ಪ್ರಧಾನಿ – ಸಿಎಂ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡೋಕಾಗಲ್ಲ: ಸಿ.ಟಿ ರವಿ

Public TV
1 Min Read

– ರಾಜ್ಯ ಸರ್ಕಾರ ಮೊದಲು ನೆರೆ ಪರಿಹಾರ ಕೊಡಬೇಕಿತ್ತು

ಬೆಂಗಳೂರು: ಪ್ರಧಾನಿ ಮತ್ತು ಮುಖ್ಯಮಂತ್ರಿ ಹುದ್ದೆ ಸಾಂವಿಧಾನಿಕವಾದದ್ದು. ಅದ್ದರಿಂದ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಭೇಟಿ, ಮಾತುಕತೆಯನ್ನು ರಾಜಕೀಯ ದೃಷ್ಟಿಯಿಂದ ನೋಡೋಕಾಗಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ (C.T Ravi) ಹೇಳಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸಿದರು. ಈ ವೇಳೆ, ರಾಜ್ಯ ಸರ್ಕಾರ ಮೊದಲು ನೆರೆ ಪರಿಹಾರ ನೀಡಬೇಕಿತ್ತು. ಬಳಿಕ ಕೇಂದ್ರದಿಂದ ಮತ್ತೆ ಪರಿಹಾರ ಕೇಳಬೇಕಿತ್ತು. ನೆರೆ ಪರಿಹಾರವಾಗಿ ರಾಜ್ಯದ ಬೊಕ್ಕಸದಿಂದ ಹಣ ನೀಡಿ, ಬಳಿಕ ಕೇಂದ್ರದಿಂದ ಕೇಳುವ ವಾಡಿಕೆಯನ್ನು ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು ಮಾಡಿದ್ದಾರೆ. ಇದನ್ನೂ ಓದಿ: ಸಂಪುಟ ವಿಸ್ತರಣೆಯಾದರೆ ಡಿ.ಕೆ.ಶಿವಕುಮಾರ್‌ಗೆ ಪಂಗನಾಮ: ಆರ್‌.ಅಶೋಕ್

ಬೇರೆ ಬೇರೆ ಮುಖ್ಯಮಂತ್ರಿಗಳೂ ಇದನ್ನೇ ಮಾಡಿದ್ದರು. ಕೇಂದ್ರ ಎನ್‍ಡಿಆರ್‍ಎಫ್ ನಿಯಮದಡಿ ಸಮೀಕ್ಷೆ ಮಾಡಿ ಕೊಡಬೇಕಾದುದನ್ನು ಕೊಟ್ಟೇ ಕೊಡುತ್ತದೆ. ಅದಕ್ಕೂ ಮೊದಲು ರಾಜ್ಯದ ಬೊಕ್ಕಸದಿಂದ ಬಿಡುಗಡೆ ಮಾಡುವುದು ಎಲ್ಲ ಮುಖ್ಯಮಂತ್ರಿಗಳು, ಸರ್ಕಾರ ಪಾಲಿಸಿಕೊಂಡು ಬಂದ ಪದ್ಧತಿ. ಅದನ್ನು ಮುಖ್ಯಮಂತ್ರಿಗಳು ಮಾಡಬೇಕಿತ್ತು ಎಂದರು.

ಕಬ್ಬಿನ ವಿಚಾರದಲ್ಲಿ ಕಬ್ಬು ತುಂಬಿಕೊಂಡ ನೂರಾರು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಾಕಿದ್ದರು. ಯಾರು ಬೆಂಕಿ ಹಾಕಿದ್ದು? ಯಾರ ಹಿತಾಸಕ್ತಿ ಇದರ ಹಿಂದಿದೆ? ಮಾತುಕತೆ ವೇಳೆ ರೈತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರೂ ನಿಮ್ಮ ತೀರ್ಮಾನ ಒಪ್ಪದಿದ್ದರೆ ನಿಮ್ಮ ಏಕಪಕ್ಷೀಯ ತೀರ್ಮಾನಕ್ಕೆ ಏನು ಬೆಲೆ? ಸರ್ಕಾರ ದಪ್ಪ ಚರ್ಮದಿಂದ ರೈತರು ಇನ್ನೂ ಬೀದಿಯಲ್ಲೇ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಾಳೆ ಕರ್ನಾಟಕದಲ್ಲಿ ಕೈಗೆಟುಕುವ ದರದಲ್ಲಿ AI ಕಂಪ್ಯೂಟರ್ KEO ಲಾಂಚ್: ಪ್ರಿಯಾಂಕ್ ಖರ್ಗೆ

Share This Article