ದಿನ ಭವಿಷ್ಯ: 06-02-2020

Public TV
2 Min Read

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಗುರುವಾರ, ಆರಿದ್ರಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:05 ರಿಂದ 3:32
ಗುಳಿಕಕಾಲ: ಬೆಳಗ್ಗೆ 9:42 ರಿಂದ 11:10
ಯಮಗಂಡಕಾಲ: ಬೆಳಗ್ಗೆ 6:47 ರಿಂದ 8:15

ಮೇಷ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಂದ ಮಾನ ಅಪಮಾನ, ಮಾನಸಿಕ ವೇದನೆ, ಜೂಜು-ರೇಸ್‍ಗಳಿಂದ ಹಣ ಸಂಪಾದನೆ, ಮನಸ್ಸಿನಲ್ಲಿ ದುಷ್ಟ ಆಲೋಚನೆ.

ವೃಷಭ: ಶುಭ ಕಾರ್ಯ ನಿಮಿತ್ತ ಪ್ರಯಾಣ, ತೀರ್ಥಕ್ಷೇತ್ರ ದರ್ಶನ, ವ್ಯವಹಾರ ಮಾತುಕತೆ, ದುಶ್ಚಟಗಳಿಂದ ಅನಾರೋಗ್ಯ, ಸ್ಥಿರಾಸ್ತಿ-ವಾಹನ ಸಾಲ ಮಾಡುವಿರಿ.

ಮಿಥುನ: ಮೋಜು-ಮಸ್ತಿಗಾಗಿ ಅಧಿಕ ಖರ್ಚು, ಅಲಂಕಾರಿಕ ವಸ್ತುಗಳ ಖರೀದಿ, ದುಬಾರಿ ಜೀವನಕ್ಕಾಗಿ ಧನವ್ಯಯ, ಪ್ರೇಮ ವಿಚಾರದಲ್ಲಿ ಬಿರುಕು, ಮಕ್ಕಳು ದೂರವಾಗುವರು, ನವ ವಿವಾಹಿತರಿಗೆ ಸಂತಾನ ದೋಷ.

ಕಟಕ: ಆತುರ ಸ್ವಭಾವ, ಸ್ವಯಂಕೃತ್ಯದಿಂದ ನಷ್ಟ, ಹಣಕಾಸು ನಷ್ಟ, ಚೀಟಿ ವ್ಯವಹಾರಗಳಲ್ಲಿ ಎಚ್ಚರ, ಕುಟುಂಬದ ಹಿತ ಶತ್ರುಗಳಿಂದ ಸಮಸ್ಯೆ, ಗೌರವಕ್ಕೆ ಚ್ಯುತಿ, ಭಾವನೆಗಳಿಗೆ ಧಕ್ಕೆ, ಮುಂದಾಲೋಚನೆಗೆ ಅಡ್ಡಿ.

ಸಿಂಹ: ವಿಕೃತ ಆಸೆಗಳು ಹೆಚ್ಚು, ಸ್ತ್ರೀ ವಿಚಾರದಲ್ಲಿ ಪಾಪ ಬುದ್ಧಿ, ವ್ಯಾಪಾರ-ವ್ಯವಹಾರದಲ್ಲಿ ಸಮಸ್ಯೆ, ಉದ್ಯೋಗದಲ್ಲಿ ಬಡ್ತಿಗೆ ತಡೆ, ಗೌರವಕ್ಕೆ ಧಕ್ಕೆ, ಉದ್ಯೋಗಾವಕಾಶ ಕೈತಪ್ಪುವುದು.

ಕನ್ಯಾ: ಹಿರಿಯ ಸಹೋದರಿಯಿಂದ ನಷ್ಟ, ಮಿತ್ರರಿಂದ ಮೋಸ, ದೂರ ಪ್ರದೇಶ ಉದ್ಯೋಗ, ವಸ್ತ್ರಾಭರಣ ಖರೀದಿ, ವಿಪರೀತ ಹಣ ಖರ್ಚು.

ತುಲಾ: ಹಣಕಾಸು ಸಂಪಾದನೆ, ಅನಿರೀಕ್ಷಿತ ಹೊಗಳಿಕೆ, ಗೌರವ ಪ್ರಶಂಸೆ, ಕಾರ್ಯದಲ್ಲಿ ಜಯ, ಅದೃಷ್ಟ ಒಲಿದು ಬರುವುದು.

ವೃಶ್ಚಿಕ: ದಾಂಪತ್ಯದಲ್ಲಿ ಬೇಸರ, ಅಪವಾದ ಸಂಶಯ, ಕುತಂತ್ರದಿಂದ ಅವಕಾಶ ಕೈತಪ್ಪುವುದು, ಉದ್ಯೋಗದಲ್ಲಿ ಸ್ಥಳದಲ್ಲಿ ಅಪವಾದ, ಅವಮಾನ, ಗೌರವಕ್ಕೆ ಧಕ್ಕೆ, ನಡವಳಿಕೆ ಬಗ್ಗೆ ಅಪಪ್ರಚಾರ.

ಧನಸ್ಸು: ಪೂರ್ವಜರ ಪಾಪ ಕಾಡುವುದು, ಸಂಕಷ್ಟಕ್ಕೆ ಸಿಲುಕುವಿರಿ, ಮಕ್ಕಳ ಪ್ರೇಮ ವಿಚಾರದಲ್ಲಿ ಚಿಂತೆ, ಕೋರ್ಟ್ ಕೇಸ್‍ಗಳಲ್ಲಿ ಅಧಿಕ ನಷ್ಟ, ಈ ದಿನ ಅದೃಷ್ಟ ಕೈ ಕೊಡುವುದು.

ಮಕರ: ದಾಂಪತ್ಯದಲ್ಲಿ ವಿಪರೀತ ಕಲಹ, ಪ್ರೇಮದ ಬಲೆಗೆ ಸಿಲುಕುವಿರಿ, ಹಿರಿಯರಿಂದ ವಿರೋಧ, ಮೋಸದ ವ್ಯಕ್ತಿ ಜೊತೆ ಆತ್ಮೀಯತೆ, ಉದ್ಯೋಗಾವಕಾಶ ಪ್ರಾಪ್ತಿ.

ಕುಂಭ: ಮಕ್ಕಳ ನಡವಳಿಕೆಗಳಿಂದ ಕಲಹ, ಶತ್ರುತ್ವ ಹೆಚ್ಚಾಗುವುದು, ವಾಹನ-ಮನೆ ಖರೀದಿಗಾಗಿ ಖರ್ಚು, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಅತೀ ಆತ್ಮವಿಶ್ವಾಸದಿಂದ ತೊಂದರೆ.

ಮೀನ: ಮಕ್ಕಳಿಗಾಗಿ ಖುರ್ಚ, ಅಧಿಕ ಬಡ್ಡಿಗಾಗಿ ಸಾಲ ಮಾಡುವಿರಿ, ಶತ್ರುಗಳ ನಾಶ, ಕೋರ್ಟ್ ಕೇಸ್‍ಗಳಲ್ಲಿ ಜಯ, ಅಧಿಕ ಖರ್ಚು ಸಾಧ್ಯತೆ, ಪ್ರಯಾಣದಲ್ಲಿ ಅಡೆತಡೆ.

Share This Article
Leave a Comment

Leave a Reply

Your email address will not be published. Required fields are marked *