ರಮೇಶ್ ಕುಮಾರ್ ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ: ಸುಧಾಕರ್

Public TV
1 Min Read

ಬೆಳಗಾವಿ: ರಮೇಶ್ ಕುಮಾರ್ ಅವರು ಎರಡು ಬಾರಿ ಸ್ಪೀಕರ್ ಆಗಿದ್ದವರು. ಮೌಲ್ಯಗಳಿಗೆ ರಾಯಭಾರಿ ಆಗಿದ್ದರು. ಅವರ ಬಗ್ಗೆ ನನಗೆ ವೈಯುಕ್ತಿಕ ದ್ವೇಷ ಇಲ್ಲ. ಅವರು ಮುಖವಾಡ ಹಾಕಿಕೊಂಡು ಬದುಕುತ್ತಿರುವುದರಲ್ಲಿ ಅನುಮಾನವಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆ ಬೆಳಗಾವಿ ವಿಧಾನಸಭೆಯಲ್ಲಿ ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ ಎಂದು ರಮೇಶ್ ಕುಮಾರ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಸುವರ್ಣಸೌಧದಲ್ಲಿ ಮಾತನಾಡಿದ ಸುಧಾಕರ್, ರಮೇಶ್ ಕುಮಾರ್ ಬಗ್ಗೆ ನನಗೆ ವೈಯಕ್ತಿಕ ದ್ವೇಷ ಇಲ್ಲ. ಅವರು ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ ಎಂದು ಖಂಡನೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಅತ್ಯಾಚಾರ ಕುರಿತ ರಮೇಶ್‌ ಕುಮಾರ್‌ ಹೇಳಿಕೆಗೆ ಕಾಂಗ್ರೆಸ್‌ ನಾಯಕರಿಂದಲೇ ಟೀಕೆ

ಬೈರತಿ ಬಸವರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, 13 ವರ್ಷದ ಹಿಂದೆ ಟ್ರಯಲ್ ಕೇಸ್‍ನಲ್ಲಿ, ಬೈರತಿ ಪರವಾಗಿ ಬಂದಿತ್ತು. ಆ ಬಳಿಕ ಹೈಕೋರ್ಟ್‍ನಲ್ಲಿ ಕೇಸ್ ಪೆಂಡಿಂಗ್ ಇತ್ತು. ಚುನಾಯಿತ ಪ್ರತಿನಿಧಿಗಳ ಕೋರ್ಟ್‍ನಲ್ಲಿ ಕೇಸ್ ಇದೆ. ಈಗ ಚರ್ಚೆ ಮಾಡಲು ಬರಲ್ಲ, ಕಾಂಗ್ರೆಸ್‍ನವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಇನ್ಮುಂದೆ ಎಚ್ಚರಿಕೆಯಿಂದ ಮಾತಾಡ್ತೀನಿ- ಕ್ಷಮೆಯಾಚಿಸಿದ ರಮೇಶ್ ಕುಮಾರ್

ಓಮಿಕ್ರಾನ್ ಪ್ರಕರಣಗಳ ಹೆಚ್ಚಳದ ಬಗ್ಗೆ ಮಾತನಾಡಿ, ಓಮಿಕ್ರಾನ್ ಬಗ್ಗೆ ವಿಷಯವಾಗಿ ಆತಂಕ ಇಲ್ಲ. 8 ಮಂದಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಪರೀಕ್ಷೆ ಮಾಡಿ, ಅವರ ಮೂಲಕ ಬೇರೆಯವರಿಗೆ ಹರಡದಂತೆ ಕ್ರಮ ವಹಿಸಬೇಕಿದೆ. ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಲಿದ್ದೇವೆ. ಸಿಎಂ ಜೊತೆ ಕೂಡ ಚರ್ಚೆ ಮಾಡಲಿದ್ದೇವೆ. ಯಾವ ಕ್ರಮ ತೆಗೆದುಕೊಳ್ಳಬೇಕು ಅಂತ ಸಲಹೆ ಪಡೆಯುತ್ತೇವೆ. ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿದೆ. ಜನ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ರಿಲೇಶನ್‌ಶಿಪ್‌ನಲ್ಲಿ ಡಿಸ್ಟೆನ್ಸ್ ಹೆಚ್ಚಾಗಿದ್ದಕ್ಕೆ ಪ್ರಿಯಕರನಿಗೆ ಗುಂಡಿಟ್ಟ ಕಿರಾತಕಿ

Share This Article
Leave a Comment

Leave a Reply

Your email address will not be published. Required fields are marked *