ಖ್ಯಾತ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

Public TV
2 Min Read

ಬಾಲಿವುಡ್ (Bollywood) ನ ಹೆಸರಾಂತ ಹಿರಿಯ ನಟಿ, ನೃತ್ಯಗಾರ್ತಿ ವಹೀದಾ ರೆಹಮಾನ್ (Waheeda Rahman) ಅವರಿಗೆ 2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ (Dada Saheb Phalke) ಪ್ರಶಸ್ತಿಯನ್ನು (Award) ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಕುರಿತು ಕೇಂದ್ರ ಸಚಿವ ಅನುರಾಗ್ ಠಾಕೋರ್ (Anurag Thakur) ಕೂಡ ಟ್ವೀಟ್ ಮಾಡಿ, ಹಿರಿಯ ನಟಿಯನ್ನು ಅಭಿನಂದಿಸಿದ್ದಾರೆ.

ಅಪ್ರತಿಮ ಸುಂದರಿ ಮತ್ತು ಅದ್ಭುತ ನಟಿಯಾಗಿರುವ ವಹೀದಾ ರೆಹಮಾನ್, ಮೂಲತಃ ದಕ್ಷಿಣ ಭಾರತದವರು. ಬಾಲಿವುಡ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಇಡೀ ದೇಶವನ್ನೇ ಬೆರಗುಗೊಳಿಸುವಂತೆ ಮಿಂಚಿದರು. ತೆಲುಗು ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ವಹೀದಾ ನಂತರ ತಮಿಳಿನಲ್ಲೂ ಸಿನಿಮಾ ಮಾಡಿದರು. ಅಲ್ಲಿಂದ ಸೀದಾ ಹೊರಟಿದ್ದು ಬಾಲಿವುಡ್ ನತ್ತ.

ಬಾಲಿವುಡ್ ನ ಸೂಪರ್ ಸ್ಟಾರ್ ಗಳಾದ ರಾಜೇಶ್ ಖನ್ನಾ, ರಾಜ್ ಕಪೂರ್, ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್ ಹೀಗೆ ಅಷ್ಟೂ ಹೆಸರಾಂತ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಸಾಂಪ್ರದಾಯಿಕ ಉರ್ದು ಕುಟುಂಬದಲ್ಲಿ ಜನಸಿದ ವಹೀದಾ ಹತ್ತು ವರ್ಷದವಳಿದ್ದಾಗಲೇ ತಂದೆ ತಾಯಿಯನ್ನು ಕಳೆದುಕೊಂಡು, ಕಷ್ಟದಲ್ಲಿ ಬೆಳೆಯುತ್ತಾರೆ. ಆ ನಂತರ ಚಿತ್ರರಂಗವೇ ಅವರನ್ನು ಅಪ್ಪಿ ಎಲ್ಲವನ್ನೂ ಕೊಡುತ್ತದೆ.

ಬಾಲಿವುಡ್ ಸಿನಿಮಾ ರಂಗದಲ್ಲಿ ಮೊದಲು ವಹೀದಾರನ್ನು ಗುರುತಿಸಿದ್ದು ಗುರುದತ್. ಮೊದಲ ಬಾರಿಗೆ ಅವರೇ ಹಿಂದಿ ಚಿತ್ರದಲ್ಲಿ ನಟಿಸುವಂತೆ ಅವಕಾಶ ನೀಡುತ್ತಾರೆ. ಸಿಐಡಿ ವಹೀದಾ ಅವರ ಮೊದಲ ಸಿನಿಮಾ. ಪ್ಯಾಸಾ, ತ್ರಿಶೂಲ್, ಅದಾಲತ್, ಕಭಿ ಕಭಿ, ದೆಹಲಿ 6 ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅವರು ವಿವಿಧ ಪಾತ್ರಗಳನ್ನು ಮಾಡಿದ್ದಾರೆ.

 

ತಮ್ಮನ್ನು ಬಾಲಿವುಡ್ ಸಿನಿಮಾ ರಂಗಕ್ಕೆ ಪರಿಚಯಿಸಿದ ಗುರುದತ್ ಜೊತೆಯಾಗಿ ಐದು ಸಿನಿಮಾಗಳನ್ನು ಮಾಡಿದ್ದರು. ಐದೂ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಹಾಗಾಗಿ ಗುರುದತ್ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಾರೆ ಎಂದು ದೊಡ್ಡ ಸುದ್ದಿಯೇ ಆಗಿತ್ತು.  ಆದರೆ, ವಹೀದಾ 1974ರಲ್ಲಿ ಶಗೂನ್ ಚಿತ್ರದಲ್ಲಿ ನಾಯಕನಾಗಿ ತಮ್ಮೊಂದಿಗೆ ನಟಿಸಿದ್ದ ಕಮಲ್ ಜಿತ್ ಸಿಂಗ್ ಅವರನ್ನು ಮದುವೆಯಾದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್