ನಟ ವಿಕ್ಕಿ ಕೌಶಲ್ ಬೆನ್ನಿನಲ್ಲಿ ಗಾಯ- ನಿಜವಾಗಿ ಆಗಿದ್ದೇನು?

Public TV
2 Min Read

ಮುಂಬೈ: ಬಾಲಿವುಡ್ ನಟ ವಿಕ್ಕಿ ಕೌಶಲ್ ಬೆನ್ನಿನ ಮೇಲೆ ಹಲ್ಲೆ ಮಾಡಿದ ರೀತಿ ಗಾಯವಾಗಿದ್ದು, ಅದನ್ನು ಇನ್‍ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಏನಿದು ವಿಕ್ಕಿ ಮೇಲೆ ಹಲ್ಲೆ ನಡೆಯಿತಾ ಎಂದು ಹುಬ್ಬೇರಿಸುತ್ತಿದ್ದೀರಾ? ಅವರ ಮೇಲೆ ಹಲ್ಲೆಯಾಗಿಲ್ಲ. ಆದರೂ ಅವರ ಬೆನ್ನಿನ ಮೇಲೆ ಹಲ್ಲೆ ಮಾಡಿದ ರೀತಿ ಗಾಯಗಳಾಗಿದ್ದು, ಅದು ಮೇಕಪ್ ಅಷ್ಟೆ. ಇದು ಮೇಕಪ್ ಕಲಾವಿದ ಪೀಟರ್ ಗೋರ್ಶೆನಿನ್ ಅವರ ಕೈಚಳಕ. ಇದನ್ನು ನೋಡಿದರೆ ನಿಜವಾಗಿ ಅವರಿಗೆ ಗಾಯವಾಗಿದೆ ಎಂದು ಕಾಣಿಸುತ್ತೆ. ಈ ಫೋಟೋವನ್ನು ಶೇರ್ ಮಾಡಿದ ವಿಕ್ಕಿ, ‘ಕಟ್ ಮಾಡದ ಕಟ್ ಗಳು’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ವಿಕ್ಕಿ ಸರ್ದಾರ್‍ಉಧಮ್ ಎಂದು ಸಿನಿಮಾದ ಹ್ಯಾಶ್‍ಟ್ಯಾಗ್ ಅನ್ನು ಸೇರಿಸಿದ್ದಾರೆ. ಇದನ್ನೂ ಓದಿ: ತಿಂಡಿ ಪ್ರಿಯರಿಗೆ ಹೊಸದಾಗಿ ಸೇರ್ಪಡೆಯಾಯಿತು ಬಾಹುಬಲಿ ಗೋಲ್ಡ್ ಮೊಮೊ

 

View this post on Instagram

 

A post shared by Vicky Kaushal (@vickykaushal09)

ಈ ರೀತಿಯ ಮೇಕಪ್ ಮಾಡಿದ್ದು, ಸರ್ದಾರ್ ಉಧಮ್ ಚಿತ್ರಕ್ಕಾಗಿ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಉಧಮ್ ಸಿಂಗ್ ಆಗಿ ಕಾಣಿಸಿಕೊಂಡಿದ್ದು, 1919 ರಲ್ಲಿ ಅಮೃತಸರದಲ್ಲಿ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಳ್ಳಲು ಪಂಜಾಬ್ ನ ಮಾಜಿ ಲೆಫ್ಟಿನೆಂಟ್ ಗವರ್ನರ್ ಮೈಕೆಲ್ ಒಡೇಯರ್ ಅವರನ್ನು ಹತ್ಯೆ ಮಾಡಿದರು. ಈ ಹಿನ್ನೆಲೆ ಆರೋಪದ ಮೇಲೆ ಉಧಮ್ ಸಿಂಗ್ ನನ್ನು ವಿಚಾರಣೆಗೆ ಒಳಪಡಿಸಿ, ಜುಲೈ 1940 ರಲ್ಲಿ ಗಲ್ಲಿಗೇರಿಸಲಾಯಿತು. ಇದನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾದ ಕಥೆಯನ್ನು ನಿರೂಪಿಸಲಾಗಿದೆ.

 

View this post on Instagram

 

A post shared by Vicky Kaushal (@vickykaushal09)

ಚಿತ್ರದಲ್ಲಿ ನನ್ನ ಮುಖದ ಮೇಲೆ 13 ಹೊಲಿಗೆಗಳನ್ನು ಹಾಕಲಾಗಿದೆ. ಅದು ನಿಜವಾದ ಗಾಯವಾಗಿದ್ದು, ಚಿತ್ರೀಕರಣದ ಸಮಯದಲ್ಲಿ ನನ್ನ ಮುಖದ ಮೇಲೆ ಗಾಯವಾಗಿತ್ತು ಎಂದು ಸುದ್ದಿಗೊಷ್ಠಿಯಲ್ಲಿ ಹೇಳಿಕೊಂಡಿದ್ದರು. ಈ ಚಿತ್ರವನ್ನು ಓಟಿಟಿಯಲ್ಲಿ ರಿಲೀಸ್ ಮಾಡಿದ್ದು, ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಈ ಮೂಲಕ ವಿಕ್ಕಿಗೆ ಅಭಿಮಾನಿ ಬಳಗ ಹೆಚ್ಚಾಗಿದೆ. ಈ ಚಿತ್ರಕ್ಕೆ ಶೂಜಿತ್ ಸಿರ್ಕಾರ್ ಆಕ್ಷನ್ ಕಟ್ ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಜೊತೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್‍ಡಿಕೆ

 

View this post on Instagram

 

A post shared by Vicky Kaushal (@vickykaushal09)

Share This Article
Leave a Comment

Leave a Reply

Your email address will not be published. Required fields are marked *