Public TVPublic TVPublic TV
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Reading: 1 ಲಕ್ಷ ರೂ. ವ್ಯವಹಾರಕ್ಕೆ 1 ಸಾವಿರ ರೂ. ಕಮಿಷನ್‌ – ವಂಚನೆಗಾಗಿ ಬಾಡಿಗೆಗೆ ಸಿಗುತ್ತೆ ಬ್ಯಾಂಕ್‌ ಖಾತೆ!
Notification Show More
Font ResizerAa
Public TVPublic TV
Font ResizerAa
  • Home
  • Latest
  • LIVE
  • State
  • Districts
  • National
  • World
  • Stories
  • Cinema
  • Crime
  • Court
  • Sports
  • Tech
  • Automobile
  • Food
  • Explainer
  • Videos
Search
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Follow US
Crime

1 ಲಕ್ಷ ರೂ. ವ್ಯವಹಾರಕ್ಕೆ 1 ಸಾವಿರ ರೂ. ಕಮಿಷನ್‌ – ವಂಚನೆಗಾಗಿ ಬಾಡಿಗೆಗೆ ಸಿಗುತ್ತೆ ಬ್ಯಾಂಕ್‌ ಖಾತೆ!

Public TV
Last updated: June 24, 2024 6:50 pm
By Public TV
Share
2 Min Read

– ಗೋವಾ ಪೊಲೀಸರ ತನಿಖೆಯಿಂದ ಶಾಕಿಂಗ್‌ ವಿಚಾರ ಬೆಳಕಿಗೆ
– ಯುವಕರಿಗೆ ಆಮಿಷ ಒಡ್ಡಿ ಬ್ಯಾಂಕ್‌ ಖಾತೆಯ ಮೂಲಕ ವಂಚನೆ

ಪಣಜಿ: ಸೈಬರ್‌ ಕಳ್ಳರು (Cyber Fraud) ಮೆಸೇಜ್‌ ಕಳುಹಿಸಿ ಬ್ಯಾಂಕ್‌ ಖಾತೆಗೆ ಕನ್ನ ಹಾಕುತ್ತಿರುವುದು ಹಳೇ ಸುದ್ದಿ. ಆದರೆ ಈಗ ಸೈಬರ್‌ ಕಳ್ಳರು ಬ್ಯಾಂಕ್‌ ಖಾತೆಯನ್ನೇ ಬಾಡಿಗೆಗೆ (Renting Bank Accounts) ಪಡೆದು ವಂಚನೆ ಎಸಗುತ್ತಿರುವ ಶಾಕಿಂಗ್‌ ವಿಚಾರ ಬೆಳಕಿಗೆ ಬಂದಿದೆ.

ಸೈಬರ್ ವಂಚಕರು ಬ್ಯಾಂಕ್ ಖಾತೆಗಳನ್ನು ಬಾಡಿಗೆ ನೀಡುವಂತೆ ಯುವಕರಿಗೆ ಆಮಿಷವೊಡ್ಡುವ ಪ್ರಕರಣಗಳು ಗೋವಾ ಪೊಲೀಸರ (Goa Police) ತನಿಖೆಯಿಂದ ಬಯಲಾಗಿದೆ.

21 ವರ್ಷದ ಯುವಕ ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದ. ಹೆಚ್ಚುವರಿ ಹಣ ಗಳಿಸಲು ಯುವಕ ತನ್ನ ಬ್ಯಾಂಕ್ ಖಾತೆಯನ್ನು ಬಾಡಿಗೆ ನೀಡಿದ್ದಾನೆ. ಮತ್ತಷ್ಟು ತನಿಖೆಗೆ ಇಳಿದಾಗ ಅನೇಕ ನಿರುದ್ಯೋಗಿ ಯುವಕರು ತಮ್ಮ ಬ್ಯಾಂಕ್ ಖಾತೆಗಳನ್ನು ಸೈಬರ್ ಅಪರಾಧಿಗಳಿಗೆ ಹೆಚ್ಚುವರಿ ಹಣಕ್ಕೆ ಬಾಡಿಗೆಗೆ ನೀಡುತ್ತಿರುವ ವಿಚಾರ ಗೊತ್ತಾಗಿದೆ ಗೋವಾ ಸೈಬರ್‌ ಕ್ರೈಂ ಪೊಲೀಸ್‌ ಇನ್ಸ್‌ಪೆಕ್ಟರ್‌ ದೀಪಕ್‌ ಪಡ್ನೇಕರ್‌ ತಿಳಿಸಿದ್ದಾರೆ.

