ದಿನ ಭವಿಷ್ಯ 11-03-2019

Public TV
2 Min Read

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ
ಸೋಮವಾರ, ಭರಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 8:04 ರಿಂದ 9:34
ಗುಳಿಕಕಾಲ: ಮಧ್ಯಾಹ್ನ 2:04 ರಿಂದ 3:34
ಯಮಗಂಡಕಾಲ: ಬೆಳಗ್ಗೆ 11:04 ರಿಂದ 12:34

ಮೇಷ: ಕುಟುಂಬದಲ್ಲಿ ನೆಮ್ಮದಿ, ಯತ್ನ ಕಾರ್ಯದಲ್ಲಿ ಯಶಸ್ಸು, ಸಮಾಜದಲ್ಲಿ ಉತ್ತಮ ಗೌರವ, ಷೇರು ವ್ಯವಹಾರಗಳಲ್ಲಿ ಲಾಭ, ದೂರ ಪ್ರಯಾಣ.

ವೃಷಭ: ಶತ್ರುಗಳೇ ಮಿತ್ರರಾಗುವ ಸುದಿನ, ಅಲ್ಪ ಲಾಭ, ಅಧಿಕವಾದ ಖರ್ಚು, ಮಾನಸಿಕ ನೆಮ್ಮದಿ ಲಭಿಸುವುದು.

ಮಿಥುನ: ಯೋಚಿಸಿ ಕೆಲಸ ಮಾಡುವುದು ಉತ್ತಮ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ವಿರಸ, ಈ ದಿನ ಎಚ್ಚರಿಕೆ ಅಗತ್ಯ.

ಕಟಕ: ಸ್ನೇಹಿತರೊಂದಿಗೆ ವ್ಯವಹಾರದ ಮಾತುಕತೆ, ಅದೃಷ್ಟ ಒಲಿದು ಬರುವುದು, ಖರ್ಚುಗಳ ಬಗ್ಗೆ ನಿಗಾವಹಿಸಿ, ಈ ದಿನ ಶುಭ ಫಲ.

ಸಿಂಹ: ಮಹಿಳೆಯರಿಗೆ ಕೆಲಸದಲ್ಲಿ ಒತ್ತಡ, ಆತ್ಮೀಯ ಸ್ನೇಹಿತರ ಭೇಟಿ, ಹಣಕಾಸು ವಿಚಾರದಲ್ಲಿ ಎಚ್ಚರ, ಈ ದಿನ ಮಿಶ್ರ ಫಲ.

ಕನ್ಯಾ: ಉದ್ಯೋಗದಲ್ಲಿ ಪ್ರಗತಿ, ಆಕಸ್ಮಿಕ ಧನ ಲಾಭ, ತಾಳ್ಮೆ ಅತ್ಯಗತ್ಯ, ಶತ್ರುಗಳ ನಾಶ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ.

ತುಲಾ: ಗೃಹೋಪಯೋಗಿ ವಸ್ತುಗಳ ಖರೀದಿ, ಮಿತ್ರರಿಂದ ಸಹಾಯ, ಗುರು ಹಿರಿಯರ ಭೇಟಿ, ಈ ದಿನ ಶುಭ ಯೋಗ ಪ್ರಾಪ್ತಿ.

ವೃಶ್ಚಿಕ: ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ, ಮಾನಸಿಕ ನೆಮ್ಮದಿ, ತೀರ್ಥಯಾತ್ರೆ ದರ್ಶನ, ಋಣ ವಿಮೋಚನೆ.

ಧನಸ್ಸು: ಅಲ್ಪ ಕಾರ್ಯ ಸಿದ್ಧಿ, ಕೃಷಿಯಲ್ಲಿ ಲಾಭ, ಸಾಲ ಬಾಧೆ, ಮನಃಕ್ಲೇಷ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಮಕರ: ಅತಿಯಾದ ದುಃಖ, ವಾಹನ ಚಾಲಕರಿಗೆ ತೊಂದರೆ, ಶತ್ರುಗಳ ಬಾಧೆ, ದಾಂಪತ್ಯದಲ್ಲಿ ಪ್ರೀತಿ ಅನ್ಯೋನ್ಯತೆ.

ಕುಂಭ: ಪರಸ್ಥಳ ವಾಸ, ಶರೀರದಲ್ಲಿ ಆಲಸ್ಯ, ದಾಯಾದಿಗಳ ಕಲಹ, ಇಲ್ಲ ಸಲ್ಲದ ಅಪವಾದ, ಕಾರ್ಯ ಸಾಧನೆಗಾಗಿ ಓಡಾಟ.

ಮೀನ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಅಧಿಕ ಧನ ಲಾಭ, ವಿವಾಹ-ಮಂಗಳ ಕಾರ್ಯಗಳಲ್ಲಿ ಭಾಗಿ, ವಿದ್ಯಾರ್ಥಿಗಳಿಗೆ ಯಶಸ್ಸು ಪ್ರಾಪ್ತಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *