ದಿನ ಭವಿಷ್ಯ: 03-03-2025

Public TV
1 Min Read

ಶ್ರೀ ಕ್ರೋಧಿ ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಪಾಲ್ಗುಣ ಮಾಸ, ಶುಕ್ಲ ಪಕ್ಷ
ವಾರ: ಸೋಮವಾರ, ತಿಥಿ: ಚತುರ್ಥಿ
ನಕ್ಷತ್ರ : ಅಶ್ವಿನಿ

ರಾಹುಕಾಲ: 8.07 ರಿಂದ 9.36
ಗುಳಿಕಕಾಲ: 2.05 ರಿಂದ 3.34
ಯಮಗಂಡಕಾಲ: 11.06 ರಿಂದ 12.35

ಮೇಷ: ಅನಗತ್ಯ ವಿಷಯಗಳಿಗೆ ಕಲಹ, ಹಿರಿಯರ ಬೆಂಬಲ, ನಿಮ್ಮ ಜಾಣ್ಮೆಯಿಂದ ನಿಮಗೆ ಬೇಡಿಕೆ ಬರುವುದು.

ವೃಷಭ: ಅಪವಾದಗಳು ದೂರವಾಗುತ್ತವೆ, ತೀರ್ಥಕ್ಷೇತ್ರ ದರ್ಶನ, ಮಾಡುವ ಕೆಲಸಗಳಲ್ಲಿ ಶ್ರದ್ಧೆ, ಮನಶಾಂತಿ.

ಮಿಥುನ: ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ಪ್ರೀತಿ, ಮಿತ್ರರ ನೆರವಿನಿಂದ ಕಾರ್ಯ ಸಿದ್ಧಿಸುವುದು.

ಕಟಕ: ನನ್ನಂತೆ ನಡೆಯಬೇಕೆಂಬ ಹಠ ಬೇಡ, ದ್ರವ್ಯ ಲಾಭ, ಸಕಾಲದಲ್ಲಿ ಹಣ ಒದಗಿ ಬರುವುದು.

ಸಿಂಹ: ವ್ಯವಹಾರದಲ್ಲಿ ನಿರೀಕ್ಷಿತ ಆದಾಯ, ಕೈಲಾದ ಸಹಾಯ ಮಾಡಿ, ಬಂಧುಗಳಲ್ಲಿ ವಿಶ್ವಾಸ, ಅಕಾಲ ಭೋಜನ.

ಕನ್ಯಾ: ಯಾರನ್ನು ಹೆಚ್ಚಾಗಿ ನಂಬಬೇಡಿ, ಅನಾರೋಗ್ಯ, ವಿಶ್ರಾಂತಿ ಪಡೆಯುವುದು ಒಳ್ಳೆಯದು, ಸ್ತ್ರೀಯರಿಗೆ ಶುಭ.

ತುಲಾ: ಮನೆಯಲ್ಲಿ ಸಂತಸ, ಗುರು ಹಿರಿಯರನ್ನು ಧಿಕ್ಕರಿಸಬೇಡಿ, ಯಾರನ್ನೆ ಆಗಲಿ ಉದಾಸೀನದಿಂದ ಕಾಣಬೇಡಿ.

ವೃಶ್ಚಿಕ: ಅರ್ಥವಿಲ್ಲದ ದುಡಿಮೆಗೆ ದೇಹವನ್ನ ದಂಡಿಸಬೇಡಿ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಶುಭದಿನ.

ಧನಸ್ಸು: ಗೊಂದಲಗಳ ನಡುವೆಯೂ ಯಶಸ್ಸು, ಮಿತ್ರರ ಸಹಾಯ, ಅಕಾಲ ಭೋಜನ, ಉದ್ಯೋಗದಲ್ಲಿ ಒತ್ತಡ.

ಮಕರ: ಕಾರ್ಯ ಸಿದ್ದಿ, ಕೋರ್ಟ್ ಕಚೇರಿಗಳಲ್ಲಿ ಅಲೆದಾಟ, ಆರೋಗ್ಯದಲ್ಲಿ ಏರುಪೇರು, ವಸ್ತ್ರ ವ್ಯಾಪಾರಿಗಳಿಗೆ ಉತ್ತಮ ಲಾಭ.

ಕುಂಭ: ವಾಹನ ಖರೀದಿ, ಪರಸ್ತ್ರೀಯಿಂದ ಧನ ಲಾಭ, ಹಿತ ಶತ್ರುಗಳಿಂದ ಭಾದೆ, ದೂರ ಪ್ರಯಾಣ.

ಮೀನ: ದುಡುಕು ಸ್ವಭಾವ, ಮಾತಿನ ಮೇಲೆ ನಿಗ ಇರಲಿ, ನೆಮ್ಮದಿ ಇಲ್ಲದ ಜೀವನ, ಅಲ್ಪ ಕಾರ್ಯಸಿದ್ಧಿ.

Share This Article