ಅಂಗಡಿಯಲ್ಲಿದ್ದ ಸೀರೆ ಪತ್ನಿಗೆ ಇಷ್ಟವಾಗಿಲ್ಲವೆಂದು ಮಾಲೀಕನ ಮೇಲೆ ಪತಿ ಹಲ್ಲೆ!

Public TV
1 Min Read

ಕಾರವಾರ: ಅಂಗಡಿಯಲ್ಲಿ ಕೊಂಡ ಸೀರೆ ಪತ್ನಿಗೆ ಇಷ್ಟವಾಗದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕನಿಗೆ ಗ್ರಾಹಕ ಸ್ನೇಹಿತನೊಂದಿಗೆ ಸೇರಿ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

ಶಿರಸಿಯ ಮೊಹಮ್ಮದ್ ಹಲ್ಲೆ ಮಾಡಿದ ವ್ಯಕ್ತಿಂ. ಬಲರಾಮ್ ಹಲ್ಲೆಗೊಳಗಾದ ಅಂಗಡಿ ಮಾಲೀಕ. ಶಿರಸಿಯ ಸಿಪಿ ಬಜಾರದಲ್ಲಿರುವ ಸಾಗರ ಬಟ್ಟೆ ಅಂಗಡಿಯಲ್ಲಿ ಮೊಹಮ್ಮದ್ ಪತ್ನಿಗೆಂದು ಸೀರೆ ತೆಗೆದುಕೊಂಡು ಹೊಗಿದ್ದನು. ಆ ಸೀರೆ ಪತ್ನಿಗೆ ಇಷ್ಟ ಆಗದ ಹಿನ್ನೆಲೆ ಅಂಗಡಿಗೆ ಪುನಃ ಬಂದು ಸೀರೆ ನೋಡಿದ್ದಾನೆ. ಆದರೆ ಅಂಗಡಿಯಲ್ಲಿರುವ ಯಾವುದೇ ಸೀರೆ ಪತ್ನಿಗೆ ಇಷ್ಟ ಆಗಲಿಲ್ಲ. ಹೀಗಾಗಿ ಸಿಟ್ಟುಗೊಂಡ ಮೊಹಮ್ಮದ್ ಒಳ್ಳೆ ಬಟ್ಟೆ ಇಡೋಕೆ ಆಗಲ್ವಾ ಅಂತಾ ಅವಾಚ್ಯ ಪದ ಬಳಕೆ ಮಾಡಿದ್ದ. ಇದನ್ನೂ ಓದಿ: ಬಟ್ಟೆ ಕ್ಲೀನ್ ಇಲ್ಲವೆಂದು ವ್ಯಕ್ತಿಯನ್ನು ತಡೆದ ಮೆಟ್ರೋ ಸಿಬ್ಬಂದಿ- ಜೊತೆಗೆ ಕರೆದೊಯ್ದ ಸಹ ಪ್ರಯಾಣಿಕರು

ಅಂಗಡಿ ಮಾಲೀಕ, ನಿನ್ನ ಹಣ ರಿಟರ್ನ್ ಕೊಡ್ತೀನಿ, ತಗೊಂಡು ಹೋಗು ಬೈಬೇಡ ಎಂದಿದ್ದನು. ನಂಗೆ ಹಣ ಏನ್ ಕೊಡ್ತಿಯಾ ಸರಿಯಾಗಿ ಬಟ್ಟೆ ಇಡೋಕೆ ಆಗಲ್ವಾ ಎಂದು ತಕರಾರು ತೆಗೆದು ಹೊರಗಡೆಯಿಂದ ಸರ್ಪರಾಜ್ ಎಂಬ ಗೆಳೆಯನನ್ನು ಕರೆಸಿ ಅಂಗಡಿ ಮಾಲೀಕ ಹಾಗೂ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾನೆ.

ಈ ಘಟನೆ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಘಟನೆ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article