ಬಂಗಾಳ ಕೊಲ್ಲಿಯಲ್ಲಿ ‘ಮೋಂಥಾ’ ಸೈಕ್ಲೋನ್ ಅಬ್ಬರ – ಚೆನ್ನೈನಲ್ಲಿ ಭಾರೀ ಮಳೆ ಸಾಧ್ಯತೆ

Public TV
1 Min Read

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ (Bay Of Bengal) ವಾಯಭಾರ ಕುಸಿತ ಹಿನ್ನೆಲೆ ಅ.27ರ ಹೊತ್ತಿಗೆ ಚಂಡಮಾರುತ (Cyclone) ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಸಿದೆ. ಹೀಗಾಗಿ ಮುಂದಿನ ಎರಡ್ಮೂರು ದಿನಗಳ ಕಾಲ ಚೈನ್ನೈನಲ್ಲಿ (Chennai) ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಇಂದು ಆಗ್ನೇಯ ಭಾಗದಲ್ಲಿ ಒತ್ತಡ ಸೃಷ್ಟಿಯಾಗಲಿದೆ. ನಾಳೆ ಇದು ಇನ್ನಷ್ಟು ತೀವ್ರಗೊಳ್ಳಲಿದೆ. ನಂತರ ಚಂಡಮಾರುತವು ವಾಯುವ್ಯ ಭಾಗಕ್ಕೆ ನಿಧಾನಕ್ಕೆ ಸಾಗುವ ಸಾಧ್ಯತೆಗಳಿವೆ ಎಂದು ಇಲಾಖೆ ತಿಳಿಸಿದೆ. ಚಂಡಮಾರುತ ಪರಿಣಾಮವಾಗಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶದಲ್ಲಿ ಅ.28ರವರೆಗೂ ಮಳೆ ಮುಂದುವರಿಯಲಿದೆ. ಇದನ್ನೂ ಓದಿ: ವಂಚಕರ ಪರವಾಗಿ ಪಿಎಸ್‌ಐಗೆ ಕರೆ – ಆಪ್ತನ ಕೇಸ್ ಕಾಂಪ್ರಮೈಸ್‌ಗೆ ಸಚಿವ ಜಮೀರ್ ಒತ್ತಡ ಹೇರಿದ್ರಾ?

ಈ ಚಂಡಮಾರುತಕ್ಕೆ ಅಂತರರಾಷ್ಟ್ರೀಯ ಸಮುದಾಯದ ಶಿಫಾರಸಿನಂತೆ ಥಾಯ್ಲೆಂಡ್‌ನ ಮೊಂಥಾ (Montha Cyclone) ಎಂಬ ಹೆಸರು ಇಡಲಾಗಿದೆ. ಅ.27ರಂದು ಚೆನ್ನೈ, ತಿರುವಲ್ಲೂರು ಮತ್ತು ರಾಣಿಪೇಟೆ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಬಾಲಿವುಡ್ ಹಾಸ್ಯ ನಟ ಸತೀಶ್‌ ಶಾ ನಿಧನ

Share This Article