ಸಿಲಿಂಡರ್ ಸ್ಫೋಟ – ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವು

1 Min Read

ಕೊಪ್ಪಳ: ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಇಂದು (ಡಿ.17) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ (35) ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಗಾಯಗೊಂಡಿದ್ದ ರಾಜ (38), ದುರುಗಪ್ಪ (27), ಹುಸೇನಮ್ಮ (40), ನಾಗರಾಜ (18), ದುರುಗಮ್ಮ (17), ವಿಷ್ಣು (16), ಶ್ರೀಕಾಂತ್ (22) ಚಿಕಿತ್ಸೆ ಪಡೆಯುತ್ತಿದ್ದಾರೆ.ಇದನ್ನೂ ಓದಿ: ಸಿಲಿಂಡರ್‌ ಸ್ಫೋಟ – ಇಡೀ ಮನೆ ನೆಲಸಮ, 7 ಮಂದಿ ಗಂಭೀರ

ಸ್ಫೋಟದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಮುಂಜಾನೆ ಚಿಕಿತ್ಸೆ ಫಲಿಸದೆ ಸುರೇಶ್ ಸಾವನ್ನಪ್ಪಿದ್ದಾರೆ.

ಹುಸೇನಮ್ಮ ಮನೆಯಲ್ಲಿ ಹೊಸದಾಗಿ ಸಿಲಿಂಡರ್ ತೆಗೆದುಕೊಂಡಿದ್ದರು. ಬೆಳಗ್ಗೆ ಆನ್ ಮಾಡುವಾಗ ಸ್ಫೋಟಗೊಂಡಿತ್ತು. ತೀವ್ರತೆಗೆ ಇಡೀ ಮನೆ ನೆಲಸಮವಾಗಿ, ಅಕ್ಕಪಕ್ಕದ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದವು. ಅಲ್ಲದೇ ಮನೆಯ ಅಕ್ಕಪಕ್ಕ ನಿಂತವರಿಗೂ ಸುಟ್ಟ ಗಾಯಗಳಾಗಿದ್ದವು.ಇದನ್ನೂ ಓದಿ: ಮಂಗಳೂರು| ಎಸ್ಕೇಪ್‌ ಆಗುತ್ತಿದ್ದ ರೌಡಿಶೀಟರ್‌ನ ಚೇಸ್‌ ಮಾಡಿ ಹಿಡಿದ ಪೊಲೀಸರು

Share This Article