ಪಾನ್‌ಕಾರ್ಡ್ ಅಪ್ಡೇಟ್ ಮಾಡ್ಬೇಕು ಅಂತಾ ಕರೆ – ಲಿಂಕ್ ಒತ್ತಿದ ಪೊಲೀಸಪ್ಪನ 73 ಸಾವಿರ ಗುಳುಂ!

Public TV
1 Min Read

ಬೆಂಗಳೂರು: ಸೈಬರ್ ಕಳ್ಳರಿಗೆ (Cyber Crime) ಕಾಸೊಂದೇ ಮುಖ್ಯ. ಆತ ಯಾರ ಅಕೌಂಟ್‌ಗೆ ಕನ್ನ ಹಾಕ್ತಿದ್ದೀನಿ ಅನ್ನೋದನ್ನೂ ನೋಡಲ್ಲ. ಇಲ್ಲಿ ಸೈಬರ್‌ ಕಳ್ಳನೊಬ್ಬ ಪೊಲೀಸಪ್ಪನಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ.

ಅದೆಲ್ಲೊ ಕೂತ್ಕೊಂಡು ಜನರ ಅಕೌಂಟ್‌ಗೆ ಕನ್ನ ಹಾಕುವ ಈ ಸೈಬರ್ ವಂಚಕರನ್ನ ತಡೆಯೋದು ಪೊಲೀಸರಿಗೆ ಕಷ್ಟವಾಗಿದೆ. ಬಡವನಾ ಬಲ್ಲಿದನಾ, ಶ್ರೀಮಂತನಾ ಅಂತಾನು ನೋಡದೆ ಅಕೌಂಟ್‌ಗೆ ಕನ್ನ ಹಾಕ್ತಿದ್ದಾರೆ ಈ ಸೈಬರ್ ಚೋರರು. ಇದನ್ನೂ ಓದಿ: Cyber Crimeː 4 ವರ್ಷಗಳಲ್ಲಿ ರಾಜ್ಯಕ್ಕೆ 722 ಕೋಟಿ ನಷ್ಟ!

ದೂರು ಪಡೆದು ಸೈಬರ್ ವಂಚಕರನ್ನ ಹಿಡಿಯಬೇಕಾದ ಪೊಲೀಸರೇ ಹಣ ಕಳೆದುಕೊಂಡಿರೊ ಘಟನೆ ನಡೆದಿದೆ. ಸಿಎಆರ್ ಪೇದೆಯಾಗಿರುವ ಭದ್ರಯ್ಯ ಎಂಬವರಿಗೆ ಕರೆಯೊಂದು ಬಂದಿದೆ. ನಾವು ಎಸ್‌ಬಿಐ ಕಸ್ಟಮರ್ ಕೇರ್‌ನಿಂದ ಮಾತಾಡ್ತಿದ್ದೇವೆ. ನಿಮ್ಮ ಎಸ್‌ಬಿಐ ಅಕೌಂಟ್ ಬ್ಲಾಕ್ ಆಗಿದೆ. ಪಾನ್‌ಕಾರ್ಡ್ ಅಪ್ಡೇಟ್ ಮಾಡ್ಬೇಕು. ನಿಮಗೆ ಒಂದು ಲಿಂಕ್ ಕಳಿಸಲಾಗಿದೆ ಆ ಲಿಂಕ್ ಕ್ಲಿಕ್ ಮಾಡಿ ಎಂದಿದ್ದ ವಂಚಕ. ಇದನ್ನ ಅರಿಯದ ಪೊಲೀಸ್‌ ಮೊಬೈಲ್‌ಗೆ ಬಂದ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಎರಡೂ ಅಕೌಂಟ್‌ನಲ್ಲಿದ್ದ 73 ಸಾವಿರ ಹಣ ಕ್ಷಣಾರ್ಧದಲ್ಲಿ ಡೆಬಿಟ್ ಆಗೋಗಿದೆ. ಎರಡೂ ಅಕೌಂಟ್ ಗು ಒಂದೇ ನಂಬರ್ ಕೊಟ್ಟಿದ್ದರಿಂದ ಅಟ್ ಎ ಟೈಮ್ ಎರಡರಲ್ಲೂ ಹಣ ಎಗರಿಸಿದ್ದಾರೆ.

ಈ ಸಂಬಂಧ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪೇದೆ ಭದ್ರಯ್ಯ ದೂರು ನೀಡಿದ್ದು, ವಂಚಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸೈಬರ್ ವಂಚಕರಿಂದ ಆದಷ್ಟೂ ಜಾಗರೂಕರಾಗಿರಿ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ

Share This Article
Leave a Comment

Leave a Reply

Your email address will not be published. Required fields are marked *