ದಿನ ಭವಿಷ್ಯ 10-12-2025

1 Min Read

ಪಂಚಾಂಗ
ವಾರ: ಬುಧವಾರ, ತಿಥಿ: ಷಷ್ಠಿ
ನಕ್ಷತ್ರ: ಮಖ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಹೇಮಂತ ಋತು
ಮಾರ್ಗಶಿರ ಮಾಸ, ಕೃಷ್ಣ ಪಕ್ಷ

ರಾಹುಕಾಲ: 12:16 ರಿಂದ 1:42
ಗುಳಿಕಕಾಲ: 10:50 ರಿಂದ 12:13
ಯಮಗಂಡಕಾಲ: 7:58 ರಿಂದ 9:24

ಮೇಷ: ಯತ್ನ ಕಾರ್ಯಗಳಲ್ಲಿ ಜಯ, ದೂರ ಪ್ರಯಾಣ, ಗಣ್ಯ ವ್ಯಕ್ತಿಗಳ ಭೇಟಿ, ವ್ಯಾಪಾರದಲ್ಲಿ ಲಾಭ, ಆರೋಗ್ಯದಲ್ಲಿ ಚೇತರಿಕೆ.

ವೃಷಭ: ಕೆಲಸದ ಒತ್ತಡ, ಹಿತ ಶತ್ರುಭಾದೆ, ದುರಾಲೋಚನೆ, ದ್ರವ್ಯ ನಷ್ಟ, ಮಾತಿನ ಮೇಲೆ ನಿಗಾ ಇರಲಿ.

ಮಿಥುನ: ಕುಟುಂಬದಲ್ಲಿ ನೆಮ್ಮದಿ, ಅನಿರೀಕ್ಷಿತ ಖರ್ಚು, ಆಲಸ್ಯ ಮನೋಭಾವ, ಯಾವುದೇ ಕೆಲಸ ಮಾಡಿದರು ನಷ್ಟ.

ಕಟಕ: ಸ್ವಲ್ಪ ಪ್ರಯತ್ನ ಪಟ್ಟರೆ ಉತ್ತಮ ಫಲ, ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.

ಸಿಂಹ: ಮಿತ್ರರಿಂದ ಸಹಾಯ, ಕಾರ್ಯ ಸಾಧನೆ, ಮಾನಸಿಕ ನೆಮ್ಮದಿ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ.

ಕನ್ಯಾ: ವಿದ್ಯಾರ್ಥಿಗಳಲ್ಲಿ ಹಿನ್ನಡೆ, ವಿವಾದಗಳಿಗೆ ಆಸ್ಪದ ಕೊಡಬೇಡಿ, ಸ್ಥಳ ಬದಲಾವಣೆ, ರೋಗಭಾದೆ, ಅತಿಯಾದ ನಿದ್ರೆ.

ತುಲಾ: ಪುಣ್ಯಕ್ಷೇತ್ರ ದರ್ಶನ, ದಾಂಪತ್ಯದಲ್ಲಿ ಸಾಮರಸ್ಯ, ಬಹು ಸೌಖ್ಯ, ವಿನಾಕಾರಣ ನಿಷ್ಠರ, ಸಲ್ಲದ ಅಪವಾದ.

ವೃಶ್ಚಿಕ: ಹೊಸ ವ್ಯಕ್ತಿಗಳ ಭೇಟಿ, ಸ್ಥಗಿತ ಕಾರ್ಯಗಳಲ್ಲಿ ಹಿನ್ನಡೆ, ಮಕ್ಕಳಿಂದ ನೆಮ್ಮದಿ, ಕೀಲು ನೋವು, ಋಣ ಭಾದೆ.

ಧನಸ್ಸು: ದೇವತಾ ಕಾರ್ಯ, ಮಿತ್ರರ ಸಲಹೆ, ದುಂದು ವೆಚ್ಚ, ಆರ್ಥಿಕ ಸ್ಥಿತಿ ಬಿಕಟ್ಟು, ಪ್ರತಿಯೊಂದು ವಿಷಯದಲ್ಲಿ ಎಚ್ಚರ.

ಮಕರ: ಮಾತಿನಿಂದ ಅನರ್ಥ, ಚಂಚಲ ಸ್ವಭಾವ, ಅಧಿಕ ಕೋಪ, ಇಷ್ಟ ವಸ್ತುಗಳ ಖರೀದಿ, ಅತಿಯಾದ ಭಯ.

ಕುಂಭ: ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಶತ್ರು ನಾಶ, ತಾಳ್ಮೆ ಅಗತ್ಯ, ದಂಡ ಕಟ್ಟುವಿರಿ, ಮಂಗಳ ಕಾರ್ಯಗಳಲ್ಲಿ ಭಾಗಿ.

ಮೀನ: ಸ್ವಲ್ಪ ಕಾರ್ಯಸಿದ್ಧಿ, ಅಕಾಲ ಭೋಜನ, ಶ್ರಮಪಡದೆ ಕೆಲಸ ಆಗುವುದಿಲ್ಲ, ಸ್ನೇಹಿತರ ನೆರವು.

Share This Article