ಸ್ನೇಹಿತರ ಮೂಲಕ ಸಂಪರ್ಕ:
ವಂಚಕರು ಸಾಮಾನ್ಯ ಸ್ನೇಹಿತರ ಮೂಲಕ ಯುವಕರನ್ನು ಸಂಪರ್ಕಿಸುತ್ತಾರೆ. ಅವರು ಬ್ಯಾಂಕ್ ಖಾತೆಯನ್ನು ಬಾಡಿಗೆಗೆ ನೀಡಲು ಸಿದ್ಧರಿದ್ದರೆ ಅವರಿಗೆ ಹಣವನ್ನು ನೀಡುತ್ತಾರೆ. ಬಾಡಿಗೆಗೆ ನೀಡುವ ವ್ಯಕ್ತಿಯ ಖಾತೆಯಿಂದ 1 ಲಕ್ಷ ರೂಪಾಯಿ ಮೌಲ್ಯದ ಪ್ರತಿ ವಹಿವಾಟು ನಡೆದರೆ ಆತನಿಗೆ 1,000 ರೂ. ಕಮಿಷನ್‌ ನೀಡುತ್ತಾರೆ. ಇದನ್ನೂ ಓದಿ: ಬಿಯರ್ ಬಾಟಲಿಯಿಂದ ಹಲ್ಲೆಗೈದು ಎಸ್ಕೇಪ್ ಆಗಲು ಯತ್ನ – ಆರೋಪಿ ಕಾಲಿಗೆ ಗುಂಡೇಟು

More Read

ಪ್ರಿಯಾಂಕ್ ಖರ್ಗೆ V/s ಆರ್‌.ಅಶೋಕ್‌ ಮಧ್ಯೆ ಟ್ವೀಟ್ ವಾರ್‌ – ವೈಯಕ್ತಿಕ ಮಟ್ಟಕ್ಕೆ ತಿರುಗಿದ ಫೈಟ್‌
ವಿಷ್ಣು ಸಮಾಧಿ ಸ್ಥಳವನ್ನು ಕಲಾಗ್ರಾಮವನ್ನಾಗಿ ಮಾಡಿ – ಸಿಎಂಗೆ ಶೋಭಾ ಕರಂದ್ಲಾಜೆ ಪತ್ರ

ವಂಚಕರು ಚೆಕ್ ಬುಕ್‌ನಲ್ಲಿ ಸಹಿ ಸೇರಿದಂತೆ ಬ್ಯಾಂಕ್ ಖಾತೆಯ ಎಲ್ಲಾ ಸಂಬಂಧಿತ ವಿವರಗಳು ಸರಿಯಾಗಿದೆಯೇ ಎಂಬುದನ್ನು ಖಚಿತ ಪಡಿಸಿ ಕೃತ್ಯ ಆರಂಭಿಸುತ್ತಾರೆ.

ವಂಚಕರು ಬ್ಯಾಂಕ್ ಖಾತೆಯಲ್ಲಿ ಠೇವಣಿ ಮಾಡಿದ ಹಣವನ್ನು ಹಿಂಪಡೆಯಲು ಖಾತೆದಾರರನ್ನು ಕೇಳುತ್ತಾರೆ. ಮೊತ್ತವನ್ನು ಹಿಂಪಡೆದ ನಂತರ ಬ್ಯಾಂಕ್ ಖಾತೆದಾರನು ತನ್ನ ಕಮಿಷನ್ ತೆಗೆದುಕೊಂಡು ಉಳಿದ ಮೊತ್ತವನ್ನು ವಂಚಕರಿಗೆ ಪಾವತಿಸಬೇಕಾಗುತ್ತದೆ.

ಬೆಳಕಿಗೆ ಬಂದಿದ್ದು ಹೇಗೆ?
ವ್ಯಕ್ತಿಯೊಬ್ಬರು ಆನ್‌ಲೈನ್‌ ಟ್ರೇಡಿಂಗ್‌ ಮೂಲಕ ಸುಮಾರು 45 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದರು. ಯಾವ ಖಾತೆಗೆ ಈ ಹಣ ಜಮೆಯಾಗಿದೆ ಎಂಬುದನ್ನು ಪತ್ತೆ ಹಚ್ಚಿದ್ದಾಗ 20 ರಿಂದ 25 ವರ್ಷದ ಯುವಕರು ತಮ್ಮ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ  ಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ತಮ್ಮ ಖಾತೆಗೆ ಯಾರು ಅಥವಾ ಯಾವ ಸ್ಥಳದಿಂದ ಯಾರು ಹಣವನ್ನು ಜಮೆ ಮಾಡುತ್ತಾರೆ ಎಂಬ ಯಾವುದೇ ಪೂರ್ವಾಪರ ವಿಚಾರ ತಿಳಿದಿರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 

Share This Article
Facebook Whatsapp Whatsapp Telegram
Previous Article ಬಿಯರ್ ಬಾಟಲಿಯಿಂದ ಹಲ್ಲೆಗೈದು ಎಸ್ಕೇಪ್ ಆಗಲು ಯತ್ನ – ಆರೋಪಿ ಕಾಲಿಗೆ ಗುಂಡೇಟು
Next Article ದೀಪಿಕಾ ಮಗು ಸಿನಿಮಾ ಮಾಡಲಿದೆ- ಭವಿಷ್ಯ ನುಡಿದ ಕಮಲ್ ಹಾಸನ್

Popular News

ಮುಸ್ಲಿಂ ಯುವತಿಯರನ್ನ ಮದ್ವೆಯಾದ್ರೆ 5 ಲಕ್ಷ: ಯತ್ನಾಳ್‌ ಘೋಷಣೆ
ವ್ಹೀಲ್‌ಚೇರ್‌ನಲ್ಲಿ ಪಬ್ಲಿಕ್‌ ಟಿವಿ ʻವಿದ್ಯಾಮಂದಿರʼಕ್ಕೆ ಬಂದು ಮಾಹಿತಿ ಪಡೆದ ವಿದ್ಯಾರ್ಥಿ
Public TVPublic TV