ಸೈಬರ್‌ ದಾಳಿಗೆ 158 ವರ್ಷದ ಹಳೆಯ ಕಂಪನಿ ಬಂದ್‌ – 700 ಮಂದಿ ಮನೆಗೆ

Public TV
1 Min Read

ಲಂಡನ್‌: ಸೈಬರ್ ದಾಳಿಯಿಂದ (Cyber Attack) 158 ವರ್ಷದ ಯುಕೆಯ (UK) ಹಳೆಯ ಸಾರಿಗೆ ಕಂಪನಿ ಬಂದ್‌ ಆಗಿ 700 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

ಕೆಎನ್‌ಪಿಯ ಲಾಜಿಸ್ಟಿಕ್ಸ್‌ (KNP Logistics) ಕಂಪನಿ 500 ಲಾರಿಗಳನ್ನು ನಿರ್ವಹಣೆ ಮಾಡುತ್ತಿತ್ತು. ಹ್ಯಾಕರ್‌ಗಳು ಉದ್ಯೋಗಿಯೊಬ್ಬನ ಪಾಸ್‌ವರ್ಡ್‌ ಊಹಿಸಿ ಸೈಟ್‌ ಪ್ರವೇಶಿಸಿದ್ದಾರೆ. ನಂತರ  ರಾನ್ಸಮ್‌ವೇರ್ (Ransomware) ಮಾಲ್ವೇರ್‌ ಕಳುಹಿಸಿ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಿ ಆಂತರಿಕ ವ್ಯವಸ್ಥೆಗಳನ್ನು ಲಾಕ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಿಎಸ್‌ಎನ್‌ಎಲ್‌ 4ಜಿಯಿಂದ 5ಜಿ ಸಿಮ್‌ ಕಾರ್ಡ್‌ಗೆ ಆನ್‌ಲೈನಿನಲ್ಲಿ ಅಪ್‌ಗ್ರೇಡ್‌ ಮಾಡೋದು ಹೇಗೆ?

 

ಹ್ಯಾಕ್‌ ಮಾಡಿದ ಬಳಿಕ ಉದ್ಯೋಗಿಗಳಿಗೆ ವೆಬ್‌ಸೈಟ್‌ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. ಹ್ಯಾಕರ್‌ಗಳು 5 ಮಿಲಿಯನ್ ಪೌಂಡ್‌ಗೆ (ಅಂದಾಜು 58. 40 ಕೋಟಿ ರೂ) ಬೇಡಿಕೆ ಇಟ್ಟಿದ್ದರು. ಆದರೆ ಇಷ್ಟೊಂದು ಮೊತ್ತವನ್ನು ಪಾವತಿ ಮಾಡಲು ಕಂಪನಿಗೆ ಸಾಧ್ಯವಾಗಲಿಲ್ಲ. ಇದರಿಂದ ಸಂಪೂರ್ಣ ಡೇಟಾ ನಷ್ಟಕ್ಕೆ ಕಾರಣವಾಯಿತು. ಅಂತಿಮವಾಗಿ ಕಂಪನಿಯ ಪತನಕ್ಕೆ ಕಾರಣವಾಯಿತು.

M&S, Co-op ಮತ್ತು Harrods ನಂತಹ ಇತರ ಪ್ರಮುಖ UK ಕಂಪನಿಗಳು ಸಹ ಇದೇ ರೀತಿಯ ದಾಳಿಗೆ ಬಲಿಯಾಗಿವೆ. Co-op ಪ್ರಕರಣದಲ್ಲಿ, 65 ಲಕ್ಷ ಸದಸ್ಯರ ಡೇಟಾವನ್ನು ಕಳವು ಮಾಡಲಾಗಿತ್ತು.

Share This Article