ಹುಬ್ಬಳ್ಳಿ-ಧಾರವಾಡ ಗುಂಡಿಗಳ ನಗರ ಬಿಜೆಪಿ ವಿರುದ್ಧ ಡಿಕೆಶಿ ಕಿಡಿ

Public TV
3 Min Read

ಹುಬ್ಬಳ್ಳಿ: ಬಿಜೆಪಿಯವರಿಗೆ ಒಂದು ಭರವಸೆಯನ್ನು ಈಡೇರಿಸಲು ಅಗಿಲ್ಲ. ಮತ್ಯಾಕೆ ಮತ ಕೇಳ್ತಾ ಇದ್ದಾರೆ? ಮತದಾರರನ್ನು ಭಾವನಾತ್ಮಕವಾಗಿ ತಗೆದುಕೊಂಡು ಹೋಗುತ್ತಿದ್ದಾರೆ ಬಿಜೆಪಿಯವರು. ಹುಬ್ಬಳ್ಳಿ ಧಾರವಾಡ ನಗರಗಳು ಗುಂಡಿಗಳ ನಗರವಾಗಿದೆ. ನಾವು ಡ್ಯಾನ್ಸ್ ಕಲಿಯಬೇಕಾಗಿಲ್ಲ. ಈ ರಸ್ತೆಯಲ್ಲಿ ಸಂಚರಿಸುವ ವಾಹನದಲ್ಲಿ ಕುಳಿತ್ರೆ ಸಾಕು ತನ್ನಷ್ಟಕ್ಕೆ ಡಾನ್ಸ್ ಬರುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಕೆಶಿ, ಹುಬ್ಬಳ್ಳಿ ಧಾರವಾಡ ಪಾಲಿಕೆ ಚುನಾವಣೆಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಬಹಿರಂಗ ಸಭೆ ಮಾಡಲು ನಿಷೇಧ ಹಾಕಿದ್ರು. ನಾವೂ ಜವಾಬ್ದಾರಿಯಿಂದ ಸಭೆ ಮಾಡುತ್ತಿಲ್ಲ. ನಮ್ಮ ಮುಖಂಡರು ಹುಬ್ಬಳ್ಳಿ ಧಾರವಾಡ ಪಾಲಿಕೆ ವ್ಯಾಪ್ತಿಗೆ ಸಂಬಂಧಿದಂತೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಸಿದ್ದರಾಮಯ್ಯ ಸರ್ಕಾರದಲ್ಲಿ ನಾವೂ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ನುಡಿದಂತೆ ನಾವೂ ನಡೆದಿದ್ದೇವೆ ಎಂದರು. ಇದನ್ನೂ ಓದಿ: ಬೊಮ್ಮಾಯಿ ಮುಖ್ಯಮಂತ್ರಿ ಆದ್ಮೇಲೆ ಕೋವಿಡ್ ಕಡಿಮೆ ಆಗುತ್ತಿದೆ: ಪ್ರಭು ಚವ್ಹಾಣ್

ಬಿಜೆಪಿಯ ಕೇಂದ್ರ ಸಚಿವರು ಹಾಗೂ ಬಿಜೆಪಿ ಮಾಜಿ ಸಿಎಂ ಹಾಗೂ ನಾಯಕರು ಇಲ್ಲಿಯವರು ಇದ್ದಾರೆ. ನಮಗೆ ಅವರ ಬಗ್ಗೆ ವೈಯಕ್ತಿಕ ತಕರಾರು ಇಲ್ಲ. ನಮ್ಮ ಪ್ರಶ್ನೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅವರ ಅಧಿಕಾರ ಇದೆ ಇದರಿಂದ ಜನರಿಗೆ ಎನೂ ಲಾಭ? ನಾನು ಮತದಾರರಲ್ಲಿ ಕೇಳುತ್ತೇನೆ ನಿಮಗೆ ಎನೂ ಬದಲಾವಣೆ ನೀಡಿದ್ದಾರೆ? ಬಿಜೆಪಿ ಪ್ರಣಾಳಿಕೆಯಲ್ಲಿ ಸುಳ್ಳಿನ ಸರಮಾಲೆ ಇದೆ ಬಿಜೆಪಿಯವರಿಗೆ ನುಡಿದಂತೆ ನಡೆಯಲು ಆಗಿಲ್ಲ ಎಂದು ಕಿಡಿಕಾರಿದರು.

ಮನೆ ಮನೆಗೆ ಗ್ಯಾಸ್ ಲೈನ್ ವಿತರಣೆ ಮಾಡುತ್ತೇವೆ ಅಂದ್ರು, ಆದ್ರೆ ಆ ಯೋಜನೆ ಪೂರ್ಣಗೊಂಡಿಲ್ಲ. 300 ರೂಪಾಯಿ ಇದ್ದ ಗ್ಯಾಸ್ ಬೆಲೆ 800-900 ಬೆಲೆ ಆಗಿದೆ. ಖಾಸಗಿ ಸಹಭಾಗಿತ್ವದ ಸೂಪರ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಮಾಡುತ್ತೇವೆ ಅಂದ್ರು ಅದನ್ನು ಮಾಡಲಿಲ್ಲ. ಹೊಸ ಸಿಬಿಎಸ್‍ಸಿ ಶಾಲೆ ಮಾಡುತ್ತೇವೆ ಅಂದ್ರು ಆ ಶಾಲೆ ಎಲ್ಲಿದೆ ತೋರಿಸಲಿ. ಕಸಮುಕ್ತ ನಗರ ಅಂದ್ರು, ಆದ್ರೆ ಧೂಳಿನಿಂದ ಕೂಡಿದ ನಗರ ಆಗಿದೆ. ಬೆಳಗಾವಿ ಹುಬ್ಬಳ್ಳಿ ಬೆಂಗಳೂರು ಮಧ್ಯೆ ಹೈಸ್ಪೀಡ್ ರೈಲು ಸಂಪರ್ಕ ಎಂದರು ಇದುವರೆಗೂ ಪ್ಲ್ಯಾನಿಂಗ್ ಕೂಡಾ ಮಾಡಿಲ್ಲ. ಈಜುಕೊಳ ಅಂದ್ರು ಈಜುಕೊಳ ಎಲ್ಲಿದೆ ಹೇಳಲಿ. ನಾನು ಈಜು ಹೊಡೆಯುತ್ತೇನೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಯಾವುದೇ ರಾಜ್ಯಕ್ಕೆ ಹೋದರೂ ಒಂದೇ ವಾಹನ ನಂಬರ್ – ಈಗಿನ ವ್ಯವಸ್ಥೆ ಹೇಗಿದೆ? ಯಾರಿಗೆ ಸಿಗಲಿದೆ?

