ದಿನ ಭವಿಷ್ಯ: 07-07-2024

Public TV
1 Min Read

ಪಂಚಾಂಗ:
ಸಂವತ್ಸರ:ಕ್ರೋಧಿನಾಮ, ಋತು:ಗ್ರೀಷ್ಮ
ಅಯನ: ಉತ್ತರಾಯಣ, ಮಾಸ : ಆಷಾಢ,
ಪಕ್ಷ : ಶುಕ್ಲ
ತಿಥಿ : ಬಿದಿಗೆ, ನಕ್ಷತ್ರ : ಪುಷ್ಯಾ
ರಾಹುಕಾಲ : 05 : 13 – 6 : 50
ಗುಳಿಕಕಾಲ : 03 : 37 – 5 : 13
ಯಮಗಂಡಕಾಲ : 12 : 24 – 2 : 01

ಮೇಷ: ಮಾತಿನಲ್ಲಿ ಹಿಡಿತವಿರಲಿ, ಹಣ್ಣಿನ ವ್ಯಾಪಾರಿಗಳಿಗೆ ಶುಭ, ಮನೆಯ ದುರಸ್ತಿಗಾಗಿ ಹಣ ವ್ಯಯ.

ವೃಷಭ: ಮಕ್ಕಳಿಗೆ ಅಭ್ಯಾಸದಲ್ಲಿ ಪ್ರಗತಿ, ಅಧಿಕ ಕೋಪ ವೈಮನಸ್ಯಕ್ಕೆ ಕಾರಣ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ.

ಮಿಥುನ: ಆಸ್ತಿ ಖರೀದಿಯಲ್ಲಿ ವಿಘ್ನ, ಅನಾವಶ್ಯಕ ವಾಗ್ವಾದ, ಸಾಂಬಾರು ಪದಾರ್ಥ ಮಾರಾಟಗಾರರಿಗೆ ಲಾಭ.

ಕರ್ಕಾಟಕ: ಸ್ತ್ರೀಯರಿಂದ ಮಾನಸಿಕ ತೊಂದರೆ, ಆರೋಗ್ಯದ ಸಮಸ್ಯೆ ಉಲ್ಬಣಿಸಬಹುದು, ಕೆಲಸದಲ್ಲಿ ಯಶಸ್ಸು.

ಸಿಂಹ: ಕ್ರೀಡಾಪಟುಗಳಿಗೆ ಶುಭ, ಹಿರಿಯರಲ್ಲಿ ಗೌರವ, ಭೂ ವ್ಯವಾರದಲ್ಲಿ ನಷ್ಟ.

ಕನ್ಯಾ: ಹಾಲಿನ ಉತ್ಪನ್ನಕರಿಗೆ ಶುಭ, ಶ್ರಮಕ್ಕೆ ತಕ್ಕ ಪ್ರತಿಫಲ, ಸ್ನೇಹಿತರಿಂದ ಸಹಾಯ ದೊರೆಯುವುದು.

ತುಲಾ: ವಿದ್ಯಾಭ್ಯಾಸದಲ್ಲಿ ಉದಾಸೀನ ಬೇಡ, ಮಾಡುವ ಕಾರ್ಯಕ್ಕೆ ಅಡೆತಡೆ, ವಿದೇಶ ವ್ಯವಹಾರದಿಂದ ಶುಭ.

ವೃಶ್ಚಿಕ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮುನ್ನಡೆ, ವಿದ್ಯಾರ್ಥಿಗಳಿಗೆ ಸುಸಮಯ, ನಂಬಿದವರಿಂದಲೇ ಮೋಸ.

ಧನಸ್ಸು: ಹೊಸ ವ್ಯವಹಾರಗಳಲ್ಲಿ ಆಸಕ್ತಿ, ಸ್ಥಿರಾಸ್ತಿ ಸಂಪಾದನೆ, ಷೇರು ವ್ಯಾಪಾರದಲ್ಲಿ ಲಾಭ.

ಮಕರ: ಆಸ್ತಿ ಮಾರಾಟಗಳಿಂದ ಲಾಭ, ಬಾಯಿ ಹುಣ್ಣಿನ ಸಮಸ್ಯೆ ಬಾಧಿಸುತ್ತದೆ, ಶಿಕ್ಷಣ ಸಂಸ್ಥೆಯವರಿಗೆ ಹೆಚ್ಚು ಆದಾಯ.

ಕುಂಭ: ಉದ್ಯೋಗ ಬದಲಾವಣೆ ಸಾಧ್ಯತೆ, ಮನೆಯಲ್ಲಿ ಸಂತೋಷ ನೆಮ್ಮದಿ, ಆಕಸ್ಮಿಕ ಅವಘಡ ಸಾಧ್ಯತೆ.

ಮೀನ: ಹಣಕಾಸು ವ್ಯವಹಾರದವರಿಗೆ ಶುಭ, ಶತ್ರುಗಳು ಮಿತ್ರರಾಗುವ ಸಂಭವ, ಮಕ್ಕಳ ನಡುವಳಿಕೆಯಿಂದ ಆತಂಕ.

 

Share This Article