ಅರಬ್ಬಿ ಸಮುದ್ರದಲ್ಲಿ ‘ಶಕ್ತಿ’ ಅಬ್ಬರ – ಮಹಾರಾಷ್ಟ್ರದಲ್ಲಿ ಅ.7ರವರೆಗೆ ಭಾರೀ ಮಳೆ ಸಾಧ್ಯತೆ

Public TV
1 Min Read

ಮುಂಬೈ: ಅರಬ್ಬಿ ಸಮುದ್ರದಲ್ಲಿ ಶಕ್ತಿ ಚಂಡಮಾರುತ (Shakti Cyclone) ಅಬ್ಬರ ಹಿನ್ನೆಲೆ ಮಹಾರಾಷ್ಟ್ರದಲ್ಲಿ (Maharashtra) ಭಾರೀ ಮಳೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಅಕ್ಟೋಬರ್ 3ರಿಂದ 7ರವರೆಗೆ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಬಲವಾದ ಗಾಳಿ, ಚಂಡಮಾರುತದ ಎಚ್ಚರಿಕೆ ನೀಡಿದ್ದು, ಮುಂಬೈ, ಥಾಣೆ, ಪಾಲ್ಘರ್, ರಾಯಗಢ, ರತ್ನಗಿರಿ, ಸಿಂಧುದುರ್ಗ ಸೇರಿದಂತೆ ಹಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಜೈಲಲ್ಲಿ ದರ್ಶನ್‌ ಸ್ಥಿತಿ ಕಂಡು ಪತ್ನಿ ವಿಜಯಲಕ್ಷ್ಮಿ ಕಣ್ಣೀರು

ಗುಜರಾತ್‌ನ ದ್ವಾರಕಾದಿಂದ ಸುಮಾರು 250 ಕಿ.ಮೀ ಪಶ್ಚಿಮ-ನೈಋತ್ಯಕ್ಕೆ ಚಂಡಮಾರುತ ಕೇಂದ್ರೀಕೃತವಾಗಿದೆ. ಇಂದು ಈ ಚಂಡಮಾರುತ ಇನ್ನಷ್ಟು ಬಲಗೊಳ್ಳಲಿದೆ. ಭಾರತೀಯ ಭೂಪ್ರದೇಶದ ಮೇಲೆ ಇದು ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಗಂಟೆಗೆ 8 ಕಿ.ಮೀ. ವೇಗದಲ್ಲಿ ವಾಯುವ್ಯಕ್ಕೆ ಚಲಿಸುತ್ತಿದ್ದು, ಪಶ್ಚಿಮ-ನೈಋತ್ಯ ದಿಕ್ಕಿನಲ್ಲಿ ಮಧ್ಯ ಅರಬ್ಬಿ ಸಮುದ್ರದ ಕಡೆಗೆ ಸಾಗುವ ನಿರೀಕ್ಷೆಯಿದೆ. ನಾಳೆ ವೇಳೆಗೆ ಉತ್ತರ ಮತ್ತು ಪಕ್ಕದ ಮಧ್ಯ ಅರೇಬಿಯನ್ ಸಮುದ್ರದ ಮಧ್ಯ ಭಾಗಗಳನ್ನು ತಲುಪುವ ಸಾಧ್ಯತೆಯಿದೆ. ಗುಜರಾತ್ ತಲುಪುವ ಮುನ್ನ ಇದು ದುರ್ಬಲ ಆಗಬಹುದು. ಈ ಹಿನ್ನೆಲೆ ಮಳೆ ಹೊರತುಪಡಿಸಿ ಯಾವುದೇ ಆತಂಕ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದಿನಿಂದ ಜಾತಿಗಣತಿ ಸಮೀಕ್ಷೆ – 32 ಲಕ್ಷ ಮನೆ, ಎರಡು ವಾರಗಳ ಟಾರ್ಗೆಟ್

Share This Article