ಬೆಂಗಳೂರು: ಗ್ರಾಹಕನೊಬ್ಬ ಕ್ಯಾಬ್ ಡ್ರೈವರ್ ಮೇಲೆ ಹಲ್ಲೆ ನಡೆಸಿ ನಡು ರಸ್ತೆಯಲ್ಲಿ ಹುಚ್ಚಾಟ ನಡೆಸಿದ ಘಟನೆ ಮೇಕ್ರಿ ಸರ್ಕಲ್ (Mekhri Circle) ಬಳಿ ನಡೆದಿದೆ.
ಸೂಪರ್ ಮಾರ್ಕೆಟ್‌ನಲ್ಲಿ ಮ್ಯಾನೇಜರ್ ಆಗಿದ್ದ ಸಂತೋಷ್ ಬದರಿನಾಥ ತೆರಳಲು ಮೈಸೂರಿನಿಂದ (Mysuru) ಬೆಂಗಳೂರು ವಿಮಾನ ನಿಲ್ದಾಣಕ್ಕೆ (Bengaluru Airport) ಕ್ಯಾಬ್ ಬುಕ್ ಮಾಡಿದ್ದ. ಇದನ್ನೂ ಓದಿ: ಉದ್ಯಮಿಯಿಂದ ಲೈಂಗಿಕ ಕಿರುಕುಳ ಆರೋಪ ಕೇಸ್ – ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನಟಿಗೆ ನೋಟಿಸ್
ಮೆಕ್ರಿಸರ್ಕಲ್ ಬಳಿ ಚಾಲಕನ (Driver) ಜೊತೆ ಮಾತನಾಡುತ್ತಾ ಜಗಳ ಮಾಡಿದ್ದಾನೆ. ಬಳಿಕ ನಡು ರಸ್ತೆಯಲ್ಲಿ ಕಾರಿನ ಮೇಲೆ ಹತ್ತಿ ಹುಚ್ಚನಂತೆ ವರ್ತಿಸಿದ್ದಾನೆ. ಟ್ರಾಫಿಕ್ ಪೊಲೀಸರಿಂದ ಸಮಾಧಾನ ಮಾಡಲು ಮುಂದಾದಾಗ ಅವರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಹುಚ್ಚಾಟ ಜೋರಾಗುತ್ತಿದ್ದಂತೆ ಬೇರೆ ಯಾರ ಮೇಲೂ ಹಲ್ಲೆ ಮಾಡಬಾರದು ಎಂದು ಪೊಲೀಸರು ಕೈ ಕಾಲು ಕಟ್ಟಿ ರಸ್ತೆಯಲ್ಲಿ ಮಲಗಿಸಿದ್ದಾರೆ.
ಸಂತೋಷ್ ಆರು ತಿಂಗಳಿಂದ ಕೆಲಸ ಕಳೆದುಕೊಂಡು ಮಾನಸಿಕ ಅಸ್ವಸ್ಥನಾಗಿ ವರ್ತಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ದಾಂಪತ್ಯ ಜೀವನದಲ್ಲೂ ಸಮಸ್ಯೆ ಹೊಂದಿದ್ದ. ಸದಾಶಿವನಗರ ಪೊಲೀಸರು ಕೈಕಾಲು ಕಟ್ಟಿ ಸಂತೋಷನನ್ನು ಈಗ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

