ದಿನ ಭವಿಷ್ಯ: 03-06-2024

Public TV
1 Min Read

ಪಂಚಾಂಗ: ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ವಾರ: ಸೋಮವಾರ, ತಿಥಿ: ದ್ವಾದಶಿ ನಕ್ಷತ್ರ: ಅಶ್ವಿನಿ ರಾಹುಕಾಲ: 7.34 ರಿಂದ 9.10 ಗುಳಿಕಕಾಲ: 1.58 ರಿಂದ 3.44 ಯಮಗಂಡಕಾಲ: 10.46 ರಿಂದ 12.22

ಮೇಷ: ಹೊಸ ವ್ಯವಹಾರಗಳಿಂದ ಲಾಭ, ವಿಧೇಯತೆ ಯಶಸ್ಸಿನ ಮೆಟ್ಟಿಲು, ದುಂದು ವೆಚ್ಚ, ತಿರುಗಾಟ.

ವೃಷಭ: ಉದ್ಯಮಿಗಳಿಗೆ ಅಧಿಕ ಲಾಭ, ಅಪರಿಚಿತರ ವಿಷಯದಲ್ಲಿ ಜಾಗ್ರತೆ, ಸ್ವತಂತ್ರವಾಗಿ ಹಣ ಸಂಪಾದನೆ.

ಮಿಥುನ: ಅತಿಯಾದ ಆತ್ಮವಿಶ್ವಾಸ, ಮಿತ್ರರ ಬೆಂಬಲ, ಕಾರ್ಯ ವಿಕಲ್ಪ, ಶತ್ರು ನಾಶ, ವಾದ ವಿವಾದಗಳಿಂದ ದೂರವಿರಿ.

ಕಟಕ: ಮಾನಸಿಕ ಒತ್ತಡ, ದಂಡ ಕಟ್ಟುವಿರಿ, ನಿಮ್ಮ ಮಾತುಗಳಿಂದ ಕಲಹ ಸಾಧ್ಯತೆ, ಸೌಜನ್ಯದಿಂದ ವರ್ತಿಸಿ, ವಿದ್ಯಾರ್ಥಿಗಳಲ್ಲಿ ಪ್ರಗತಿ.

ಸಿಂಹ: ಗುರಿಯನ್ನು ಸಾಧಿಸುವಿರಿ, ಪರರಿಗೆ ಸಹಾನುಭೂತಿ ತೋರುವಿರಿ, ಸುಖ ಭೋಜನ, ವಿಪರೀತ ಖರ್ಚು.

ಕನ್ಯಾ: ರಾಜಕೀಯ ಕ್ಷೇತ್ರದವರಿಗೆ ಶುಭ, ದೈವಿಕ ಚಿಂತನೆ, ಮೂಗಿನ ಮೇಲೆ ಕೋಪ, ಸ್ನೇಹಿತರಿಂದ ಹಿತನುಡಿ.

ತುಲಾ: ಅಲ್ಪ ಕಾರ್ಯ, ಋಣವಿಮೋಚನೆ, ಸುಳ್ಳು ಮಾತನಾಡುವಿರಿ, ಕೃಷಿಕರಿಗೆ ಅಲ್ಪ ಲಾಭ.

ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಆರೋಗ್ಯದ ಸಮಸ್ಯೆ, ಉದ್ಯೋಗದಲ್ಲಿ ಕಿರಿಕಿರಿ, ಕುಟುಂಬ ಸೌಖ್ಯ.

ಧನಸ್ಸು: ವಿವಿಧ ರೀತಿ ಧನ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಪರಸ್ಥಳವಾಸ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

ಮಕರ: ಮಾರಾಟದಿಂದ ಲಾಭ, ಮಾತಿಗೆ ಮರುಳಾಗದಿರಿ, ಬಹು ಸೌಖ್ಯ, ಉದ್ಯೋಗದಲ್ಲಿ ಬಡ್ತಿ.

ಕುಂಭ: ಮಾನಸಿಕ ಒತ್ತಡ, ಹಿತ ಶತ್ರು ಭಾದೆ, ಮನೆಯವರ ಭಾವನೆಗಳಿಗೆ ಸ್ಪಂದಿಸುವಿರಿ, ತೀರ್ಥ ಯಾತ್ರಾ ದರ್ಶನ.

ಮೀನ: ನೀಚ ಜನರಿಂದ ದೂರವಿರಿ, ಪಾಪ ಬುದ್ಧಿ, ಸಾಧಾರಣ ಪ್ರಗತಿ, ಮನಕ್ಲೇಶ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

Share This Article