ಬೆಂಗಳೂರು: `ದಚ್ಚು ದೀಪು’ ಎನ್ನುವ ಶೀರ್ಷಿಕೆಯಲ್ಲಿ ಕನ್ನಡ ಸಿನಿಮಾ ಸೆಟ್ಟೇರಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರನ್ನು ಸ್ಯಾಂಡಲ್ವುಡ್ನಲ್ಲಿ ದಚ್ಚು, ದೀಪು ಎನ್ನುವ ಹೆಸರಿನಿಂದ ಕರೆಯಲಾಗುತ್ತೆ. ಹೀಗಾಗಿ ಇಂದು ಸೆಟ್ಟೇರಿರುವ `ದಚ್ಚು ದೀಪು’ ಸಿನಿಮಾ ಕುತೂಹಲಕ್ಕೆ ಕಾರಣವಾಗಿದೆ.
ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ಸ್ನೇಹ, ವೈರತ್ವದ ಕಥೆ ಚಿತ್ರದಲ್ಲಿರುತ್ತೆ ಎಂದು ಚಿತ್ರದ ನಾಯಕ ಚಂದು ಹೇಳಿದ್ದಾರೆ. ಇನ್ನೂ ಚಿತ್ರದ ಪೋಸ್ಟರ್ ನಲ್ಲಿ ದರ್ಶನ್ ಮತ್ತು ಸುದೀಪ್ ಪೋಸ್ಟರ್ ಗಳನ್ನೂ ಹಾಕಲಾಗಿದೆ.
ಇಬ್ಬರು ನಟರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಹಾಗಾಗಿ ನಾವು ಅವರ ಅಭಿಮಾನಿಯಾಗಿದ್ದು, ಅವರ ಆರ್ಶೀವಾದದಿಂದ ಈ ಸಿನಿಮಾ ಮಾಡೋಣ ಅನ್ನಿಸಿತ್ತು ಎಂದು ನಿರ್ದೇಶಕ ಆನಂದ್ ತಿಗಡಿ ಹೇಳಿದ್ದಾರೆ.
ರಂಜಿತ್ ತಿಗಡಿ ನಿರ್ದೇಶನದ ದಚ್ಚು ದೀಪು ಸಿನಿಮಾದಲ್ಲಿ ಆನಂದ್, ಚಂದು ಹೊಸ ಪ್ರತಿಭೆಗಳು ಅಭಿನಯಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನಡೆದಿದೆ. ಜಗ್ಗೇಶ್ ಮತ್ತು ಅಜಯ್ ರಾವ್ ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದರು.