ಪೆನ್ನಾರ್ ಟ್ರಿಬ್ಯುನಲ್ ರಚನೆ ವಿಚಾರ – ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಡಿ.ಕೆ ಶಿವಕುಮಾರ್ ವಿರೋಧ

Public TV
2 Min Read

ನವದೆಹಲಿ: ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ (Gajendra Singh Shekhawat) ಅವರನ್ನು ಭೇಟಿ ಮಾಡಿ ರಾಜ್ಯದ ಹಲವು ಜಲ ಯೋಜನೆಗಳ ಬಗ್ಗೆ ಚರ್ಚಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K.Shivakumar) ಹೇಳಿದ್ದಾರೆ. ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಬಗ್ಗೆ ಮಾಹಿತಿ ನೀಡಿದರು‌.

ಪೆನ್ನಾರ್ ನದಿ ನ್ಯಾಯಾಧಿಕರಣ ಮಾಡುವುದಕ್ಕೆ ತಮಿಳುನಾಡು (Tamil Nadu) ತಕರಾರು ತೆಗೆದಿದೆ. ಸುಪ್ರೀಂ ಕೋರ್ಟ್ (Supreme Court) ಜುಲೈ 5 ರೊಳಗೆ ಟ್ರಿಬುನಲ್‌ ಮಾಡಲು ಹೇಳಿದೆ. ಕರ್ನಾಟಕದ ಮಾರ್ಕಂಡೇಯ ಆಣೆಕಟ್ಟು ಕುಡಿಯುವ ನೀರಿನ ಡ್ಯಾಂ ಪ್ರಾಜೆಕ್ಟ್, ಟ್ರಿಬುನಲ್ ರಚನೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹೀಗಾಗಿ ಟ್ರಿಬ್ಯುನಲ್ ರಚನೆ ಬೇಡ ಎಂದು ಮನವಿ ಮಾಡಿದೆ. ಇದನ್ನೂ ಓದಿ: 4 ತಿಂಗಳಲ್ಲಿ ಮೂರನೇ ಬಾರಿಗೆ ಸಂಪುಟಕ್ಕೆ ಸರ್ಜರಿ- ಕೇಜ್ರಿವಾಲ್ ಬಳಿಕ ಅತಿಶಿ ಪ್ರಭಾವಿ ಸಚಿವೆ

ಬೆಂಗಳೂರು ವೇಸ್ಟ್ ವಾಟರ್ ಟ್ರೀಟ್ ಮಾಡಿ ಕೋಲಾರಕ್ಕೆ‌ ಕಳುಹಿಸುತ್ತಿದ್ದೇವೆ. ಕೇಂದ್ರ ಸರ್ಕಾರವೇ ಈ ಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿತ್ತು. ಆದರೆ ತಮಿಳುನಾಡು ಸರ್ಕಾರ ತಕರಾರು ಎತ್ತಿದೆ. ಇದರಿಂದ ನಮ್ಮ ಹಲವು ಯೋಜನೆಗಳಿಗೆ ತೊಂದರೆಯಾಗುತ್ತಿದೆ. ವಾಸ್ತವಾಂಶ ಅರ್ಥ ಮಾಡಿಕೊಂಡು ಮಾತುಕತೆ ಮೂಲಕ ಬಗೆಹರಿಸಬೇಕು ಎಂದು ಮನವಿ ಮಾಡಿದೆ ಎಂದರು.

ಕೃಷ್ಣ ನದಿ ನೀರು ಹಂಚಿಕೆ ಅಧಿಸೂಚನೆ ಹೊರಡಿಸುವ ಬಗ್ಗೆ ಸಚಿವರ ಗಮನಕ್ಕೆ ತಂದಿದೆ. ಮಹದಾಯಿ ಯೋಜನೆಗೆ ಪರಿಸರ ಅನುಮತಿ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅರಣ್ಯ ಸಚಿವರನ್ನು ಭೇಟಿ ಮಾಡುತ್ತೇನೆ. ಮೇಕೆದಾಟು ವಿಚಾರವಾಗಿ ಕಾನೂನು ತಜ್ಞರ ಜೊತೆ ಮಾತನಾಡಬೇಕು. ಯೋಜನೆ ತಡವಾದಂತೆ ವೆಚ್ಚ ಹೆಚ್ಚಾಗುತ್ತಿದೆ ರಾಜಕಾರಣದ ಪ್ರತಿಷ್ಠೆ ಹೆಚ್ಚಾಗುತ್ತಿದೆ. ಬೆಂಗಳೂರಿಗರಿಗೆ ಕುಡಿಯುವುದಕ್ಕೆ ನೀರಿಲ್ಲ. ಸದ್ಯ ಯಾವು ಸಮಸ್ಯೆ ಇಲ್ಲ. ಮಳೆಯ ಪ್ರಮಾಣ ಆಧರಿಸಿ ಮುಂದಿನ ದಿನಗಳಲ್ಲಿ ಲೆಕ್ಕಚಾರ ಮಾಡಲಾಗುವುದು. ಮುಂದಿನ ತಿಂಗಳು ಎಲ್ಲ ರಾಜ್ಯಗಳಿಂದ ವಿಶೇಷ ತಂಡಗಳು ಬರ್ತಿವೆ. ಇದೇ ವೇಳೆ ಕೇಂದ್ರ, ತಮಿಳುನಾಡು ಟೀಂಗಳು ಆಗಮಿಸಲಿದ್ದು ಕೆಆರ್‌ಎಸ್ ವಾಸ್ತವ ಪರಿಸ್ಥಿತಿ ತೋರಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಪ್ರತಿ ಆರ್ಡರ್‌ನಲ್ಲೂ ಚಾಕ್ಲೇಟ್ ಇಟ್ಟು ಹುಟ್ಟುಹಬ್ಬ ಆಚರಿಸಿದ ಝೋಮ್ಯಾಟೋ ಸಿಬ್ಬಂದಿ!

ಕೃಷ್ಣ ಮೇಲ್ದಂಡೆ ಯೋಜನೆಗೆ ಐದು ಸಾವಿರ ಕೋಟಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ, ಎಐಬಿಪಿಯಿಂದ ಅನುದಾನ ಪಡೆಯಲು ಕೇಂದ್ರ ಸರ್ಕಾರ ಹೇಳಿದೆ. ಆದರೆ ಇದು ರಾಷ್ಟ್ರೀಯ ಯೋಜನೆ ಎಐಬಿಪಿಯಲ್ಲಿ 60:40 ಹಣ ನೀಡಲಾಗುತ್ತೆ. ಹೀಗಾಗಿ ಹಣಕಾಸು ಇಲಾಖೆ ಜೊತೆಗೆ ಚರ್ಚಿಸಲು ನಿರ್ಧರಿಸಿದೆ. ಇನ್ನು ಕೆಲವು ಬೇರೆ ಬೇರೆ ಯೋಜನೆಗಳಿಗೆ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದೆ ಎಂದು ತಿಳಿಸಿದರು‌.

ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಕೆಲವು ಕೆಲಸದ ಒತ್ತಡದಲ್ಲಿ ಸಿಎಂ ಕಚೇರಿಯಿಂದ ಆದೇಶಗಳಾಗಿರುತ್ತವೆ. ಹಲವಾರು ಜನರು ಮನವಿ ಮಾಡಿರುತ್ತಾರೆ. ಮನವಿ ಮೇರೆಗೆ ಪತ್ರ ನೀಡಿರುತ್ತಾರೆ. ಅವು ಡಬಲ್ ಆಗಿರುವ ಸಾಧ್ಯತೆ ಇರುತ್ತೆ. ಕೆಲವೊಮ್ಮೆ ನನ್ನ ಕಚೇರಿಯಲ್ಲಿ ಆಗಿರುತ್ತೆ, ನಾನು ಈವರೆಗೂ ಒಂದು ವರ್ಗಾವಣೆ ಮಾಡಿಲ್ಲ. ಯಾರ‍್ಯಾರಿಗೆ ಪತ್ರ ಹೋಗಿದೆ ಪರಿಶೀಲನೆ ಮಾಡಲು ಹೇಳಿದ್ದೇನೆ. ಪತ್ರದ ಸಂಖ್ಯೆ ಪರಿಶೀಲಿಸಲು ಹೇಳಿದೆ ಎಂದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್