ಹುಬ್ಬಳ್ಳಿ ಧಾರವಾಡ ಬೆಳಗಾವಿ ಕಲಬುರಗಿಯಲ್ಲಿ ಪಾಲಿಕೆ ಚುನಾವಣೆ ನಡೆಯುತ್ತಿದೆ. ನಮ್ಮ ಪ್ರಣಾಳಿಕೆಯಲ್ಲಿ ಸತ್ಯ ಹೇಳಿದ್ದೇವೆ. ಕೋವಿಡ್ ನಿಂದ ಒಂದೂವರೆ ವರ್ಷ ಜನರು ನರಳಿದ್ದಾರೆ. ಮತದಾರರ ಬಳಿ ಮನವಿ ಮಾಡುತ್ತೇನೆ ಮೂರು ಪಾಲಿಕೆಗಳನ್ನು ನಮಗೆ ನೀಡಿ. ಆಗ ನಾನು ಶೇ.50 ಟಾಕ್ಸ್ ಕಡಿಮೆ ಮಾಡುತ್ತೇವೆ ಎಂದು ಭರವಸೆ ನೀಡುತ್ತೇನೆ. ಟೂ ಟೈರ್ ಸಿಟಿಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ರು ಆದ್ರೆ ಮಾಡಲಿಲ್ಲ. ನಮ್ಮ ಸರ್ಕಾರ ಬಂದ ನಂತರ ಹೊಸ ಸಿಡಿಪಿಯನ್ನು ಜಾರಿ ಮಾಡುತ್ತೇವೆ. ನಾನು ಹಿಂದೆ ಶೆಟ್ಟರ್‍ಗೆ ಸಲಹೆ ನೀಡಿದ್ದೆ. ಪಾಪ ಎನೂ ಮಾಡೋದು ಹೇಳಿ ಅವರು ಮಾಜಿ ಆದ್ರು. ಹುಬ್ಬಳ್ಳಿ ಧಾರವಾಡ ನಾಗರಿಕರ ಬಳಿ ಮತ ಕೇಳುವ ಹಕ್ಕು ಬಿಜೆಪಿಯವರಿಗೆ ಇಲ್ಲ. ನೀವೂ ನುಡಿದಂತೆ ನಡೆದಿಲ್ಲ. ಜನರಿಗೆ ಮೋಸ ಮಾಡಿದ್ದೀರಿ. ಬಸವಣ್ಣನ ನಾಡಿನಲ್ಲಿ ಸುಳ್ಳಿನ ಸರದಾರರಾಗುವುದು ಬೇಡ ಬೆಂಗಳೂರು ಬೆಳೆಯುತ್ತಿದೆ. ಅದರ ಜೊತೆ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲಬುರಗಿ ಬೆಳೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ನಾವೂ ಪಾಲಿಕೆಯ ಚುನಾವಣೆಯಲ್ಲಿ 60ಕ್ಕೂ ಹೆಚ್ಚು ಸೀಟ್‍ಗಳನ್ನು ಗೆಲ್ಲುತ್ತೇವೆ. ಬಸವರಾಜ ಬೊಮ್ಮಾಯಿ ಸಿಎಂ ಆದ ಮೇಲಾದ್ರು ಸಿಎಂ ಮನೆಗೆ ರಸ್ತೆಯ ಆಗುತ್ತಿದೆ ಅಲ್ವಾ? ಅದಕ್ಕೆ ಆದ್ರು ಖುಷಿ ಪಡಬೇಕಾಗಿದೆ. ಆ ನೆಪದಲ್ಲಿ ಆದರು ರಸ್ತೆಗಳು ಆಗಲಿ ಬಿಡಿ. ಜನರಿಗೆ ಗೊತ್ತಾಗಿದೆ ಅವರು ಎನೂ ಕೆಲಸ ಮಾಡಿಲ್ಲ ಅಂತಾ ತಿಳಿದಿದೆ. ಕೋವಿಡ್ ವಿಚಾರವಾಗಿ ಘೋಷಿಸಿದ ಪರಿಹಾರ ಯಾರಿಗೂ ತಲುಪಿಲ್ಲ. ಬದಲಾವಣೆ ತರಬೇಕು ಅನ್ನೋದು ಜನರು ನಿರ್ಧಾರ ಮಾಡಿದ್ದಾರೆ. ಕೋವಿಡ್ ನಿಂದ ಮೃತಪಟ್ಟವರಿಗೆ ಪರಿಹಾರ ನೀಡಿಲ್ಲ. ಸತ್ತವರ ಮನೆಗೆ ಹೋಗಿ ಸ್ವಾಂತನ ಸಹ ಹೇಳಲಿಲ್ಲ. ಬರೀ ಸುಳ್ಳು ಹೇಳಿ ಮತ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಅಪ್ರಾಪ್ತೆಗೆ ಕಿಸ್ ಮಾಡಿ ಪರಾರಿ – ಎಫ್‍ಐಆರ್ ದಾಖಲಿಸುವಂತೆ ಡಿಸಿಪಿ ಸೂಚನೆ

ಈ ಮೊದಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿದ ಡಿಕೆಶಿ ಸಿದ್ಧಾರೂಢರ ಮಠದಲ್ಲಿ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸೈಯದ್ ಪತ್ತೆಶಾವಲಿ ದರ್ಗಾಕ್ಕೂ ಡಿಕೆಶಿ ಭೇಟಿ ನೀಡಿ ಚಾದರ್ ಸಲ್ಲಿಕೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದೃವ ನಾರಾಯಣ್, ಆರ್.ವಿ ದೇಶ್‍ಪಾಂಡೆ. ಶಾಸಕ ಪ್ರಸಾದ್ ಅಬ್ಬಯ್ಯ, ಎಂಎಲ್‍ಸಿ ಶ್ರೀನಿವಾಸ್ ಮಾನೆ. ಶಿವಾನಂದ ಪಾಟೀಲ್ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *