕುಂಭ: ವೃತ್ತಿ ಜೀವನದಲ್ಲಿ ಯಶಸ್ಸು, ಪಾಲುದಾರಿಕೆ ವ್ಯವಹಾರದಲ್ಲಿ ಏರುಪೇರು, ಆಸ್ತಿ ಸಂಬಂಧಿತ ಕಾರ್ಯಗಳಲ್ಲಿ ಮುನ್ನಡೆ.

ಮೀನ: ಮನೆಯಲ್ಲಿ ಸಂತೋಷದ ವಾತಾವರಣ, ಸರ್ಕಾರಿ ಕೆಲಸದಲ್ಲಿ ಯಶಸ್ಸು, ಉನ್ನತ ಶಿಕ್ಷಣಕ್ಕಾಗಿ ಪ್ರಯತ್ನ.

Share This Article