ದಿನಭವಿಷ್ಯ 08-12-2017

Public TV
2 Min Read

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಶುಕ್ರವಾರ, ಆಶ್ಲೇಷ ನಕ್ಷತ್ರ

ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:48 ರಿಂದ 12:28

ರಾಹುಕಾಲ: ಬೆಳಗ್ಗೆ 10:49 ರಿಂದ 12:15
ಗುಳಿಕಕಾಲ: ಬೆಳಗ್ಗೆ 7:57 ರಿಂದ 9:23
ಯಮಗಂಡಕಾಲ: ಮಧ್ಯಾಹ್ನ 3:07 ರಿಂದ 4:33

ಮೇಷ: ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಗೌರವ ಪ್ರಾಪ್ತಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಸಮಸ್ಯೆಗಳು ಕಾಡುವುದು, ಆರೋಗ್ಯದಲ್ಲಿ ಏರುಪೇರು, ಸ್ಥಿರಾಸ್ತಿ-ಚಿನ್ನಾಭರಣ ಅಡಮಾನವಿಡುವ ಪರಿಸ್ಥಿತಿ.

ವೃಷಭ: ಪಿತ್ರಾರ್ಜಿತ ಆಸ್ತಿ ಸಮಸ್ಯೆ ಬಗೆಹರಿಯುವುದು, ಮಕ್ಕಳಿಗೆ ಉತ್ತಮ ಉದ್ಯೋಗ ಲಭಿಸುವುದು, ದೃಷ್ಠಿ ದೋಷ, ಮಾಟ ಮಂತ್ರ ಪ್ರಯೋಗದಿಂದ ತೊಂದರೆ, ಸ್ವಂತ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಬೇಜವಾಬ್ದಾರಿತನ ಹೆಚ್ಚಾಗುವುದು.

ಮಿಥುನ: ಚಿನ್ನ-ಭೂಮಿ ಮೇಲೆ ಹಣ ಹೂಡಿಕೆ, ಮಾತೃವಿನಿಂದ ಅನುಕೂಲ ಪ್ರಾಪ್ತಿ, ಅನಿರೀಕ್ಷಿತ ಅಶುಭ ವಾರ್ತೆ ಕೇಳುವಿರಿ, ಆಕಸ್ಮಿ ಪ್ರಯಾಣ ಮಾಡುವ ಸಾಧ್ಯತೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ.

ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ಶತ್ರುತ್ವ, ಮಿತ್ರರಿಂದ ಸಂಕಷ್ಟ ವೃದ್ಧಿ, ಪ್ರೇಮಿಗಳಿಗೆ ಕುಟುಂಬದಲ್ಲಿ ಮನ್ನಣೆ, ವಿದೇಶಗಳಲ್ಲಿ ಉದ್ಯೋಗಾವಕಾಶ, ಮಂಗಳ ಕಾರ್ಯಗಳಿಗೆ ಕಾಲ ಕೂಡಿ ಬರುವುದು.

ಸಿಂಹ: ಕೋರ್ಟ್ ಕೇಸ್‍ಗಳಿಂದ ಮುಕ್ತಿ, ಭೂಮಿಯಿಂದ ಧನಾಗಮನ, ತಂದೆಯಿಂದ ಕೆಲಸಗಳಿಗೆ ಸಹಕಾರ, ಕೌಟುಂಬಿಕ ಸಮಸ್ಯೆ ಬಗೆಹರಿಯುವುದು, ಹಿರಿಯರಿಂದ ಬುದ್ಧಿಮಾತು, ಆಸೆ ಆಕಾಂಕ್ಷೆಗಳಿಂದ ವಿಮುಕ್ತಿ, ಸಂಗಾತಿಯ ನಡವಳಿಕೆಯಿಂದ ಆತಂಕ.

ಕನ್ಯಾ: ಮಕ್ಕಳಿಂದ ನೋವು ನಿರಾಸೆ, ಗುಪ್ತ ಶತ್ರುಗಳು ಹೆಚ್ಚಾಗುವರು, ಹಣಕಾಸು ಹೂಡಿಕೆಯಲ್ಲಿ ಎಚ್ಚರ, ಉದ್ಯೋಗದಲ್ಲಿ ಅವಕಾಶ, ವೈದ್ಯರಿಗೂ ತಿಳಿಯದ ರೋಗ ಬಾಧೆ.

