ಬೆಂಗಳೂರು: ತಮ್ಮ ಬೆಂಬಲಿಗ ಶಾಸಕರು ಡಿನ್ನರ್ ಸಭೆ ಮಾಡಿರೋದನ್ನ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಪರೋಕ್ಷವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಬೆಂಬಲಿಗ ಶಾಸಕರ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇದು ಯಾವ ಶಕ್ತಿ ಪ್ರದರ್ಶನ ಅಲ್ಲ. ಕೆಲವರು ರೆಸ್ಟ್ ತಗೊಳ್ಳೋಕೆ, ಎಜುಕೇಶನ್ ಮಾಡೋಕೆ ಫಾರಿನ್ ಹೋಗ್ತಾರೆ. ಕೆಲವರು ಊಟ ಮಾಡ್ತಾರೆ, ಕೆಲವರು ಡೆಲ್ಲಿಗೆ ಹೋಗ್ತಾರೆ. ಕೆಲವರು ಎಲ್ಲೆಲ್ಲೋ ಹೋಗ್ತಾರೆ. ಅವರ ಪರ್ಸನಲ್ ವಿಷಯಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದರು. ಇದನ್ನೂ ಓದಿ: ಶಾಸಕರ ಡಿನ್ನರ್ ಮೀಟಿಂಗ್ ಹೊಸದೇನು ಅಲ್ಲ: ಅಜಯ್ ಸಿಂಗ್
ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಅಂತ ಶಾಸಕರು ಮಾತಾಡಿದ್ದಾರೆ ಎಂಬ ವಿಚಾರಕ್ಕೆ ಕೆಲವರು ಏನೇನೋ ಆಸೆ ಇಟ್ಟುಕೊಂಡು ಇರ್ತಾರೆ. ಏನ್ ಮಾಡ್ತೀರಾ ಎಲ್ಲರು ಹೊಸಬರು ಅಲ್ಲವಾ? ಮಂತ್ರಿಗಳು ಆಗಬೇಕು ಅಂತ ಆಸೆಯಲ್ಲಿ ಇರ್ತಾರೆ. ನಾವೆಲ್ಲ ಓಲ್ಡ್ ಆಗೋದ್ವಿ. ನಾನು, ಪರಮೇಶ್ವರ್, HK ಪಾಟೀಲ್ ನಾವೆಲ್ಲರು ಚಿಕ್ಕ ವಯಸ್ಸಿನಲ್ಲೇ ಮಂತ್ರಿ ಆದವರು. ಮಹದೇವಪ್ಪ, ಸಿದ್ದರಾಮಯ್ಯ ಕೂಡಾ. ಹೊಸಬರು ಆಸೆ ಪಡ್ತಾರೆ. ನೀವು ಮಾತ್ರ ಆಗ ಮಂತ್ರಿ ಆದ್ರಿ ನಮ್ಮನ್ನು ಮಂತ್ರಿ ಮಾಡಿಸಿ ಅಂತ ಹೇಳ್ತಾರೆ. ದೆಹಲಿಯವರಿಗೆ ಈ ವಿಷಯ ಗಮನ ಇರುತ್ತದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಅಂತ ಬೆಂಬಲಿಗ ಶಾಸಕರು ಕೇಳ್ತಿದ್ದಾರೆ ಎಂಬ ಪ್ರಶ್ನೆಗೆ, ನನಗೆ ಅದರ ಬಗ್ಗೆ ಗೊತ್ತಿಲ್ಲ. ನನ್ನ ಹತ್ತಿರ ಅವರು ಯಾರು ಕೂಡ ಬಂದು ಮಾತಾಡಿಲ್ಲ. ಅವರು ಬಂದು ಮಾತಾಡಲಿ ಆಮೇಲೆ ಮಾತಾಡ್ತೀನಿ ಎಂದರು. ಇದನ್ನೂ ಓದಿ: 2028 ಕ್ಕೂ ಕಾಂಗ್ರೆಸ್ ಬರಬೇಕು, ಅದಕ್ಕಾಗಿ ಹೈಕಮಾಂಡ್ ಕುರ್ಚಿ ಗೊಂದಲ ಬಗೆಹರಿಸಬೇಕು: ಗಣಿಗ ರವಿಕುಮಾರ್

