ಆರೋಗ್ಯಕರವಾದ ಜೀರಿಗೆ ರಸಂ ಸುಲಭ ವಿಧಾನದಲ್ಲಿ ಮಾಡಿ ಸವಿಯಿರಿ

Public TV
2 Min Read

ಕ್ಷಿಣ ಭಾರತದ ಕಡೆ ಅದರಲ್ಲೂ ಕರ್ನಾಟಕದಲ್ಲಿ ರಸಂ ಅಥವಾ ಸಾರು ಇಲ್ಲದಿದ್ದರೆ ಊಟ ಪೂರ್ತಿಯಾಗುವುದಿಲ್ಲ. ಅದರಲ್ಲಿಯೂ ಜೀರಿಗೆ ಸಾರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎಲ್ಲರಿಗೂ ಬಹಳ ಇಷ್ಟ. ನೀವೂ ಕೂಡ ಒಮ್ಮೆ ಮಾಡಿ ರುಚಿ ನೋಡಿದರೆ ಮತ್ತೆ ಮತ್ತೆ ಈ ರೆಸಿಪಿನ ಮಾಡುತ್ತೀರಿ. ಇದನ್ನು ಮಾಡುವುದು ತುಂಬಾನೇ ಸುಲಭ. ಬಿಸಿ ಬಿಸಿ ಅನ್ನದ ಜೊತೆ ಬಡಿಸಿ ತಿನ್ನಲು ಜೀರಿಗೆ ರಸಂ ತುಂಬಾ ರುಚಿ. ಅಷ್ಟೇ ಅಲ್ಲ ಇದನ್ನು ಸೂಪ್ ತರಹ ಕುಡಿಯಲೂ ಬಹುದು. ಒಮ್ಮೆ ಮಾಡಿ ನೋಡಿ.

ಬೇಕಾಗಿರುವ ಪದಾರ್ಥಗಳು:
* ಒಣ ಮೆಣಸಿನಕಾಯಿ – 4 ರಿಂದ 5
* ಎಣ್ಣೆ – 2 ದೊಡ್ಡ ಚಮಚ
* ಜೀರಿಗೆ – 2 ಚಮಚ
* ಬೇಯಿಸಿದ ತೊಗರಿ ಬೇಳೆ – 2 ಕಪ್
* ಟೊಮೆಟೊ – 1 ಕಪ್
* ಅರಶಿನ ಪುಡಿ – ಅರ್ಧ ಚಮಚ
* ಉಪ್ಪು – ಅರ್ಧ ಚಮಚ
* ನೀರು – ಬೇಕಾದಷ್ಟು(4 ರಿಂದ 5 ಕಪ್)

* ತುಪ್ಪ – 1 ಚಮಚ
* ಸಾಸಿವೆ – 1 ಚಮಚ
* ಕರಿಬೇವು – 1 ದಂಟು
* ಇಂಗು – ಒಂದು ಚಿಟಿಕೆ
* ಕೊತ್ತಂಬರಿ ಸೊಪ್ಪು – 1 ಕಪ್

ಮಾಡುವ ವಿಧಾನ:
* ಹುರಿದ ಒಣ ಮೆಣಸಿನಕಾಯಿ ಹಾಗೂ ಜೀರಿಗೆಯನ್ನು ಒಂದು ಪಾತ್ರೆಯಲ್ಲಿ ಗರಿ-ಗರಿಯಾಗುವವರೆಗೆ ಹುರಿಯಿರಿ.
* ಹುರಿದ ಮೆಣಸಿನಕಾಯಿ ಹಾಗೂ ಜೀರಿಗೆಯನ್ನು ಬೇಯಿಸಿದ ತೊಗರಿ ಬೇಳೆಯ ಜೊತೆ ನುಣ್ಣಗೆ ರುಬ್ಬಿಕೊಳ್ಳಿ.
* ಎಣ್ಣೆಯನ್ನು ಬಿಸಿ ಮಾಡಿ ಟೊಮೆಟೊ ಹಾಕಿ ಸಣ್ಣ ಉರಿಯಲ್ಲಿ ಅರಶಿನ ಪುಡಿ ಹಾಗೂ ಉಪ್ಪನ್ನು ಹಾಕಿ ಬೇಯಿಸಿ.
* ಅದಕ್ಕೆ ತಯಾರಿಸಿದ ಮೆಣಸಿನಕಾಯಿ-ಜೀರಿಗೆ-ಬೇಳೆ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ.


* ನೀರನ್ನು ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕಲಕಿ. ಈ ಸಾರನ್ನು ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲದವರೆಗೆ ಕುದಿಸಿ.
* ಒಗ್ಗರಣೆಗೆ ಸ್ವಲ್ಪ ತುಪ್ಪದಲ್ಲಿ ಸಾಸಿವೆ ಹಾಕಿ ಕರಿಬೇವಿನ ಎಲೆ ಮತ್ತು ಇಂಗು ಹಾಕಿ ಹುರಿಯಿರಿ. ಹುರಿದದ್ದನ್ನು ಸಾರಿಗೆ ಹಾಕಿ ಚೆನ್ನಾಗಿ ಕಲಕಿ. ನಂತರ ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಕಿ.

– ಈ ಸಾರನ್ನು ಬಿಸಿ-ಬಿಸಿ ಅನ್ನದ ಮತ್ತು ಹಪ್ಪಳದ ಜೊತೆ ಬಡಿಸಿ.

Share This Article
Leave a Comment

Leave a Reply

Your email address will not be published. Required fields are marked *