ತುಲಾ: ಆರ್ಥಿಕ ಸಂಕಷ್ಟಗಳು ಬಾಧಿಸುವುದು, ಉದ್ಯೋಗ ಬದಲಾವಣೆಯಿಂದ ಪ್ರಗತಿ, ದಾನ ಧರ್ಮಗಳಿಗೆ ಅಧಿಕ ಖರ್ಚು, ಮಕ್ಕಳ ಜೀವನದಲ್ಲಿ ಏರಿಳಿತ, ಭೂ ವ್ಯವಹಾರದಲ್ಲಿ ಸಮಸ್ಯೆ, ಗೌರವಕ್ಕೆ ಧಕ್ಕೆಯಾಗುವ ಸಾಧ್ಯತೆ.

ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚು, ಅನುಕೂಲವಾದ್ರೂ ನಷ್ಟವಾಗುವ ಸಾಧ್ಯತೆ, ಸರ್ಕಾರಿ ಉದ್ಯೋಗದಲ್ಲಿ ಬಡ್ತಿ, ಕುಟುಂಬದಲ್ಲಿ ಕಲಹ ಹೆಚ್ಚಾಗುವುದು, ದುಷ್ಟ ವ್ಯಕ್ತಿಗಳು ಮನೆಗೆ ಪ್ರವೇಶ, ಸಂಗಾತಿಯ ಆರೋಗ್ಯದಲ್ಲಿ ಏರುಪೇರು.

ಧನಸ್ಸು: ವೃತ್ತಿಪರರಿಗೆ ಅನುಕೂಲ, ಉದ್ಯೋಗ ಬದಲಾವಣೆಯಿಂದ ಸಂಕಷ್ಟ, ಕೆಲವು ದಿನಗಳ ನಂತರ ಸಾಲದಿಂದ ಮುಕ್ತಿ, ಮನೆ ಕಟ್ಟಲು ಸ್ಥಿರಾಸ್ತಿ ಖರೀದಿಗೆ ಅನುಕೂಲ, ಸಹೋದರಿಯರಿಂದ ತೊಂದರೆ.

ಮಕರ: ಸ್ವಯಂಕೃತ್ಯಗಳಿಂದ ನಷ್ಟ, ಕುಟುಂಬದಲ್ಲಿ ವಿರೋಧ, ಪ್ರೇಮ ವಿಚಾರದಲ್ಲಿ ಮೋಸ, ಆಕಸ್ಮಿಕ ಉದ್ಯೋಗ ನಷ್ಟ ಸಾಧ್ಯತೆ, ದೇವತಾ ಕಾರ್ಯಗಳಲ್ಲಿ ಒಲವು.

ಕುಂಭ: ಉತ್ತಮ ಅಭಿವೃದ್ಧಿ, ಉದ್ಯಮಸ್ಥರಿಗೆ ಅನುಕೂಲ, ಸ್ನೇಹಿತರಿಂದ ಸಹಕಾರ, ಸಂಗಾತಿಯ ನಡವಳಿಕೆ ಬದಲಾವಣೆ, ಆರೋಗ್ಯದಲ್ಲಿ ಎಚ್ಚರಿಕೆ.

ಮೀನ: ವಿವಾಹ ಶುಭ ಕಾರ್ಯ ಜರುಗುವುದು, ಉದ್ಯೋಗ ದೊರಕುವುದು, ಐಟಿ ಕ್ಷೇತ್ರದವರಿಗೆ ಅನುಕೂಲ, ಉದ್ಯೋಗದಲ್ಲಿ ಒತ್ತಡ, ಆಕಸ್ಮಿಕ ದುರ್ಘಟನೆಯಿಂದ ನಿದ್ರಾಭಂಗ.

Share This Article
Leave a Comment

Leave a Reply

Your email address will not be published. Required fields are marked *